ರಾಜ್ಯದಲ್ಲಿ ಲಕ್ಷ ದಾಟಿದ ಕೋವಿಡ್ ಗುಣಮುಖರ ಸಂಖ್ಯೆ: ಚೇತರಿಕೆ ಪ್ರಮಾಣ ಶೇ.56ಕ್ಕೆ ಏರಿಕೆ

ರಾಜ್ಯದಲ್ಲಿ ಇದೀಗ ಕೊರೋನಾ ಸೋಂಕು ಪ್ರಮಾಣಕ್ಕಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ 15 ದಿನಗಳಲ್ಲಿ ಚೇತರಿಕೆ ಪ್ರಮಾಣ ಶೇ.18ರಷ್ಟು ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇದೀಗ ಕೊರೋನಾ ಸೋಂಕು ಪ್ರಮಾಣಕ್ಕಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ 15 ದಿನಗಳಲ್ಲಿ ಚೇತರಿಕೆ ಪ್ರಮಾಣ ಶೇ.18ರಷ್ಟು ಏರಿಕೆಯಾಗಿದೆ. 

ಮಂಗಳವಾರ ಒಂದೇ ದಿನ ರಾಜ್ಯದಲ್ಲಿ 6,257 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಗುಣಮುಖರಾದ 6,473 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಈ ವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,88,611ಕ್ಕೆ ಏರಿಕೆಯಾಗಿದೆ. 

ಇದರಲ್ಲಿ ಶೇ.55.89ರಷ್ಟು ಅಂದರೆ, 1,05,599 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನೂ ರಾಜ್ಯದಲ್ಲಿ 79,606 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ರಾಜ್ಯದಲ್ಲಿ ಜು.27ರಂದು ದಾಖಲಾಗಿದ್ದ ಶೇ.37.14 ರಷ್ಟು ಚೇತರಿಕೆ ಪ್ರಮಾಣ ನಂತರದ 5 ದಿನಗಳಲ್ಲಿ ಜು.2ಕ್ಕೆ ಶೇ.42.81ಕ್ಕೆ ಏರಿಕೆಯಾಗಿತ್ತು. ಆ ನಂತರದ ಹತ್ತು ದಿನಗಳಲ್ಲಿ ಶೇ.55.98ಕ್ಕೆ ಏರಿಕೆಯಾಗಿದೆ. ಕಳೆದ 15 ದಿನಗಳಲ್ಲಿ ಚೇತರಿಕೆ ಪ್ರಮಾಣದಲ್ಲಿ ಶೇ.18ರಷ್ಟು ಏರಿಕೆಯಾದಂತಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com