ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರದೇಶದಲ್ಲಿ ಮುಂದುವರಿದ ಕಾರ್ಯಾಚರಣೆ: ಎರಡು ಕಾರು ಪತ್ತೆ 

ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದ ಪ್ರದೇಶದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆಯ ಮುಂದುವರಿದಿದ್ದು, ಸ್ಥಳದಲ್ಲಿ ಎರಡು ಕಾರುಗಳು ಮತ್ತು ನಾಯಿಗಳ ಶವ ಸಿಕ್ಕಿವೆ.
ಮುಂದುವರಿದ ಶೋಧ ಕಾರ್ಯ
ಮುಂದುವರಿದ ಶೋಧ ಕಾರ್ಯ

ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದ ಪ್ರದೇಶದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆಯ ಮುಂದುವರಿದಿದ್ದು, ಸ್ಥಳದಲ್ಲಿ ಎರಡು ಕಾರುಗಳು ಮತ್ತು ನಾಯಿಗಳ ಶವ ಸಿಕ್ಕಿವೆ.

ಆಗಸ್ಟ್ 5ರಂದು ತಡರಾತ್ರಿ ಭಾರೀ ಮಳೆಗೆ ಬ್ರಹ್ಮಗಿರಿ ಬೆಟ್ಟ ಭಾರೀ ಪ್ರಮಾಣದಲ್ಲಿ ಕುಸಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ಐವರು ಜೀವಂತ ಸಮಾಧಿಯಾಗಿದ್ದರು. ಈ ಪೈಕಿ ಓರ್ವರ ಮೃತದೇಹ ಆ.8ರಂದು ಪತ್ತೆಯಾಗಿತ್ತು. ಕಣ್ಮರೆಯಾದ ಉಳಿದ ನಾಲ್ವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ವೇಳೆ ಎರಡು ಕಾರುಗಳು ಸಿಕ್ಕಿವೆ.

ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಪತ್ನಿ ಶಾಂತಾ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ್ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಅರ್ಚಕ ನಾರಾಯಣ ಆಚಾರ್ ಅವರ ಸೋದರ ಆನಂದ ತೀರ್ಥ ಸ್ವಾಮೀಜಿಯ ಮೃತದೇಹ ಪತ್ತೆಯಾಗಿದೆ.

ಅರ್ಚಕ ನಾರಾಯಣ ಆಚಾರ್ಯರ ಮಕ್ಕಳು ಮೊನ್ನೆ ವಿದೇಶಗಳಿಂದ ಆಗಮಿಸಿದ್ದಾರೆ. ಮೂರು ಹಿಟಾಚಿ, ಎನ್‌ಡಿಆರ್​ಎಫ್, ಎಸ್​ಡಿಆರ್​ಎಫ್ ಮೂಲಕ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ನಾರಾಯಣ ಆಚಾರ್ಯರ ಮನೆಯ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಮಣ್ಣಿನಡಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹೆಚ್ಚು ಹಸುಗಳಿತ್ತು. ಅವೆಲ್ಲವೂ ಗುಡ್ಡ ಕುಸಿತದ ವೇಳೆ ಕೊಚ್ಚಿ ಹೋಗಿವೆ. ಕೊಡಗಿನ ಸುತ್ತಮುತ್ತ ನಾರಾಯಣ ಆಚಾರ್ಯ 100 ಎಕರೆ ಕಾಫಿ ತೋಟ ಹೊಂದಿದ್ದರು. ಅದೇ ರೀತಿ ಬೆಂಗಳೂರು, ಮಂಗಳೂರಿನಲ್ಲಿಯೂ ಆಸ್ತಿ ಹೊಂದಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com