ಮೈಸೂರು: ಕೊರೋನಾ ಸೋಂಕಿತರಿದ್ದರೂ ಮನೆಗೆ ತೆರಳಿ ಹಾವು ಹಿಡಿದ ಸ್ನೇಕ್ ಶ್ಯಾಮ್!

ಕೊರೋನಾ ಎಂದ ಕೂಡಲೇ ಪ್ರತೀಯೊಬ್ಬರೂ ಬೆಚ್ಚಿಬೀಳುತ್ತಿರುವ ಆತಂಕದ ವಾತಾವರಣದ ನಡುವಲ್ಲೂ ಹಾವು ಕಾಣಿಸಿಕೊಂಡು ಭೀತಿಗೊಳಗಾಗಿದ್ದ ಕೊರೋನಾ ಸೋಂಕಿತರ ಮನೆಯೊಳಗೆ ತೆರಳಿದ ಉರಗ ತಜ್ಞ ಶ್ಯಾಮ್ ಅವರು, ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ಸ್ನೇಕ್ ಶ್ಯಾಮ್
ಸ್ನೇಕ್ ಶ್ಯಾಮ್

ಮೈಸೂರು: ಕೊರೋನಾ ಎಂದ ಕೂಡಲೇ ಪ್ರತೀಯೊಬ್ಬರೂ ಬೆಚ್ಚಿಬೀಳುತ್ತಿರುವ ಆತಂಕದ ವಾತಾವರಣದ ನಡುವಲ್ಲೂ ಹಾವು ಕಾಣಿಸಿಕೊಂಡು ಭೀತಿಗೊಳಗಾಗಿದ್ದ ಕೊರೋನಾ ಸೋಂಕಿತರ ಮನೆಯೊಳಗೆ ತೆರಳಿದ ಉರಗ ತಜ್ಞ ಶ್ಯಾಮ್ ಅವರು, ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಬುಧವಾರ ಮೈಸೂರು ಮೂಲಕ ವ್ಯಕ್ತಿಯೊಬ್ಬರು ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿದ್ದು, ಮನೆಯಲ್ಲಿ ಹಾವು ಇದ್ದು ಆತಂಕ ಶುರುವಾಗಿದೆ. ತಂದೆಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಮನೆಯಲ್ಲಿ ಎಲ್ಲರೂ ಐಸೋಲೇಷನ್ ನಲ್ಲಿದ್ದೇವೆಂದು ತಿಳಿಸಿದ್ದಾರೆ. 

ಕೂಡಲೇ ವೈರಸ್ ಇರುವುದನ್ನೂ ಬದಿಗೊತ್ತಿದ ಶ್ಯಾಮ್ ಅವರು 15 ನಿಮಿಷಗಳಲ್ಲಿ ಮನೆಗೆ ತೆರಳಿ ಮನೆಯ ಮೂಲೆಯಲ್ಲಿ ಅಡಗಿ ಕುಳಿತಿದ್ದ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ಸೋಂಕಿತ ವ್ಯಕ್ತಿ ಕೊಠಡಿಯಲ್ಲಿ ಪ್ರತ್ಯೇಕವಾಗಿದ್ದರು. ನನಗೂ ಆತಂಕವಿತ್ತು. ಸೋಂಕಿತರ ವ್ಯಕ್ತಿಯ ಪತ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ಕೊಠಡಿಯಲ್ಲಿಯೇ ಹಾವು ಇದ್ದದ್ದು, ಸಾಕಷ್ಟು ಆತಂಕ ಸೃಷ್ಟಿಸಿತ್ತು. ಪರಿಸ್ಥಿತಿ ಹೀಗಿರುವುದಾಗ ನನಗೆ ಆಲೋಚಿಸಲೂ ಕೂಡ ಸಮಯವಿರಲಿಲ್ಲ. ಕೂಡಲೇ ಸ್ಥಳಕ್ಕೆ ತೆರಳಿ 5 ನಿಮಿಷಗಳಲ್ಲಿ ಹಾವನ್ನು ಸೆರೆಹಿಡಿದೆ ಎಂದು ಸ್ನೇಕ್ ಶ್ಯಾಮ್ ಅವರು ಹೇಳಿದ್ದಾರೆ. 

ನೆರೆಮನೆಯವರೂ ಕೂಡ ನಮ್ಮನ್ನು ದೂರವಿಟ್ಟಿದ್ದು, ಸ್ನೇಕ್ ಶ್ಯಾಮ್ ಅವರು ಸೂಕ್ತ ಸಮಯಕ್ಕೆ ಮನೆಗೆ ಬಂದು ರಕ್ಷಣೆ ಮಾಡಿದ್ದಾರೆ. ಶ್ಯಾಮ್ ಅವರಿಗೆ ನಮ್ಮ ಕುಟುಂಬ ಕೃತಜ್ಞರಾಗಿದ್ದೇವೆಂದು ಸೋಂಕಿತ ವ್ಯಕ್ತಿಯ ಪತ್ನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com