ಗಂಟಲು ದ್ರವ ಪರೀಕ್ಷೆ ದರ ಇಳಿಕೆ ಮಾಡಲು ಟಾಸ್ಕ್ ಪೋರ್ಸ್ ಸಭೆ ನಿರ್ಧಾರ: ಡಿಸಿಎಂ ಅಶ್ವತ್ ನಾರಾಯಣ

ಗಂಟಲು ದ್ರವ ಪರೀಕ್ಷೆ ದರವನ್ನು ಇಳಿಕೆ ಮಾಡಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2,000 ರೂ ನಿಂದ 1500 ರೂ.ಗೆ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ. ಗೆ ಇಳಿಸಲಾಗಿದೆ ಎಂದು ಕಾರ್ಯಪಡೆ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ತಿಳಿಸಿದರು.
ಉಪ ಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವತ್ ನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವತ್ ನಾರಾಯಣ

ಬೆಂಗಳೂರು: ಗಂಟಲು ದ್ರವ ಪರೀಕ್ಷೆದರವನ್ನು ಇಳಿಕೆ ಮಾಡಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2,000 ರೂ ನಿಂದ 1500 ರೂ.ಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ. ಗೆ ಇಳಿಸಲಾಗಿದೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಕಾರ್ಯಪಡೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಇನ್ನು 18 ಲಕ್ಷ ಆರ್ ಟಿಸಿ ಪಿಆರ್ ಟೆಸ್ಟ್ ಕಿಟ್ ಹಾಗೂ 20 ಲಕ್ಷ ರ್ಯಾಪಿಡ್ ಆಂಟಿಜನ್ ಕಿಟ್ ಖರೀದಿಗೆ ನಿರ್ಧರಿಸಲಾಗಿದೆ. ಕಾರ್ಯಪಡೆ ಸಭೆಯಲ್ಲಿ 18 ಸಾವಿರ ಜನಕ್ಕೆ ಸಿರಾಲಜಿ ಟೆಸ್ಟ್ ಮಾಡಲು ತೀರ್ಮಾನಿಸಿದ್ದು, ರಾಜ್ಯಾದ್ಯಂತ ಸಿರಾಲಜಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 1.90 ಕೋಟಿ ರೂ. ಹಣ ಖರ್ಚಾಗುತ್ತದೆ. ರಾಜ್ಯಾದ್ಯಂತ ಸಿರಾಲಜಿ ಟೆಸ್ಟ್ ಮಾಡುತ್ತೇವೆ. ಆ ಮೂಲಕ ಯಾರಿಗೆ ಈಗಾಗಲೇ ಕೋವಿಡ್ 19 ಬಂದು ಹೋಗಿದೆ ಎಂಬ ಬಗ್ಗೆ ಪರೀಕ್ಷೆ ಎಂಬುದರ ಮಾಹಿತಿ ಸಂಗ್ರಹಿಸಲಾಗುವುದು ಎಂದರು. 

ಸಾವಿನ ಸಂಖ್ಯೆ ಕಡಿಮೆ ಮಾಡಲು ಮತ್ತಷ್ಟು ಹೆಚ್ಚುವರಿ ಅಲರಂ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಖಾಸಗಿ ಲ್ಯಾಬ್ ನಲ್ಲೂ ಈ ಟೆಸ್ಟ್ ಮಾಡಲು ನಿರ್ಧರಿಸಿದ್ದೇವೆ. ರೋಗಿ ಸೋಂಕು ಶೀಘ್ರ ಪತ್ತೆಗೆ ಹೆಚ್ಚುವರಿ ಟೆಸ್ಟ್ ಮಾಡಲಿದ್ದೇವೆ. ಮಾನ್ಯತೆ ಪಡೆದ ಲ್ಯಾಬ್ ನಿಂದ ಈ ಟೆಸ್ಟ್ ಮಾಡುತ್ತೇವೆ‌ ಎಂದರು. ಇನ್ನು ಇದೇ ವೇಳೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ 12 ಕೋಟಿ ರೂ. ಮೊತ್ತದ ವಿವಿಧ ಉಪಕರಣಗಳ ಖರೀದಿಗೆ ನಿರ್ಧರಿಸಲಾಗಿದೆ ಎಂದರು.

ಪ್ಲಾಸ್ಮಾ ತೆರಪಿ ರಾಜ್ಯಾದ್ಯಂತ ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿ ಪ್ಲಾಸ್ಮಾ ತೆರಪಿ ಮಾಡಲಿದ್ದೇವೆ. ರಾಜ್ಯದಲ್ಲಿ ಸಂಶೋಧನಾ ಪ್ರಯೋಗಾಲಯಕ್ಕೆ ಒತ್ತು ನೀಡಲು 10 ಕೋಟಿ ರೂ. ಬಿಡುಗಡೆ ಮಾಡಲಿದ್ದೇವೆ. ಬೆಂಗಳೂರು ಬಯೋ ಇನೋವೇಶನ್ ಸೆಂಟರ್ ನಲ್ಲಿ ಸಂಶೋಧನೆ ಪ್ರಾರಂಭಿಸಲಾಗುತ್ತದೆ. ಸೋಂಕು ಪತ್ತೆ,ವ್ಯಾಕ್ಸಿನ್, ಇನ್ನಿತರ ಸಂಶೋಧನೆಗೆ ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com