ಮಂಡ್ಯ ಜಿಲ್ಲಾಡಳಿತದಿಂದ ವಾಕ್-ಇನ್ ಕೋವಿಡ್ -19 ಟೆಸ್ಟ್!

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ಪರಿಶೀಲಿಸಲು  ಮಂಡ್ಯ ಜಿಲ್ಲಾಡಳಿತವು ಸ್ವಾಬ್ ಸಂಗ್ರಹ
ಕೇಂದ್ರಗಳಲ್ಲಿ ವಾಕ್-ಇನ್- ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ.

Published: 10th August 2020 07:59 AM  |   Last Updated: 10th August 2020 12:53 PM   |  A+A-


Corona_Casual_image1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಮಂಡ್ಯ: ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ಪರಿಶೀಲಿಸಲು  ಮಂಡ್ಯ ಜಿಲ್ಲಾಡಳಿತವು ಸ್ವಾಬ್ ಸಂಗ್ರಹ
ಕೇಂದ್ರಗಳಲ್ಲಿ ವಾಕ್-ಇನ್- ಕೋವಿಡ್ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ.

ಮಂಡ್ಯದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಶನಿವಾರ 21 ಜನ ಸಾವನ್ನಪ್ಪಿದ್ದು,
ಸಕ್ರಿಯ ಪ್ರಕರಣಗಳ ಸಂಖ್ಯೆ 1, 159 ಆಗಿದೆ.

ಮಂಡ್ಯ ನಗರದಲ್ಲಿ ಪಾಸಿಟವ್ ಪ್ರಕರಣಗಳು ಹೆಚ್ಚಿದ್ದು, ಜಿಲ್ಲೆ ಇತರ ಕಡೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿವೆ. ಆದರೆ, ಇದು ನಗರದ
ವ್ಯಾಪ್ತಿಯಲ್ಲಿನ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಕ್ -ಇನ್ ಟೆಸ್ಟಿಂಗ್ ಸೌಕರ್ಯದಿಂದ ಹೆಚ್ಚು ಜನರಿಂದ ಹೆಚ್ಚು ಪರೀಕ್ಷೆಗಳನ್ನು ಮಾಡಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ
ಡಾ.ಹೆಚ್. ಪಿ. ಮಂಚೇಗೌಡ ಹೇಳಿದರು. ಜಿಲ್ಲೆಯಲ್ಲಿ ಸ್ವಾಬ್ ಸಂಗ್ರಹ ಕೇಂದ್ರಗಳನ್ನು ಹೆಚ್ಚಿಸಲು ಎದುರು ನೋಡಲಾಗುತ್ತಿದೆ. ಜನರು
ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಂಡ್ಯ ನಗರದಲ್ಲಿ ಪಾಸಿಟಿವ್ ದರ ಹೆಚ್ಚಾಗಿದ್ದು, 31 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ತಾಲೂಕ್ ಆಸ್ಪತ್ರೆಗಳ
ಹೊರತಾಗಿಯೂ ಸ್ವಾಬ್ ಮಾದರಿಗಳ ಸಂಗ್ರಹಕ್ಕಾಗಿ  8  ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ಮಂಡ್ಯ ಹಾಗೂ ಸುತ್ತಮುತ್ತಲಿನ ದುರ್ಬಲ ಜನರನ್ನು ಪರೀಕ್ಷಿಸಲು ಪಿಪಿಇ ಧರಿಸಿರುವ ಆರೋಗ್ಯ ಕಾರ್ಯಕರ್ತೆಯರು
ಮತ್ತು ಕ್ಷಿಪ್ರ ಪರೀಕ್ಷಾ ಸಾಧನಗಳನ್ನು  ಹೊಂದಿರುವ ಎರಡು ವ್ಯಾನ್ ಗಳನ್ನು ನಿಯೋಜಿಸಲು ಜಿಲ್ಲಾ ಆರೋಗ್ಯ ಇಲಾಖೆ
ಸಜ್ಜಾಗಿದೆ ಎಂದು ಡಿಹೆಚ್ ಒ ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp