ಎಕ್ಸ್ ಪ್ರೆಸ್ ವರದಿ ಫಲಶೃತಿ: 616 ಅಂಕ ಪಡೆದ ದಿನಗೂಲಿ ಕೆಲಸಗಾರ ವಿದ್ಯಾರ್ಥಿ ಮನೆಗೆ ಸುರೇಶ್ ಕುಮಾರ್ ಭೇಟಿ

ಎಸ್ಎಸ್ ಎಲ್ ಸಿ ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳು ಪೆನ್ನು ಮತ್ತು ಪೇಪರ್ ಹಿಡಿದರೇ ಈ 17 ವರ್ಷದ ವಿದ್ಯಾರ್ಥಿ ಮಾತ್ರ ನಿರ್ಮಾಣ ಹಂತದ ಕಟ್ಟಡದಲ್ಲಿ ಕರಣೆ ಹಿಡಿದು ಗಾರೆ ಕೆಲಸ ಮಾಡುತ್ತಿದ್ದ,  ಪರೀಕ್ಷೆ ಕೇವಲ 5 ದಿನ ಮಾತ್ರ ಇರುವಾಗ ರಜೆ ತೆಗೆದುಕೊಂಡು ವ್ಯಾಸಂಗ ಮಾಡಿದ್ದ ಬಿ ಮಹೇಶ್ 625 ಕ್ಕೆ 616 ಅಂಕ ಪಡೆದಿದ್ದಾರೆ.
ಮಹೇಶ್ ಗೆ ಶುಭ ಹಾರೈಸಿದ ಸುರೇಶ್ ಕುಮಾರ್
ಮಹೇಶ್ ಗೆ ಶುಭ ಹಾರೈಸಿದ ಸುರೇಶ್ ಕುಮಾರ್

ಬೆಂಗಳೂರು: ಎಸ್ಎಸ್ ಎಲ್ ಸಿ ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳು ಪೆನ್ನು ಮತ್ತು ಪೇಪರ್ ಹಿಡಿದರೇ ಈ 17 ವರ್ಷದ ವಿದ್ಯಾರ್ಥಿ ಮಾತ್ರ ನಿರ್ಮಾಣ ಹಂತದ ಕಟ್ಟಡದಲ್ಲಿ ಕರಣೆ ಹಿಡಿದು ಗಾರೆ ಕೆಲಸ ಮಾಡುತ್ತಿದ್ದ,  ಪರೀಕ್ಷೆ ಕೇವಲ 5 ದಿನ ಮಾತ್ರ ಇರುವಾಗ ರಜೆ ತೆಗೆದುಕೊಂಡು ವ್ಯಾಸಂಗ ಮಾಡಿದ್ದ ಬಿ ಮಹೇಶ್ 625 ಕ್ಕೆ 616 ಅಂಕ ಪಡೆದಿದ್ದಾರೆ.

ಯಾದಗಿರಿ ಮೂಲದ ಮಹೇಶ್ ಲಾಕ್‌ಡೌನ್‌ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ ಬಿ. ಮಹೇಶ್‌, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪೈಕಿ, ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ (616 ಅಂಕ) ಪಡೆದಿದ್ದಾರೆ.

ಜೀವನ್‌ಬಿಮಾ ನಗರದಲ್ಲಿನ ಕರ್ನಾಟಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿ ಮಹೇಶ್ ತಾಯಿ ಮನೆಗೆಲಸ ಮಾಡುತ್ತಾರೆ.  ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ಈ ವಿದ್ಯಾರ್ಥಿ , ಓದುವುದರಲ್ಲಿ ರಾಜಿಯಾಗಿಲ್ಲ. ಪ್ರತಿನಿತ್ಯ  5 ಕಿಮೀ ಬಿಎಂಟಿಸಿ ಬಸ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಮಹೇಶ್,  ಯಾವುದೇ ಖಾಸಗಿ ಟ್ಯೂಷನ್ ಹೋಗುತ್ತಿರಲಿಲ್ಲ. ನಮ್ಮ ಸಮಾಜ ವಿಜ್ಞಾನದ ಟೀಚರ್ ನಿವೃತ್ತರಾಗಿದ್ದು, ಕನ್ನಡ ಪಾಠವನ್ನು ನಮಗಾಗಿ ಪೂರ್ಣಗಗೊಳಿಸಿದರು. ಹಿಂದಿಯನ್ನೋ ಹೇಗೋ ಮ್ಯಾನೇಜ್ ಮಾಡಿ ಓದಿಕೊಂಡೆ.

ನನ್ನ ತಂದೆ ನಾನು 5 ವರ್ಷದವನಾಗಿದ್ದಾಗ ನಿಧನರಾದರು. ‘ಲಾಕ್‌ಡೌನ್‌ ಸಂದರ್ಭದಲ್ಲಿ ನನ್ನ ತಾಯಿ ಕೆಲಸ ಕಳೆದುಕೊಂಡರು. ಬಿಬಿಎಂಪಿ ಆಹಾರ ಕಿಟ್ ನಿಂದ ಜೀವನ ಸಾಗಿಸುತ್ತಿದ್ದೆವು. ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟಿದ್ದೆ. ಈಗ ಉತ್ತಮ ಅಂಕಗಳು ಬಂದಿರುವುದು ಸಂತಸ ತಂದಿದೆ. ನನ್ನ ಅಣ್ಣ ಕೂಡ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಗೂ ಮುಂಚೆ ಯಾದಗಿರಿಗೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದ, 

ಕಷ್ಟದ ಪಾಠಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದ. ಶೇ 90 ರಷ್ಟು ಅಂಕ ನಿರೀಕ್ಷಿಸಿದ್ದೆ, ಆದರೆ ಹೆಚ್ಚಿನ ಮಾರ್ಕ್ಸ್ ಬಂದಿರುವುದು ಸಂತಸ ತಂದಿದೆ, ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಬೇಕೆಂದಿದ್ದೇನೆ. ಶಿಕ್ಷಕನಾಗುವ ಹಂಬಲವಿದೆ’ ಎಂದು ಮಹೇಶ್ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಬಂದ ವರದಿ ನೋಡಿದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಮಹೇಶ್ ಮನೆಗೆ ಭೇಟಿ ಆತನಿಗೆ ಶುಭ ಹಾರೈಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com