ರಾಜ್ಯಕ್ಕೆ ಪ್ರವಾಹ ಸಂಕಷ್ಟ: ಶಾಶ್ವತ ಪರಿಹಾರದತ್ತ ಸಚಿವರ ಚಿತ್ತ

ರಾಜ್ಯಕ್ಕೆ ಪ್ರವಾಹ ಸಂಕಷ್ಟ ಎದುರಾಗಿದ್ದು, ಜೂನ್ ವರೆಗೂ ಸುರಿದಿರುವ ಭಾರೀ ಮಳೆಗೆ ಅಂದಾಜು ರೂ.4 ಸಾವಿರ ಕೋಟಿ ನಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದ್ದು, ರಾಜ್ಯಕ್ಕೆ ಕೂಡಲೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. 
ವಿಡಿಯೋ ಸಂವಾದದಲ್ಲಿ ಸಚಿವ ಬೊಮ್ಮಾಯಿ ಹಾಗೂ ಸಚಿವ ಆರ್.ಅಶೋಕ್
ವಿಡಿಯೋ ಸಂವಾದದಲ್ಲಿ ಸಚಿವ ಬೊಮ್ಮಾಯಿ ಹಾಗೂ ಸಚಿವ ಆರ್.ಅಶೋಕ್

ಬೆಂಗಳೂರು: ರಾಜ್ಯಕ್ಕೆ ಪ್ರವಾಹ ಸಂಕಷ್ಟ ಎದುರಾಗಿದ್ದು, ಜೂನ್ ವರೆಗೂ ಸುರಿದಿರುವ ಭಾರೀ ಮಳೆಗೆ ಅಂದಾಜು ರೂ.4 ಸಾವಿರ ಕೋಟಿ ನಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದ್ದು, ರಾಜ್ಯಕ್ಕೆ ಕೂಡಲೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಭಾಗಿಯಾಗಿ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದರು. 

ಮಳೆ ಯಾವಾಗ ನಿಲ್ಲುತ್ತದೆ ಎಂಬುದರ ಸ್ಪಷ್ಟ ಮಾಹಿತಿಗಳು ಸಿಗದ ಕಾರಣ, ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಪುನರ್ವಸತಿ ಕಾರ್ಯಗಳಿಗೆ ಯಾವುದೇ ತೊಡಕಾಗದಂತೆ ನೋಡಿಕೊಳ್ಳಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ತುರ್ತಾಗಿ ರೂ.395 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಆದರೆ ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಲು ನಮ್ಮಲ್ಲಿ ಸಾಕಷ್ಟು ಹಣವಿದ್ದು, ಜಿಲ್ಲಾ ಆಯುಕ್ತರ ಖಾತೆಗಳಲ್ಲಿ ರೂ. 1,120 ಕೋಟಿ ಇದೆ ಎಂದು ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. 

ಪ್ರವಾಹ ಪರಿಸ್ಥಿತಿ ಎದುರಾದ ವೇಳೆ ಈಗಾಗಲೇ ಕೇಂದ್ರ ಸರ್ಕಾರವು ನಾಲ್ಕು ಎನ್'ಡಿಆರ್'ಎಫ್ ತಂಡ ನಿಯೋಜನೆ ಮಾಡಿದ್ದು, ಇನ್ನೂ ನಾಲ್ಕು ತಂಡಗಳನ್ನು ಶಾಶ್ವತವಾಗಿ ನಿಯೋಜನೆ ಮಾಡಬೇಕೆಂಬುದಾಗಿ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ. 

ರಾಜ್ಯದ ಮಡಿಕೇರಿ. ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕರಾವಳಿ ಭಾಗ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಾದ ಧಾರಾವಾಡ, ಬೆಳಗಾವಿ, ರಾಯಚೂರು ಜಿಲ್ಲೆ ಸೇರಿದಂತೆ 12ಕ್ಕೂ ಹೆಚ್ಚು ಜಿಲ್ಲೆಯಲ್ಲಿ ತೀವ್ರತರ ಮಳೆಯಾಗಿ ಪ್ರವಾಹ ಪರಿಸ್ಥಿತಿ ಎದುಹಾಗಿದೆ. ಭಾಗಮಂಡಲದಲ್ಲಿ ವಾಡಿಕೆಗಿಂತ ಶೇ.500ರಷ್ಟು ಹೆಚ್ಚು ಮಳೆಯಾಗಿದೆ. 

ಜನ-ಜಾನುವಾರು ರಕ್ಷಣೆಗಾಗಿ ನಾಲ್ಕು ಎನ್'ಡಿಆರ್'ಎಫ್ ತಂಡ ಈಗಾಗಲೇ ಸಿದ್ಧವಾಗಿದೆ. 200 ಮಂದಿ ಎಸ್'ಡಿಆರ್'ಎಫ್'ನ ತರಬೇತಿ ಪಡೆದವರಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ನಾಲ್ಕು ರಕ್ಷಣಾ ವಿಮಾನಗಳನ್ನು ರಾಜ್ಯಕ್ಕೆ ನೀಡಿದ್ದು, ಸೈನ್ಯಪಡೆಯನ್ನು ಸಹ ನಿಯೋಜನೆ ಮಾಡಿದೆ ಎಂದು ತಿಳಿಸಿದರು. 

ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಒಳಹರಿವು ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಲಸಂಪನ್ಮೂಲಕ ಸಚಿವ ರಮೇಶ್ ಜಾರಕಿಹೊಳಿಯವರು ಮಹಾರಾಷ್ಟ್ರ ಸರ್ಕಾರದ ಜೊತೆ ಸಬೆ ನಡೆಸಿದ್ದಾರೆ. ಅಣೆಕಟ್ಟಿನಿಂದ ಅಣೆಕಟ್ಟಿಗೆ ಎಂಜಿನಿಯರ್ ಗಳ ಸಮನ್ವಯತೆ ಕಾಯ್ದುಕೊಳ್ಳಲು ತಿಳಿಸಲಾಗಿದೆ. ಕೊಲ್ಹಾಪುರ, ಬೆಳಗಾವಿ ಜಿಲ್ಲಾಧಿಕಾರಿಗಳ ನಡುವೆ ನಿರಂತರ ಸಂಪರ್ಕ ಇರುವಂತೆ ಗಮನ ಹರಿಸಲಾಗಿದೆ. ಹೀಗಾಗಿ ನದಿ ಪಾತ್ರದ ಪ್ರದೇಶಗಳ ಬೆಳೆ ನಾಶ ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಿದೆ ಎಂದು ಬೊಮ್ಮಾಯಿಯವರು ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com