ಸೆಪ್ಟೆಂಬರ್ 7 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ಸೆಪ್ಟೆಂಬರ್ 7ರಿಂದ 18ರವರೆಗೆ ನಡೆಸಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ಸೆಪ್ಟೆಂಬರ್ 7ರಿಂದ 18ರವರೆಗೆ ನಡೆಸಲಿದೆ. ಉರ್ದು ಮತ್ತು ಸಂಸ್ಕೃತ ಭಾಷಾ ಪರೀಕ್ಷೆಗಳು ಸೆಪ್ಟೆಂಬರ್ 7ರಂದು ಬೆಳಗ್ಗೆ, ಮಾಹಿತಿ ತಂತ್ರಜ್ಞಾನದ ರಾಷ್ಟ್ರೀಯ ಕೌಶಲ್ಯ ಅರ್ಹತೆ, ರಿಟೈಲ್, ಆಟೊಮೊಬೈಲ್, ಆರೋಗ್ಯ ವಲಯ, ಸೌಂದರ್ಯ ಮತ್ತು ಆರೋಗ್ಯ, ಗೃಹ ವಿಜ್ಞಾನ ಪರೀಕ್ಷೆಗಳು ಅದೇ ದಿನ ಮಧ್ಯಾಹ್ನ ನಂತರ ನಡೆಯಲಿವೆ.

ಇತಿಹಾಸ, ಅಂಕಿಅಂಶ ಅಧ್ಯಯನ, ಜೀವಶಾಸ್ತ್ರ ಪರೀಕ್ಷೆಗಳು ಸೆಪ್ಟೆಂಬರ್ 8ರಂದು ಬೆಳಗ್ಗೆ ಹಿಂದಿ ಸೆಪ್ಟೆಂಬರ್ 9ರಂದು ಬೆಳಗ್ಗೆ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಅರೆಬಿಕ್ ಮತ್ತು ಫ್ರೆಂಚ್ ಗಳು ಮಧ್ಯಾಹ್ನ ನಂತರ ನಡೆಯಲಿವೆ. ಇಂಗ್ಲಿಷ್ ಪರೀಕ್ಷೆ ಸೆಪ್ಟೆಂಬರ್ 10ರಂದು, ಆಯ್ಕೆ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳು ಸೆಪ್ಟೆಂಬರ್ 11ರಂದು ಬೆಳಗ್ಗೆ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂಗರ್ಭಶಾಸ್ತ್ರ ಪರೀಕ್ಷೆಗಳು ಮಧ್ಯಾಹ್ನ ನಂತರ ಏರ್ಪಡಲಿವೆ.

ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ಪರೀಕ್ಷೆಗಳು ಸೆಪ್ಟೆಂಬರ್ 12ರಂದು, ಸೆಪ್ಟೆಂಬರ್ 14ರಂದು ತತ್ವಶಾಸ್ತ್ರ, ಬ್ಯುಸ್ ನೆಸ್ ಸ್ಟಡೀಸ್, ರಸಾಯನಶಾಸ್ತ್ರ ನಡೆಯಲಿವೆ. ಕನ್ನಡ ಭಾಷಾ ಪರೀಕ್ಷೆ ಸೆಪ್ಟೆಂಬರ್ 15ರಂದು, ರಾಜಕೀಯ ವಿಜ್ಞಾನ ಮತ್ತು ಮೂಲ ಗಣಿತ ಪರೀಕ್ಷೆಗಳು ಸೆಪ್ಟೆಂಬರ್ 16ರಂದು, ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಪರೀಕ್ಷೆಗಳು ಸೆಪ್ಟೆಂಬರ್ 17ರಂದು ಬೆಳಗ್ಗೆ, ಭೂಗರ್ಭಶಾಸ್ತ್ರ ಮತ್ತು ಮನಃಶಾಸ್ತ್ರ ಸೆಪ್ಟೆಂಬರ್ 18ರಂದು ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com