ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ: ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯಿಂದ ಕಾರ್ಯಾರಂಭ

 ಮಂಡ್ಯ ಜಿಲ್ಲೆಯ ರೈತರ ಆಶಯದಂತೆ ಪಾಂಡವಪುರದಲ್ಲಿರುವ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಪುನರ್ ಆರಂಭವಾಯಿತು.
ವಿವಿಧ ಮಠಾಧೀಶರಿಂದ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಪುನರ್ ಆರಂಭ
ವಿವಿಧ ಮಠಾಧೀಶರಿಂದ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಪುನರ್ ಆರಂಭ

ಪಾಂಡವಪುರ: ಮಂಡ್ಯ ಜಿಲ್ಲೆಯ ರೈತರ ಆಶಯದಂತೆ ಪಾಂಡವಪುರದಲ್ಲಿರುವ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಇಂದು ಪುನರ್ ಆರಂಭವಾಯಿತು.

 ಕಾರ್ಯಕ್ರಮದಲ್ಲಿ ಮಾತನಾಡಿದ ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಆಶೀರ್ವಾದದಿಂದ  ಕಾರ್ಖಾನೆ ಆರಂಭಿಸಲಾಗಿದೆ.ರಾಜಕಾರಣ ಇದ್ದೇ ಇದೆ. ಆದರೆ ಮೊದಲು ರೈತರಿಗೆ ಅನುಕೂಲ ಆಗಬೇಕು, ರೈತರ ಮಗನಾಗಿ  ಹುಟ್ಟಿ ರೈತರ ಹಿತ ಕಾಪಾಡುವುದು ನನ್ನ ಕರ್ತವ್ಯ ಎಂದರು.

 ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಮಾಡುವ ಪ್ರಯತ್ನ ನಡೆಸಿದ್ದೇನೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರು. ಜಿಲ್ಲೆಯ ಅಭಿವೃದ್ಧಿ 
ವಿಚಾರ ಬಂದಾಗ ಅಧಿಕಾರಿಗಳನ್ನ ಕರೆದು ತಕ್ಷಣ ಕೆಲಸ ಮಾಡಿ ಎಂದು ಹೇಳ್ತಾರೆ, ನಿರಾಣಿಯವರು ಧೈರ್ಯದಿಂದ ಜಿಲ್ಲೆಗೆ ಬಂದು ಕಾರ್ಖಾನೆ ಆರಂಭಿಸಿದ್ದಾರೆ. ನಾವೆಲ್ಲ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ. ಆಗ ಮಾತ್ರ ರೈತರಿಗೆ ಶಕ್ತಿ ನೀಡಿದಂತಾಗುತ್ತದೆ ಎಂದು ಮನವಿ ಮಾಡಿದರು. 

ಮುರುಗೇಶ್ ನಿರಾಣಿ ಮಾತನಾಡಿ, ಸಕ್ಕರೆ ಕಾರ್ಖಾನೆಗೆ ಮೈಸೂರು ರಾಜವಂಶದವರು,ಕೆಂಗಲ್ ಹನುಮಂತಯ್ಯ
 ಹಾಗೂ ಸಿಎಂ ಯಡಿಯೂರಪ್ಪ ಅವರ ಕೊಡುಗೆ ಸಾಕಷ್ಟಿದೆ. ಮಾಜಿ ಪ್ರಧಾನಿ ದೇವೇಗೌಡ ರು ಸಹ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲ ಹಿರಿಯರು ಹಾಕಿದ ಶ್ರಮ ವ್ಯರ್ಥವಾಗಬಾರದು. ಆ ರೀತಿಯಲ್ಲಿ ಕಾರ್ಖಾನೆ ನಡೆಯಬೇಕು. ಕಾರ್ಖಾನೆ ಪುನರುಜ್ಜೀವನಗೊಳಿಸಿ ಪ್ರತಿ ದಿನ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಲಾಗಿದೆ. 9 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ 10 ಸಾವಿರ ಟನ್‍ಗೆ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ. ಜೊತೆಗೆ 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ ಎಂದು ಹೇಳಿದರು.

ಮುಂದಿನ ಎರಡು ವರ್ಷಗಳಲ್ಲಿ ಹಲವು ಯೋಜನೆಗಳನ್ನ ರೂಪಿಸುವ ಉದ್ದೇವಿದೆ. ರೈತರ ಸಹಕಾರ ಹಾಗೂ ಪೂಜ್ಯರ 
ಆಶೀರ್ವಾದದೊಂದಿಗೆ ಕಾರ್ಖಾನೆ ಯನ್ನ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ. ಕಾರ್ಖಾನೆಯ ಹಿಂದಿನ ವೈಭವನ್ನ
 ಮರುಕಳಿಸುವಂತೆ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು. 

ಸಂಸದೆ ಸುಮಲತಾ ಅಂಬರೀಷ್  ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಫ್ಯಾಕ್ಟರಿ ಆರಂಭಿಸಲು ಯಾಕೆ 
ಇಷ್ಟೊಂದು ಅಡತಡೆ ಆಗತ್ತೆ ಅನ್ನೋದಕ್ಕೆ ಉತ್ತರ ಸಿಗೋದು ಕಷ್ಟ. ದೆಹಲಿಗೆ ಹೋದಾಗ ಕೇಂದ್ರದ ಸಚಿವರುಗಳನ್ನ ಭೇಟಿ ಮಾಡಿ ಒಂದಷ್ಟು ಪ್ರಾಜೆಕ್ಟ್ ತರುವ ಪ್ರಯತ್ನ ಮಾಡ್ತಾ ಇದ್ದೇನೆ. ಆದರೂ ಮಂಡ್ಯ ಅಂದಾಕ್ಷಣ ಹಿಂದೇಟು ಹಾಕ್ತಾರೆ. ಇದಕ್ಕೆ ಏನ್ ಕಾರಣ ಅನ್ನೋದನ್ನ ಚಿಂತಿಸಬೇಕಾಗಿದೆ. ಸಕ್ಕರೆ ಕಾರ್ಖಾನೆ ಲೀಸ್ ವಿಚಾರವಾಗಿ ಪ್ರತಿಭಟನೆ ಎಲ್ಲ ನಡೆದ ಕಾರಣ ನಾನು ಬೇಸರದಿಂದ ಈ ಮಾತನ್ನ ಹೇಳ್ತಾ ಇದ್ದೇನೆ. ಜಿಲ್ಲೆ ಅಭಿವೃದ್ದಿ ಆಗಬೇಕಾದ ಸಂದರ್ಭದಲ್ಲಿ ಯಾಕೆ ವಿರೋಧ ಮಾಡಬೇಕು. ಕಾರ್ಖಾನೆ ಆರಂಭಿಸಿ ನಿರಾಣಿಯವರು ರೈತರಿಗೆ ಒಂದಷ್ಟು ಅನುಕೂಲ ಮಾಡಿಕೊಟ್ರು, ಉದ್ಯೋಗ ಕೊಡ್ತಾ ಇದ್ದಾರೆ. ಕಾರ್ಖಾನೆ ಆರಂಭಕ್ಕೆ ವಿರೋಧಿಸುವವರಿಗೆ ಜನ ಪ್ರಶ್ನಿಸಬೇಕು ಎಂದು ರೈತ ಸಂಘಟನೆಗಳು ಹಾಗೂ ರಾಜಕಾರಣಿಗಳಿ ವಿರುದ್ಧ ಸಂಸದೆ ಅಸಮಾಧಾನ ವ್ಯಕ್ತಪಡಿಸಿದರು. 

ಮಾಜಿ ಸಚಿವ ಸಿಎಸ್ ಪುಟ್ಟರಾಜು ಮಾತನಾಡಿ, ನಮ್ಮೆಲ್ಲರ ನಿರೀಕ್ಷೆ ಈಗ ಕೈಗೂಡಿದೆ. 2004 ರಲ್ಲಿ ಪಾಂಡವಪುರ
ಶಾಸಕನಾಗಿದ್ದ ವೇಳೆ ಕಾರ್ಖಾನೆ ಎರಡು ಮೂರು ವರ್ಷ ನಿಂತಿತ್ತು.ಕಾರ್ಖಾನೆ ಪ್ರಾರಂಭಿಸುವ ಭರವಸೆ ನೀಡಿ ನಾನು ಶಾಸಕ 
ಕೂಡ ಆದೆ. ಧರ್ಮಸಿಂಗ್ ಅವರು ಸಿಎಂ ಆಗಿದ್ದರು. ದೇವೇಗೌಡರಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದೆ. ದೇವೇಗೌಡರು, 
ಧರ್ಮಸಿಂಗ್ ಅವರಿಗೆ ಕಾರ್ಖಾನೆ ಆರಂಭಿಸುವಂತೆ ಸೂಚನೆಯನ್ನೂ ನೀಡಿದ್ರು. ಸರ್ಕಾರದಿಂದ ನಡೆಸಲು ಸಾಧ್ಯವಾಗದ
 ಕಾರಣ ಖಾಸಗಿಗೆ ನೀಡಲಾಯಿತು. ಕೆಲ ವರ್ಷ ಕಾರ್ಖಾನೆ ನಡೆಯಿತಾದರು ವಿವಿಧ ಕಾರಣಗಳಿಂದ ಮತ್ತೆ ಸ್ಥಗಿತಗೊಂಡಿತ್ತು.
 ಈಗ ಜನರ ಅಭಿಪ್ರಾಯ ಪಡೆದು ಮತ್ತೆ ಕಾರ್ಖಾನೆ ಆರಂಭಿಸಲಾಗಿದೆ. ಯಾರು ಏನೆೇ ಮಾತನಾಡಿದರು,ರೈತರು ಆ ಬಗ್ಗೆ 
ಕಿವಿಗೊಡಬಾರದು. ಸಿಎಂ ಯಡಿಯೂರಪ್ಪ ಅವರು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಕಾರ್ಖಾನೆ ಆರಂಭಿಸುವ 
ಕಾರ್ಯ ಮಾಡಿದ್ದಾರೆ. ನಿರಾಣಿಯವರಿಗೆ ನಮ್ಮೆಲ್ಲರ ಸಹಕಾರ ಯಾವತ್ತೂ ಇರತ್ತೆ. ನಿಮ್ಮ ಕೆಲಸ ಯಶಸ್ವಿಯಾಗಲಿ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com