ಸೋಂಕಿತರಿಗಾಗಿ ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ: ಕಲ್ಯಾಣ ಕರ್ನಾಟಕ ಮಂಡಳಿ ನೂತನ ಪ್ರಯೋಗ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋವಿಡ್ ಸೋಂಕು ತೀವ್ರಗೊಂಡಿದೆ. ಈ ಭಾಗದ ಕೇಂದ್ರ ಸ್ಥಾನ ಕಲಬುರ್ಗಿ ಕೊರೋನಾ ಹಾಟ್​​ಸ್ಪಾಟ್ ಆಗಿ ಪರಿವರ್ತನೆಯಾಗಿದೆ.
ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿ
ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋವಿಡ್ ಸೋಂಕು ತೀವ್ರಗೊಂಡಿದೆ. ಈ ಭಾಗದ ಕೇಂದ್ರ ಸ್ಥಾನ ಕಲಬುರ್ಗಿ ಕೊರೋನಾ ಹಾಟ್​​ಸ್ಪಾಟ್ ಆಗಿ ಪರಿವರ್ತನೆಯಾಗಿದೆ.

ಕೆಕೆಆರ್​​ಡಿಬಿ ಕಛೇರಿಯಲ್ಲಿ ಕೋವಿಡ್-19 ಸುರಕ್ಷಾ ಚಕ್ರ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಕೆಕೆಆರ್​​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಆ್ಯಂಬುಲೆನ್ಸ್ ಸೌಲಭ್ಯ, ಥ್ರೋಟ್ ಸ್ಯಾಂಪಲ್ ಟೆಸ್ಟ್, ಬೆಡ್ ಲಭ್ಯತೆ, ಎಲ್ಲಿ ಚಿಕಿತ್ಸೆ ಸಿಗುವುದೆಂಬ ಇತ್ಯಾದಿ ಮಾಹಿತಿಯನ್ನು ಇಲ್ಲಿಂದ ಪಡೆದುಕೊಳ್ಳಬಹುದಾಗಿದೆ.

ಸುರಕ್ಷಾ ಚಕ್ರ ಸಹಾಯವಾಣಿಗೆ ಕರೆ ಮಾಡಿದ ಅರ್ಧ ಗಂಟೆಯೊಳಗೆ ಅಗತ್ಯ ಮಾಹಿತಿ ಜೊತೆಗೆ, ಅಗತ್ಯ ಸೌಕರ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು. ದಿನದ 24 ತಾಸುಗಳ ಕಾಲ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಚಿಕಿತ್ಸೆ ನಂತರ ಡಿಸ್ಚಾರ್ಜ್ ಆದ ರೋಗಿಗಳ ಮೇಲೆ 1 ತಿಂಗಳ ಕಾಲ ನಿಗಾ ಇಡಲಾಗುತ್ತದೆ. ಕೆಕೆಆರ್​​ಡಿಬಿ ಹಾಗೂ ಜಿಲ್ಲಾಧಿಕಾರಿ ಕಛೇರಿಗಳಿಂದಲೇ ಕೇಂದ್ರದ ಕಾರ್ಯಾಚರಣೆ ಮಾನಿಟರ್ ಮಾಡಬಹುದಾಗಿದೆ.

ಕೆಕೆಆರ್​​ಡಿಬಿ ಪ್ರಯತ್ನಕ್ಕೆ ಕಲಬುರ್ಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಗಳು ಕೈಜೋಡಿಸಿವೆ. ಸದ್ಯಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ದತ್ತಾತ್ರೇಯ ಪಾಟೀಲ ರೇವೂರ ಮಾಹಿತಿ ನೀಡಿದ್ದಾರೆ. 

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ದುಬಾರಿ ಬಿಲ್ ವಿಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಜಾಧವ್, ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಯಾವುದೇ ಖಾಸಗಿ ಆಸ್ಪತ್ರೆ ಸರ್ಕಾರದ ಮಾರ್ಗಸೂಚಿ ಮೀರಿ ಹೆಚ್ಚಿನ ದರ ವಿಧಿಸುವಂತಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ  ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಸದ ಉಮೇಶ್ ಜಾಧವ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com