ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವೈದ್ಯರಿಗೆ ಕಿರುಕುಳ: ಕೋವಿಡ್ ವಾರಿಯರ್ಸ್ ಯಿಂದ ಈವರೆಗೂ 10 ದೂರು ಸ್ವೀಕರಿಸಿದ ಐಎಂಎ

ಕೋವಿಡ್- ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೋಗಿಯ ಕಡೆಯವರು ಅಥವಾ ಅವರ ಪರಿಚರಕರಿಂದ ವೈದ್ಯರ ಮೇಲೆ ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂಧಿಸಿರುವ ಬಗ್ಗೆ 10 ದೂರುಗಳನ್ನು ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಕಿರುಕುಳ ಸಮಿತಿ ಸ್ವೀಕರಿಸಿದೆ.

ಬೆಂಗಳೂರು: ಕೋವಿಡ್- ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೋಗಿಯ ಕಡೆಯವರು ಅಥವಾ ಅವರ ಪರಿಚರಕರಿಂದ ವೈದ್ಯರ ಮೇಲೆ ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂಧಿಸಿರುವ ಬಗ್ಗೆ 10 ದೂರುಗಳನ್ನು ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಕಿರುಕುಳ ಸಮಿತಿ ಸ್ವೀಕರಿಸಿದೆ.

ಇತ್ತೀಚಿಗೆ ಬೆಂಗಳೂರಿನ ಕೆ. ಸಿ. ಜನರಲ್ , ಜಯದೇವ ಆಸ್ಪತ್ರೆ ಮತ್ತು ಬೆಳಗಾವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿಂಸಾಚಾರದ
ಪ್ರಕರಣಗಳು ವರದಿಯಾಗಿದ್ದವು..

ಪ್ರತಿ ತಿಂಗಳ ಇಂತಹ ಎರಡು ಪ್ರಕರಣಗಳನ್ನು ಸ್ವೀಕರಿಸುತ್ತೇವೆ. ಕೆಲವು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ, ಕೆಲವು ವೇಳೆ
ಚಿಕಿತ್ಸೆಗಾಗಿ ಉನ್ನತ ಕೇಂದ್ರಗಳಿಗೆ ವೈದ್ಯರು ಶಿಫಾರಸ್ಸು ಮಾಡಬೇಕಾಗುತ್ತದೆ. ಆದರೆ, ಇದು ರೋಗಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ತಮ್ಮಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಅಂದುಕೊಳ್ಳುತ್ತಿದ್ದಾರೆ ಎಂದು  ಐಎಂಎ ಕರ್ನಾಟಕ , ಕಿರುಕುಳ ಸಮಿತಿ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ತಿಳಿಸಿದ್ದಾರೆ.

ಮಂಗಳೂರಿನ ಪ್ರಕರಣವನ್ನು ಉಲ್ಲೇಖಿಸಿರುವ ಅವರು, ಆರ್ ಟಿಪಿಸಿಆರ್ ಟೆಸ್ಟ್ ನ್ನು ಕೋವಿಡ್ ಪಾಸಿಟಿವ್ ಆಗಿ ಪರಿವರ್ತಿಸುವುದು ತಪ್ಪು.ಹಣಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ವೈದ್ಯರು ಮತ್ತು ಆಸ್ಪತ್ರೆಯ
ವರ್ಚಸ್ಸಿಗೆ ಕುಂದು ಉಂಟಾಗಿದೆ ಎಂದಿದ್ದಾರೆ.

ಕೊರೋನಾದಂತಹ ಸೋಂಕು ತಗುಲಿರುವ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವಾಗ ಚೆನ್ನಾಗಿಯೇ ಇರುತ್ತಾರೆ. ಆದರೆ, ಅವರ ಪರಿಸ್ಥಿತಿ
ವೇಗವಾಗಿ ಕ್ಷೀಣವಾಗಲಿದೆ. ಹೀಗೆ ಏಕೆ ಆಗಲಿದೆ ಎಂಬುದು ಅರ್ಥವಾಗುತ್ತಿಲ್ಲ, ವೈರಸ್ ಪರಾಕ್ರಮದ ಬಗ್ಗೆ ಗೊತ್ತಾಗುತ್ತಿಲ್ಲ. ರೋಗಿಗಳು ಮತ್ತು ಪರಿಚರಕರು ವೈದ್ಯರನ್ನು ನಿಂಧಿಸಲು ಆರಂಭಿಸುವ ಮೂೂಲಕ ಆಸ್ಪತ್ರೆಲ್ಲಿ ಭಯದ ವಾತವಾರಣ ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

10 ದೂರುಗಳಲ್ಲಿ ಎರಡು ಪ್ರಕರಣಗಳಲ್ಲಿ ಮಾತ್ರ ಎಫ್ ಐಆರ್ ದಾಖಲಿಸಲಾಗಿದ್ದು, ಈ ಕೇಸ್ ಗಳನ್ನು ತೆಗೆದುಕೊಳ್ಳಬೇಕೆಂದು
ಪೊಲೀಸ್ ಕಮೀಷನರ್, ಶಾಸಕರು ಮತ್ತು ಗೃಹ ಸಚಿವರ ಬಳಿ ಕೋರಿರುವುದಾಗಿ ಪ್ರಸಾದ್ ತಿಳಿಸಿದರು, 

ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬಿಲ್ ನಿಂದಾಗಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆಯಿದ್ದು, ರೋಗಿಗಳು ಅಸಮಾಧಾನಕ್ಕೆ ಕಾರಣವಾಗಿದ್ದರೆ, ವೈದ್ಯರು ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ ಎದು ಐಎಂಎ ಸೆಂಟ್ರಲ್ ವರ್ಕಿಂಗ್ ಕಮಿಟಿ ಮೆಂಬರ್ ಡಾ. ಸುರೇಶ್ ಕುದ್ವಾ ಕಟೀಲ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com