ಕೊರೋನಾದಿಂದ ಗುಣಮುಖವಾಗಿ ಡಿಸ್ಚಾರ್ಜ್ ಆದವರಿಗೆ 14 ದಿನದ ಬದಲು 7 ದಿನ ಹೋಮ್ ಕ್ವಾರಂಟೈನ್

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುವವರಿಗೆ 14 ದಿನಗಳ ಹೋಂ ಕ್ವಾರಂಟೈನ್‌ ಬದಲಾಗಿ ಏಳು ದಿನ ಮನೆಯಲ್ಲಿಯೇ ಐಸೊಲೇಶನ್‌ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Published: 12th August 2020 08:08 AM  |   Last Updated: 12th August 2020 12:38 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : shilpa
Source : The New Indian Express

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುವವರಿಗೆ 14 ದಿನಗಳ ಹೋಂ ಕ್ವಾರಂಟೈನ್‌ ಬದಲಾಗಿ ಏಳು ದಿನ ಮನೆಯಲ್ಲಿಯೇ ಐಸೊಲೇಶನ್‌ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಸೋಂಕು ಲಕ್ಷಣ ಇಲ್ಲದವರು ಮತ್ತು ಅಲ್ಪ ಪ್ರಮಾಣದ ಲಕ್ಷಣ ಹೊಂದಿರುವ ಪ್ರಕರಣಗಳಲ್ಲಿ ಸೋಂಕುಪೀಡಿತರು ಆಸ್ಪತ್ರೆ, ಕೊರೊನಾ ಕೇರ್‌ ಸೆಂಟರ್‌ನಿಂದ ಬಿಡುಗಡೆಯಾದ ಬಳಿಕ ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಿತ್ತು. ಆದರೆ ಸದ್ಯ ಏಳು ದಿನಗಳ ಐಸೊಲೇಶನ್‌ಗೆ ಸೂಚಿಸಲಾಗಿದೆ. 14 ದಿನಗಳ ಹೋಂ ಕ್ವಾರಂಟೈನ್‌ ನಿಯಮ ಕೈಬಿಡಲಾಗಿದೆ.

ಸೋಂಕು ಲಕ್ಷಣ ಇಲ್ಲದ ಮತ್ತು ಅಲ್ಪ ಪ್ರಮಾಣದ ಲಕ್ಷಣ ಹೊಂದಿರುವ ಪ್ರಕರಣಗಳಲ್ಲಿ ಪರೀಕ್ಷೆ ನಡೆದ ದಿನದಿಂದ 10ನೇ ದಿನಕ್ಕೆ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಹಿಂದೆ ಸೋಂಕುಪೀಡಿತರು ಆಸ್ಪತ್ರೆ, ಕೊರೊನಾ ಕೇರ್‌ ಸೆಂಟರ್‌ಗೆ ದಾಖಲಾಗಿ 10 ದಿನದ ಬಳಿಕ ಬಿಡುಗಡೆ ಮಾಡಲಾಗುತ್ತಿತ್ತು. ಬಿಡುಗಡೆ ವೇಳೆ ಸೋಂಕು ಪರೀಕ್ಷೆ ಅಗತ್ಯವಿಲ್ಲ ಎಂದು ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ. 

ಒಂದು ವೇಳೆ ಬಿಡುಗಡೆ ಬಳಿಕ ಲಕ್ಷಣ ಕಾಣಿಸಿಕೊಂಡರೆ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಸೂಚಿಸಿದೆ. ಆರಂಭದಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡು ಚಿಕಿತ್ಸೆ ಬಳಿಕ ಗುಣಮುಖರಾದವರಿಗೆ ಕೊನೆಯ ಮೂರು ದಿನ ಸೋಂಕು ಲಕ್ಷಣ ಇಲ್ಲದಿದ್ದರೆ 10ನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು.  ಒಂದು ವೇಳೆ 14 ದಿನ ಸೋಂಕು ಲಕ್ಷಣ ಇದ್ದರೆ ಮೂರು ದಿನಗಳ ಬಳಿಕ, ಅಂದರೆ 17ನೇ ದಿನ ಸೋಂಕು ಪರೀಕ್ಷೆ ಮಾಡದೆ ಬಿಡುಗಡೆ ಮಾಡಬಹುದು.

ಸೋಂಕುಪೀಡಿತರ ಬಿಡುಗಡೆಗೆ ಮುನ್ನ ಮೂರು ದಿನ ಸೋಂಕಿನ ಲಕ್ಷಣವಿರಬಾರದು. ಉಳಿದಂತೆ ಎಚ್‌ಐವಿ, ಕಸಿ ಚಿಕಿತ್ಸೆಗೆ ಒಳಗಾದ ಸೋಂಕುಪೀಡಿತರಿಗೆ ಸಂಪೂರ್ಣ ಗುಣಮುಖರಾದ ಬಳಿಕ ಒಮ್ಮೆ ಸೋಂಕು ಪರೀಕ್ಷೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp