ಕೊರೋನಾ: ಆಗತ್ಯವಿಲ್ಲದಿದ್ದರೂ ಕೋವಿಡ್ ಆರೈಕೆ ಕೇಂದ್ರಗಳಿಗೆ ಲಕ್ಷಣ ರಹಿತ ರೋಗಿಗಳ ರವಾನೆ ಆರೋಪ!

ಕೊರೋನಾ ವೈರಸ್ ದೃಢಪಟ್ಟು, ಲಕ್ಷಣವಿಲ್ಲದವರು ಕುಟುಂಬದ ವೈದ್ಯರ ಆರೈಕೆಯಲ್ಲಿ ಮನೆಯಲ್ಲಿ ಐಸೋಲೇಷನ್ ನಲ್ಲಿದ್ದರೂ, ಬಿಬಿಎಂಪಿ ಅಧಿಕಾರಿಗಳು ಅನಗತ್ಯವಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ರವಾನಿಸುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ದೃಢಪಟ್ಟು, ಲಕ್ಷಣವಿಲ್ಲದವರು ಕುಟುಂಬದ ವೈದ್ಯರ ಆರೈಕೆಯಲ್ಲಿ ಮನೆಯಲ್ಲಿ ಐಸೋಲೇಷನ್ ನಲ್ಲಿದ್ದರೂ, ಬಿಬಿಎಂಪಿ ಅಧಿಕಾರಿಗಳು ಅನಗತ್ಯವಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ರವಾನಿಸುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. 

ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಕೆಮ್ಮು, ಶೀತ ಹಾಗೂ ಜ್ವರದಂತಹ ಯಾವುದಾದರೂ ಲಕ್ಷಣಗಳಿವೆಯೇ ಎಂದು ಯಾವುದೇ ಅಧಿಕಾರಿಗಳೂ ತಪಾಸಣೆಗೆ ಬಾರದಿದ್ದರೂ ಬಿಬಿಎಂಪಿ ಅಧಿಕಾರಿಗಳೇ ಸ್ವಯಂಪ್ರೇರಿತರಾಗಿ ನಿರ್ಧಾರ ಕೈಗೊಂಡು ಲಕ್ಷಣ ರಹಿತ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲು ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. 

ವಿಕ್ಟೋರಿಯಾ ಆಸ್ಪತ್ರೆಯ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಆರ್ಗನ್ ಟ್ರಾನ್ಸ್‌ಪ್ಲಾಂಟ್, (ಐಜಿಒಟಿ), ಬೆಂಗಳೂರಿನ ಕ್ರಿಟಿಕಲ್ ಕೇರ್ ಸೊಸೈಟಿಯ ಸದಸ್ಯ ಡಾ. ಟಿ ಆರ್ ಚಂದ್ರಶೇಖರ್ ಅವರು ಹೋಮ್ ಐಸೋಲೇಷನ್'ಗೆ ಸೂಚಿಸಿದ್ದರೂ, ಬಿಬಿಎಂಪಿ ಅಧಿಕಾರಿಗಳು ನಮ್ಮ ಮಾತನ್ನು ಕೇಳದೆಯೇ 40 ವರ್ಷದ ನನ್ನ ಪತ್ನಿಯನ್ನು ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲು ಮಾಡಬೇಕೆಂದು ಹೇಳುತ್ತಿದ್ದಾರೆ. ಕೋವಿಡ್ ಕೇರ್ ಕೇಂದ್ರವಷ್ಟೇ ಇರುವ ಆಯ್ಕೆಯಾಗಿದ್ದು, ಹೋಮ್ ಕ್ವಾರಂಟೈನ್ ಆದೇಶವನ್ನು 10-12 ದಿನಗಳ ಹಿಂದೆಯೇ ಹಿಂಪಡೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ದಾಖಲಾತಿ ತೋರಿಸುವಂತೆ ಹೇಳಿದರೆ, ಅದಕ್ಕೆ ಅವರು ಒಪ್ಪುತ್ತಿಲ್ಲ. ನಿಜಕ್ಕೂ ಇದೊಂದು ನೋವಿನ ಅನುಭವವಾಗಿದೆ ಎಂದು ಬೆಂಗಳೂರು ನಿವಾಸಿಯಾಗಿರುವ ನವೀನ್ ಅವರು ಹೇಳಿದ್ದಾರೆ. 

ಪ್ರತೀನಿತ್ಯ ಹಲವು ಬಿಬಿಎಂಪಿ ಅಧಿಕಾರಿಗಳು ಪದೇ ಪದೇ ದೂರವಾಣಿ ಕರೆ ಮಾಡುತ್ತಲೇ ಇದ್ದಾರೆ. ಪತ್ನಿಯನ್ನು ಕೋವಿಡ್ ಕೇರ್ ಕೇಂದ್ರದಲ್ಲಿ ದಾಖಲು ಮಾಡುವಂತೆ ತಿಳಿಸುತ್ತಿದ್ದಾರೆ. ಓರ್ವ ಅಧಿಕಾರಿಯಂತೂ ಒಪ್ಪದೇ ಹೋದಲ್ಲಿ ಪೊಲೀಸರ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆಂದು ತಿಳಿಸಿದ್ದಾರೆ. 

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಆರೈಕೆಯಲ್ಲಿರುವುದಾಗಿ ಹಲವು ವೈದ್ಯರ ಸಹಿ ಮಾಡಿರುವ ಚೀಟಿ ತೋರಿಸಿದ್ದರೂ ಬಿಬಿಎಂಪಿಯವರು ಒಪ್ಪುತ್ತಿಲ್ಲ. ವೈದ್ಯರ ಸಲಹೆಯಿಲ್ಲದೆಯೇ ಸ್ವಯಂ ಹೋಮ್ ಕ್ವಾರಂಟೈನ್ ನಲ್ಲಿದ್ದೇವೆಂದು ಹೇಳುತ್ತಿದ್ದಾರೆಂದು ಹೇಳಿದ್ದಾರೆ. 

ಹೊರ ರಾಜ್ಯವೊಂದಕ್ಕೆ ಹೋಗಿ ಬಂದಿದ್ದ 20 ವರ್ಷದ ಮಹಿಳೆಯೊಬ್ಬರಲ್ಲಿ ವೈರಸ್ ದೃಢಪಟ್ಟಿದ್ದು, ಲಕ್ಷಣಗಳು ಕಂಡು ಬಂದಿಲ್ಲ. ಅಪಾರ್ಟ್ ಮೆಂಟ್ ವೊಂದರಲ್ಲಿ 3 ಬೆಡ್ ರೂಮ್ ಇರುವ ಮನೆಯಲ್ಲಿ ನೆಲೆಯೂರಿದ್ದು, ಹೋಮ್ ಕ್ವಾರಂಟೈನ್ ನಲ್ಲಿರುವ ವಾತಾವರಣ ಉತ್ತಮವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದರ ಸಂಪರ್ಕಿಸಲು ಸಾಕಷ್ಟು ಯತ್ನ ನಡೆಸುತ್ತಿದ್ದೇವೆ. ಕೋವಿಡ್ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿರುವ ಶ್ರೀ ಶ್ರೀ ಆಯುರ್ವೇದ ಆಸ್ಪತ್ರೆಗೆ ದಾಖಲು ಮಾಡಲು ಯತ್ನಿಸುತ್ತಿದ್ದೇವೆ. ಆದರೆ, ಯಾವುದೇ ಅಧಿಕಾರಿಗಳು ತಪಾಸಣೆಗೆ ಬರುತ್ತಿಲ್ಲ ಎಂದು ಸೋಂಕು ಪೀಡಿತ ಮಹಿಳೆ ಕೀರ್ತಿ ಪಿ.ಕೆ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com