ಆಕಾಶ್ ಆರ್ ಹಾಗೂ ಕುಟುಂಬ
ಆಕಾಶ್ ಆರ್ ಹಾಗೂ ಕುಟುಂಬ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸೆಕ್ಯೂರಿಟಿ ಗಾರ್ಡ್ ಪುತ್ರ ದಾವಣಗೆರೆ ಜಿಲ್ಲೆಗೆ ಟಾಪರ್

ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 623 ಅಂಕಗಳನ್ನು ಗಳಿಸುವ ಮೂಲಕ ಬಡತನದ ನಡುವೆಯೂ  ಕಠಿಣ ಅಧ್ಯಯನ ನಡೆಸಿ ಸೆಕ್ಯುರಿಟಿ ಗಾರ್ಡ್ ಓರ್ವನ ಪುತ್ರ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ಶಿಕ್ಷಣ ಪಡೆಯುವ್ವ ಇಚ್ಚಾಶಕ್ತಿ ಇದ್ದರೆ ಬಡತನವೂ ಅಡ್ಡಿಯಾಗದು ಎಂದು ತೋರಿಸಿದ್ದಾರೆ.

ದಾವಣಗೆರೆ: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 623 ಅಂಕಗಳನ್ನು ಗಳಿಸುವ ಮೂಲಕ ಬಡತನದ ನಡುವೆಯೂ  ಕಠಿಣ ಅಧ್ಯಯನ ನಡೆಸಿ ಸೆಕ್ಯುರಿಟಿ ಗಾರ್ಡ್ ಓರ್ವನ ಪುತ್ರ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ಶಿಕ್ಷಣ ಪಡೆಯುವ್ವ ಇಚ್ಚಾಶಕ್ತಿ ಇದ್ದರೆ ಬಡತನವೂ ಅಡ್ಡಿಯಾಗದು ಎಂದು ತೋರಿಸಿದ್ದಾರೆ.

ನಗರದ ಸಿದ್ದಗಂಗ ಪ್ರೌಢಶಾಲೆಯ  ಆಕಾಶ್ ಆರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 99.68 ಅಂಕಗಳನ್ನು ಗಳಿಸಿದ್ದಾರೆ. ಶಿಕ್ಷಣವು ಬಡತನ, ಸಿರಿತನ ನೋಡಿ ಸಿಕ್ಕುವುದಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ, ಆಕಾಶ್ ಕನ್ನಡದಲ್ಲಿ 124, ಇಂಗ್ಲಿಷ್ ಭಾಷೆಯಲ್ಲಿ  99, ಗಣಿತ, ವಿಜ್ಞಾನ, ಹಿಂದಿ ಮತ್ತು ಸಾಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಆಕಾಶ್ "ಸಮರ್ಪಣೆ ಮತ್ತು ಕಠಿಣ ಪರಿಶ್ರಮ ನನಗೆ ಈ ಸಾಧನೆ ಮಾಡಲು ಕಾರಣವಾಯಿತು" ಮತ್ತು ಭವಿಷ್ಯದಲ್ಲಿ ತಮ್ಮ ಕುಟುಂಬದ ಸಹಾಯಕ್ಕಾಗಿ ಸಾಫ್ಟ್‌ವೇರ್ ಎಂಜಿನಿಯರ್ ಆಗಲು ಬಯಸುತ್ತೇನೆ ಎಂದು ಹೇಳಿದರು. ಅವರ ತಂದೆ ರೇವಣಸಿದ್ದಪ್ಪ, ಸೆಕ್ಯುರಿಟಿ ಗಾರ್ಡ್ ಮತ್ತು ತಾಯಿ ಮಾಲಾ, ಹೂವಿನ ವ್ಯಾಪಾರಿಯಾಗಿದ್ದಾರೆ. 

ಲಾಕ್‌ಡೌನ್ ಅವಧಿಯಲ್ಲಿ ಅಧ್ಯಯನದಲ್ಲಿ ನಿರತರಾಗಿದ್ದರಿಂದ ಮಾರ್ಚ್-ಏಪ್ರಿಲ್‌ನಿಂದ ಜೂನ್-ಜುಲೈ ವರೆಗೆ ಪರೀಕ್ಷೆಗಳನ್ನು ಮುಂದೂಡಿಕೆಯಾಗಿದ್ದು ಅವರಿಗೆ ಯಾವ ಅಡ್ಡಿಯನ್ನು ಉಂಟು ಮಾಡಿಲ್ಲ, ಬದಲಿಗೆ - ಇದು ಅವರ ಗುರಿಯನ್ನು ಸಾಧಿಸಲು ಸಹಾಯ ಮಾಡಿತು.

ನಗರದ ಸೇಂಟ್ ಜಾನ್ಸ್ ಶಾಲೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಅವರ ತಂದೆ ರೇವಣಸಿದ್ದಪ್ಪ  ಅವರ ಸಂತಸಕ್ಕೆ ಪಾರವಿಲ್ಲ. "ಇದು ನನ್ನ ಜೀವನದಲ್ಲಿ ಒಂದು ಅಪರೂಪದ ಕ್ಷಣವಾಗಿದೆ, ನನ್ನ ಸಂತೋಷಕ್ಕೆ ಯಾವುದೇ ಮಿತಿಯಿಲ್ಲ ಮತ್ತು ನಾನು ಶಾಲಾ ಮುಖ್ಯೋಪಾಧ್ಯಾಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ." ಎಂದರು.

"ನಾನು ಯಾವುದೇ ಶಿಕ್ಷಣ ಪಡೆದವನಲ್ಲ, ನಾನು ನನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ ಮತ್ತು ನನ್ನ ಮಗನು ಅದೇ ಸಮಸ್ಯೆಯನ್ನು ಎದುರಿಸಬಾರದು ಎಂದು ನಿರ್ಧರಿಸಿದೆ, ಬದಲಿಗೆ ಅವನು ತನ್ನ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಶಿಕ್ಷಣ ಮತ್ತು ಜ್ಞಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.  ಭವಿಷ್ಯದಲ್ಲಿ ತನ್ನ ಮಗನ ಶಿಕ್ಷಣಕ್ಕಾಗಿ ಎಷ್ಟು ಹಣವನ್ನಾದರೂ  ಹಿಂಜರಿಯುವುದಿಲ್ಲ ಮತ್ತು ಅವರು ಅಧ್ಯಯನ ಮಾಡಲು ಆಯ್ಕೆಮಾಡುವ ಯಾವುದೇ ವಿಷಯವನ್ನು ಕಲಿಸಲು ನನ್ನ ಅನುಮತಿ ಇದೆ, " ರೇವಣಸಿದ್ದಪ್ಪ ಹೇಳಿದ್ದಾರೆ.

ಶಾಲೆಯ ನಿರ್ದೇಶಕ ಡಾ.ಜಯಂತ್ ಅವರು, ಶಾಲೆಯಿಂದ ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿಯಲ್ಲಿ ಅಗ್ರಸ್ಥಾನ ಪಡೆಯುತ್ತಿರುವುದು ಒಂದು ದೊಡ್ಡ ಸಾಧನೆಯಾಗಿದೆ ಮತ್ತು 2020 ನಮ್ಮ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವ ವರ್ಷವಾಗಿರುವುದರಿಂದ ಇನ್ನೂ ವಿಶೇಷವಾಗಿರಲಿದೆ ಎಂದರು. "ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವ ಹೊಂದಿದ್ದರೆ ಅವರು ಯಾವುದೇ ಸಾಧನೆ ಮಾಡಬಹುದು" ಎಂದು ಅವರು ಹೇಳಿದರು.

ಪರೀಕ್ಷೆ ಪಡೆದ 324 ವಿದ್ಯಾರ್ಥಿಗಳಲ್ಲಿ ಸುಮಾರು 321 ಮಂದಿ ಶಾಲೆಯಿಂದ ಉತ್ತೀರ್ಣರಾಗಿದ್ದಾರೆ. 120 ವಿದ್ಯಾರ್ಥಿಗಳು ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಜಸ್ಟಿನ್ ಡಿ ಸೋಜಾ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com