ಮಾಕುಟ್ಟ-ಕೇರಳ ಗಡಿ ಭಾಗದಲ್ಲಿ ಸಂಚಾರಕ್ಕೆ ತೆರವು
ಮಾಕುಟ್ಟ-ಕೇರಳ ಗಡಿ ಭಾಗದಲ್ಲಿ ಸಂಚಾರಕ್ಕೆ ತೆರವು

ಕೊಡಗು-ಕೇರಳ ಗಡಿ ವಾಹನ ಸಂಚಾರಕ್ಕೆ ಮುಕ್ತ

ಕೋವಿಡ್-19 ಹಿನ್ನೆಲೆಯಲ್ಲಿ ಸುಮಾರು 5 ತಿಂಗಳಿನಿಂದ ಬಂದ್ ಆಗಿದ್ದ ಕೊಡಗು-ಕೇರಳ ಗಡಿ ಭಾಗ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಮಡಿಕೇರಿ: ಕೋವಿಡ್-19 ಹಿನ್ನೆಲೆಯಲ್ಲಿ ಸುಮಾರು 5 ತಿಂಗಳಿನಿಂದ ಬಂದ್ ಆಗಿದ್ದ ಕೊಡಗು-ಕೇರಳ ಗಡಿ ಭಾಗ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಆದರೆ ಅಂತರಾಜ್ಯ ಸಂಚಾರಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ಮಾಕುಟ್ಟ-ಕೇರಳ ಹೆದ್ದಾರಿ ಸೇರಿದಂತೆ ಎಲ್ಲಾ ಅಂತರಾಜ್ಯ ರಸ್ತೆಗಳನ್ನು ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೆ ಮುಚ್ಚಲಾಗಿತ್ತು.ಅವುಗಳೆಲ್ಲವನ್ನೂ ಈಗ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.

ಗೂಡ್ಸ್ ವಾಹನಗಳು ಕೂಡ ಈ ರಸ್ತೆಯಲ್ಲಿ ಓಡಾಡಬಹುದು. ಆದರೆ ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳ ಸಂಚಾರಕ್ಕೆ ಮಾತ್ರ ಆನ್ ಲೈನ್ ನಲ್ಲಿ ಸಂಬಂಧಪಟ್ಟ ಆಡಳಿತದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ವಿರಾಜಪೇಟೆ ತಹಶಿಲ್ದಾರ ನಂದೀಶ್ ತಿಳಿಸಿದ್ದಾರೆ.

ಈ ಮಧ್ಯೆ ಇದೇ ವಾರದಲ್ಲಿ ಬಸ್ ಸಂಚಾರಕ್ಕೆ ಕೂಡ ರಸ್ತೆ ತೆರವಾಗುವ ಸಾಧ್ಯತೆಯಿದೆ. ಕೊಡಗು ಜಿಲ್ಲಾಡಳಿತ ಮತ್ತು ಶಾಸಕ ಕೆ ಜಿ ಬೋಪಯ್ಯ ಅವರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಆದೇಶ ನೀಡಿದ್ದು ಕರಿಕೆ-ಕೇರಳ ರಸ್ತೆ ಕಳೆದ ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ. ಭಾಗಮಂಡಲದಲ್ಲಿ ಕಳೆದ ವಾರ ಪ್ರವಾಹ ಬಂದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಕೇರಳ ಸರ್ಕಾರ ಕರಿಕೆ-ಕೇರಳ ಗಡಿಭಾಗದಲ್ಲಿ ಬ್ಯಾರಿಕೇಡ್ ಹಾಕಿದ್ದು ತುರ್ತು ಸಂಚಾರಕ್ಕೆ ಮಾತ್ರ ಸದ್ಯ ಅನುಮತಿ ನೀಡಲಾಗಿದೆ ಎಂದು ಕರಿಕೆ ನಿವಾಸಿ ಮಧು ಹೇಳುತ್ತಾರೆ.

ಕೊಡಗಿನ ಮೂಲಕ ಹೋಗುವ ಎಲ್ಲಾ ಪ್ರಯಾಣಿಕರನ್ನು ಕೇರಳ ಆಡಳಿತಾಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ.ಆದರೆ ಕೊಡಗಿನಲ್ಲಿ ತಪಾಸಣೆಯಾಗುತ್ತಿಲ್ಲ.

Related Stories

No stories found.

Advertisement

X
Kannada Prabha
www.kannadaprabha.com