ಡಿ.ಜೆ.ಹಳ್ಳಿ ಗಲಭೆ: ಮಾಜಿ ಮೇಯರ್ ಸಂಪತ್ ರಾಜ್ ಕೈವಾಡವಿಲ್ಲ- ಶಾಸಕ ಜಮೀರ್ ಅಹಮದ್

ಡಿ.ಜೆ.ಹಳ್ಳಿ ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡವಿದೆ ಎಂಬ ಮಾಜಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆಂಬ ಆರೋಪವನ್ನು ಸ್ವತಃ ಶಾಸಕ ಜಮೀರ್ ಅಹಮದ್ ಅಲ್ಲಗಳೆದಿದ್ದಾರೆ.

Published: 14th August 2020 12:15 PM  |   Last Updated: 14th August 2020 12:49 PM   |  A+A-


MLA Zameer Ahmed Khan-Sampath Raj

ಜಮೀರ್ ಮತ್ತು ಸಂಪತ್ ರಾಜ್ (ಫೇಸ್ ಬುಕ್ ಚಿತ್ರ)

Posted By : srinivasamurthy
Source : UNI

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡವಿದೆ ಎಂಬ ಮಾಜಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆಂಬ ಆರೋಪವನ್ನು ಸ್ವತಃ ಶಾಸಕ ಜಮೀರ್ ಅಹಮದ್ ಅಲ್ಲಗಳೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಮೀರ್ ಅಹಮದ್ ಖಾನ್ ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರ ವಾದುದು. ಕಪೋಲ ಕಲ್ಪಿತ ವರದಿಗಳನ್ನು ಪ್ರಸಾರ ಮಾಡುವ ಮೂಲಕ ಮಾಧ್ಯಮಗಳು ತಮ್ಮ ಘನತೆಗೆ ಕುಂದುಂಟು ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

'ನಿನ್ನೆಯ ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನಮ್ಮ‌ ಪಕ್ಷದ ಮುಖಂಡರಾದ ಸಂಪತ್ ಅವರ ಕೈವಾಡವಿದೆ ಎಂದು ನಾನು ಕೆಲವರ ಬಳಿ ಹೇಳಿದ್ದೇನೆ ಎಂಬ ಸುಳ್ಳು ಸುದ್ದಿ ಮಾಧ್ಯಮವೊಂದರಲ್ಲಿ ಪ್ರಸಾರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮಾಧ್ಯಮಗಳಿಗೆ ನನ್ನದೊಂದು ಮನವಿ, ದಯವಿಟ್ಟು ಕಲ್ಪಿತ ವರದಿಗಳನ್ನು ಪ್ರಸಾರ ಮಾಡಿ ಜನರಿಗೆ ತಪ್ಪು ಸಂದೇಶ ನೀಡಬೇಡಿ'.

'ಹಲವು ವರ್ಷಗಳಿಂದ ಸಂಪತ್ ಅವರು ನನಗೆ ಪರಿಚಿತರು. ಅವರು ನಮ್ಮ ಪಕ್ಷದ ಕಾರ್ಪೊರೇಟರ್ ಕೂಡ ಹೌದು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವೆಂದೇ ಕರೆಯಲ್ಪಡುವ ಮಾಧ್ಯಮಗಳ ವರದಿಗಳು ವಸ್ತುನಿಷ್ಠ ಮತ್ತು ನ್ಯಾಯಯುತವಾಗಿರಬೇಕು. ಸುಳ್ಳು ಸುದ್ದಿಗಳಿಂದ ಆ ಘನತೆಗೆ ಧಕ್ಕೆಯಾಗುತ್ತದೆ' ಎಂದು ಜಮೀರ್ ಟ್ವೀಟ್ ಮಾಡಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp