ಕೊರೋನಾ ವೈರಸ್: ಕರ್ನಾಟಕದಲ್ಲಿ 1 ಲಕ್ಷ ಕೋವಿಡ್ ಪರೀಕ್ಷೆ ಮಾಡಿ ದಾಖಲೆ ಬರೆದ ಕಿದ್ವಾಯಿ ಆಸ್ಪತ್ರೆ!

ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಬೆಂಗಳೂರಿನ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಕಿದ್ವಾಯಿ ಆಸ್ಪತ್ರೆ ಅಪರೂಪದ ದಾಖಲೆ ಬರೆದಿದೆ.
ಕಿದ್ವಾಯಿ ಆಸ್ಪತ್ರೆ ಕೋವಿಡ್ ಲ್ಯಾಬ್
ಕಿದ್ವಾಯಿ ಆಸ್ಪತ್ರೆ ಕೋವಿಡ್ ಲ್ಯಾಬ್

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಬೆಂಗಳೂರಿನ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಕಿದ್ವಾಯಿ ಆಸ್ಪತ್ರೆ ಅಪರೂಪದ ದಾಖಲೆ ಬರೆದಿದೆ.

ಹೌದು.. ಕೊರೋನಾ ವೈರಸ್ ಸೋಂಕಿನ ಪರೀಕ್ಷೆಯಲ್ಲಿ ಕಿದ್ವಾಯಿ ಆಸ್ಪತ್ರೆ ದಾಖಲೆ ನಿರ್ಮಿಸಿದ್ದು, ಈ ವರೆಗೂ 1 ಲಕ್ಷ ಕೋವಿಡ್ ಪರೀಕ್ಷೆ ಮಾಡಿದೆ. ಆ ಮೂಲಕ ರಾಜ್ಯದಲ್ಲಿ 1 ಲಕ್ಷ ಕೋವಿಡ್ ಪರೀಕ್ಷೆ ನಡೆಸಿದ ಮೊದಲ ಆಸ್ಪತ್ರೆ ಎಂಬ ಹೆಸರಿಗೆ ಕಿದ್ವಾಯಿ ಪಾತ್ರವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಿದ್ವಾಯಿ ಆಸ್ಪತ್ರೆಯಯಲ್ಲಿ ನೋಡಲ್ ಅಧಿಕಾರಿಯಾಗಿರುವ ಡಾ.ಸಿ ರಾಮಚಂದ್ರ ಅವರು, ಮೂರುವರೆ ತಿಂಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ 1 ಲಕ್ಷ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇಷ್ಟು ಪ್ರಮಾಣದ ಪರೀಕ್ಷೆ ನಡೆಸಿದ ರಾಜ್ಯದ ಮೊದಲ ಲ್ಯಾಬ್ ಆಗಿದೆ ಎಂದು ಹೇಳಿದ್ದಾರೆ.

 ನಿತ್ಯ ನಮ್ಮ ಲ್ಯಾಬ್ ನಲ್ಲಿ ಸರಾಸರಿ 3 ಸಾವಿರ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ 6 ರಿಂದ 7 ಸಾವಿರಕ್ಕೆ ಏರಿಕೆ ಮಾಡುವ ಕುರಿತು ಚಿಂತನೆ ಮಾಡಲಾಗುತ್ತಿದೆ. ಇದಕ್ಕಾಗಿ ನಮಗೆ ಡಾಟಾ ಎಂಟ್ರಿ ಆಪರೇಟರ್ ಗಳು, ಲ್ಯಾಬ್ ಟೆಕ್ನೀಷಿಯನ್ ಗಳ ಅಗತ್ಯವಿದೆ. ಅಲ್ಲದೆ ಕಂಪ್ಯೂಟರ್ ಗಳನ್ನು ಮತ್ತು ಇತರೆ ವಸ್ತುಗಳನ್ನು ಖರೀದಿ ಮಾಡಬೇಕು. ಬಿಬಿಎಂಪಿ ಅಧಿಕಾರಿಗಳು ಲ್ಯಾಬ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲ್ಯಾಬ್ ನ ಪರೀಕ್ಷಾ ಸಾಮಾರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚರ್ಚೆ ನಡೆಸಿದ್ದಾರೆ. ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ಭರವಸೆ ನೀಡಿದ್ದಾರೆ ಎಂದು  ಡಾ.ಸಿ ರಾಮಚಂದ್ರ ಹೇಳಿದ್ದಾರೆ.

ಲ್ಯಾಬ್ ನಲ್ಲಿ ಆರ್ ಟಿ-ಪಿಸಿಆರ್ ಟೆಸ್ಟ್ ಗೆ ಸರ್ಕಾರಿ ದರವನ್ನೇ ನಿಗದಿ ಮಾಡಲಾಗಿದೆ. ಬೇರೆ ಖಾಸಗಿ ಲ್ಯಾಬ್ ಗಳಲ್ಲಿ ಇದಕ್ಕೆ 2 ಸಾವಿರ ರೂ ನಿಗದಿ ಮಾಡಿದ್ದರೆ, ಕಿದ್ವಾಯಿ ಲ್ಯಾಬ್ ನಲ್ಲಿ ಇದೇ ಟೆಸ್ಟ್ ಗೆ 1,550 ರೂ ನಿಗದಿ ಮಾಡಲಾಗಿದೆ. ಒಂದು ಆರ್ ಟಿ-ಪಿಸಿಆರ್ ಮಷಿನ್ 384 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುತ್ತದೆ. ಇತರೆ ಮೂರು ಯಂತ್ರಗಳು 94 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com