ಬೆಂಗಳೂರಿನಲ್ಲಿ ಗಲಭೆ ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್: ಓರ್ವ ಸಾವು, ಮೂವರಿಗೆ ಗಾಯ

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆಂಬ ಅವಹೇಳನಾರಿ ಪೋಸ್ಟ್ ನಿ ಅಲ್ಪ ಸಂಖ್ಯಾತ ಸಮುದಾಯವರು ನಡೆಸಿದ ದಾಂದಲೆ,ಗಲಭೆಯ ನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಗಾಳಿಯಲ್ಲಿ ಹಾರಿಸಿದ ಗುಂಡು ವ್ಯಕ್ತಿಯೋ ರ್ವನಿಗೆ ತಗುಲಿ ಸ್ಥಳದಲ್ಲಿಯೇ ಮೃತಪಟ್ಟು ಮತ್ತೆ ಮೂವರಿಗೆ ಗಾಯಗೊಂಡಿರುವ ಘಟನೆ ಡಿ.ಜೆಹಳ್ಳಿಯಲ್ಲಿ
ಬೆಂಗಳೂರಿನಲ್ಲಿ ಗಲಭೆ ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್: ಓರ್ವ ಸಾವು, ಮೂವರಿಗೆ ಗಾಯ

ಬೆಂಗಳೂರ:  ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆಂಬ ಅವಹೇಳನಾರಿ ಪೋಸ್ಟ್ ನಿ ಅಲ್ಪ ಸಂಖ್ಯಾತ ಸಮುದಾಯವರು ನಡೆಸಿದ ದಾಂದಲೆ,ಗಲಭೆಯ ನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಗಾಳಿಯಲ್ಲಿ ಹಾರಿಸಿದ ಗುಂಡು ವ್ಯಕ್ತಿಯೋ ರ್ವನಿಗೆ ತಗುಲಿ ಸ್ಥಳದಲ್ಲಿಯೇ ಮೃತಪಟ್ಟು ಮತ್ತೆ ಮೂವರಿಗೆ ಗಾಯಗೊಂಡಿರುವ ಘಟನೆ ಡಿ.ಜೆಹಳ್ಳಿಯಲ್ಲಿ ನಡೆದಿದೆ.

ಕೆಎಸ್ಆರ್ ಪಿ ವಾಹನಗಳಿಗೆ ಹಾಗೂ ಪೊಲೀಸ್ ಕ್ವಾಟ್ರಸ್ ಬಳಿ ಬೆಂಕಿ ಹಚ್ಚಿ ಸಾರ್ವಜನಿಕರ ಮನೆಗಳು,ವಾಹನ ಗಳಿಗೆ ಬೆಂಕಿ ಹಚ್ಚಿ ಹಾನಿಯನ್ನುಂಟು ಮಾಡುವ ಪ್ರಯತ್ನ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಈ ವೇಳೆ ವ್ಯಕ್ತಿಯೋರ್ವನಿಗೆ ಗಾಯಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಇದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿ ಗಲಭೆಕೋರರನ್ನು ನಿಯಂತ್ರಿಸಲು ಮುಂದಾದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರ ಕೈಗೂ ಗಾಯವಾಗಿದೆ ಎನ್ನಲಾಗಿದೆ.ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ನಡೆದಿದೆ.

ಮತ್ತೊಂದೆಡೆ ಸ್ಥಳದಲ್ಲಿ ವರದಿಗೆ ತೆರಳಿದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಲಾಗಿದ್ದು ಖಾಸಗಿ ಚಾನೆಲ್ ಗಳ ವರದಿಗಾರರು ಹಾಗೂ ಕ್ಯಾಮೆರಾಮೆನ್ ಗಳ ಮೇಲೆ ಗಲಭೆಕೋರರು ಧಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ.ಗಲಭೆಯ ಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು ಗಲಭೆಕೋರರಿಗೆ ಗಾಯಗಳಾಗಿವೆ ಎಂಬ ಮಾಹಿತಿ ಇದೆ.

ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಬಳಿ ಮನೆಗಳಿಗೆ ಬೆಂಕಿ ಹಚ್ಚಿದ್ದು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡ ಲಾಗಿದ್ದು ಘಟನೆಯಲ್ಲಿ ಎಸಿಪಿ,ಡಿಸಿಪಿ,ಹಾಗೂ ಇನ್ಸ್ ಪೆಕ್ಟರ್ ಗಳಿಗೂ ಗಾಯಗಳಾಗಿದೆ.ಘಟನೆ ನಿಯಂತ್ರಿಸಲು ಅನಿವಾರ್ಯವಾಗಿ ಪೈರಿಂಗ್ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com