ಬೆಂಗಳೂರು ಗಲಭೆ ಹಿಂದೆ ಅಡಗಿದೆ ದೊಡ್ಡ ಪಿತೂರಿ, ಮತ್ತಷ್ಟು ಮಾಹಿತಿ ಸಂಗ್ರಹಿಸಲು ಆಳವಾದ ತನಿಖೆ: ಬೊಮ್ಮಾಯಿ

ಸದ್ಯಕ್ಕೆ ಲಭಿಸಿರುವ ಮಾಹಿತಿ ಮತ್ತು ವಿಡಿಯೋ ಫೂಟೇಜ್ ಗಳನ್ನು ಗಮನಿಸಿದಾಗ ಕೆ.ಜಿ.ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದ ಗಳಬೆಯ ಹಿಂದೆ ಮುಖ್ಯವಾಗಿ ಎಸ್'ಡಿಪಿಐ ಸಂಘಟನೆಯ ಪಾತ್ರ ಬೆಳಕಿಗೆ ಬರುತ್ತಿದೆ. ಆದರೆ, ಮತ್ತಷ್ಟು ಮಾಹಿತಿ ಸಂಗ್ರಹಿಸಲು ಆಳವಾದ ತನಿಖೆ ನಡೆಸುತ್ತಿದ್ದೇವೆಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 
ಗೃಹ ಸಚಿವ ಬೊಮ್ಮಾಯಿ
ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಸದ್ಯಕ್ಕೆ ಲಭಿಸಿರುವ ಮಾಹಿತಿ ಮತ್ತು ವಿಡಿಯೋ ಫೂಟೇಜ್ ಗಳನ್ನು ಗಮನಿಸಿದಾಗ ಕೆ.ಜಿ.ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದ ಗಳಬೆಯ ಹಿಂದೆ ಮುಖ್ಯವಾಗಿ ಎಸ್'ಡಿಪಿಐ ಸಂಘಟನೆಯ ಪಾತ್ರ ಬೆಳಕಿಗೆ ಬರುತ್ತಿದೆ. ಆದರೆ, ಮತ್ತಷ್ಟು ಮಾಹಿತಿ ಸಂಗ್ರಹಿಸಲು ಆಳವಾದ ತನಿಖೆ ನಡೆಸುತ್ತಿದ್ದೇವೆಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಆರ್'ಟಿ ನಗರದ ನಿವಾಸದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಗಲಭೆ ಪೀಡಿತ ಪ್ರದೇಶಗಳ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳಲ್ಲಿ ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ನಡೆದಿರುವ ಘಟನೆಗಳ ಹಿಂದಿನ ಎಸ್'ಡಿಪಿಐನ ಪಾತ್ರದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಈ ಮಾಹಿತಿಯ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳಲು ಸನ್ನದ್ಧರಾಗಿದ್ದೇವೆಂದು ಹೇಳಿದ್ದಾರೆ. 

ಈ ಗಲಭೆಯಲ್ಲಿ ರಾಜಕಾರಣಿಗಳ ಕೈವಾಡವಿದೆಯೇ, ಸಂಘಟನೆಗಳ ಪಾತ್ರ, ಕೆಲವು ರಾಜಕೀಯ ಪಕ್ಷಗಳ ಒಳಗೆ ಮತ್ತು ಇತರೆ ಪಕ್ಷಗಳ ಜೊಚೆಗೆ ಇರುವ ವೈಮನಸ್ಸು ಹೀಗೆ ಗಲಭೆಯ ಹಿಂದಿರಬಹುದಾದ ಪ್ರತಿಯೊಂದು ಕಾರಣಗಳನ್ನೂ ಕೂಲಂಕುಷ ತನಿಖೆಗೆ ಒಳಪಡಿಸಲಾಗುವುದು. ತಪ್ಪಿತಸ್ಥರು ಜನಪ್ರತಿನಿಧಿಗಳೇ ಆಗಿರಲಿ ಅಥವಾ ಯಾರೇ ಆಗಿರಲಿ ದೊಂಬಿಗೆ ಯಾರೆಲ್ಲ ಕುಮ್ಮಕ್ಕು ಕೊಟ್ಟಿದ್ದಾರೋ ಅವರ ಮೇಲೆ ಮುಲಾಜಿಲ್ಲದೇ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com