ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸುತ್ತಿದ್ದ ವಿವಾಹಿತನ ಬಂಧನ

ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ‌. ವಂಚಿಸುತ್ತಿದ್ದ ವಿವಾಹಿತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸುತ್ತಿದ್ದ ವಿವಾಹಿತನ ಬಂಧನ

ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ‌. ವಂಚಿಸುತ್ತಿದ್ದ ವಿವಾಹಿತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ಗೌಡನಪಾಳ್ಯದ 34 ವರ್ಷದ ಸುಹಾಸ್ ಹರಿಪ್ರಸಾದ್ ಬಂಧಿತ ಆರೋಪಿ.ಬಂಧಿತನಿಂದ ಹೋಂಡ ಸಿಟಿ ಕಾರ್ ಅನ್ನು ಬೊಮ್ಮನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಕೆಲಸಕ್ಕೆ ಹೋಗುತ್ತಿದ್ದ ಒಂಟಿ ಯುವತಿಯರನ್ನು ಫೇಸ್ ಬುಕ್, ಡೇಟಿಂಗ್ ಆ್ಯಪ್​ಗಳ ಮೂಲಕ ಪರಿಚಯುಸುಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ದೋಚುತ್ತಿದ್ದ. ಇತ್ತೀಚೆಗೆ ಬೊಮ್ಮನಹಳ್ಳಿಯ ಯುವತಿಯೊಬ್ಬಳಿಂದ 12 ಲಕ್ಷ ಹಣ ಪಡೆದಿದ್ದನೆಂದು ಪೋಲೀಸರು ಮಾಹಿತಿ ನೀಡಿದರು,

ಸಂತ್ರಸ್ತ ಯುವತಿಗೆ ಆರೋಪಿ ಇನ್ನಿಬ್ಬರು ಯುವತಿಯರ ಜತೆ ಫೇಸ್ ಬುಕ್ ನಲ್ಲಿ ಸಂಪರ್ಕದಲ್ಲಿರುವುದು ಗೊತ್ತಾಗಿದೆ, ಆಕೆ ವಿಚಾರೈಸಿದಾಗ ಆ ಯುವತಿಯರಿಂದ ಅದಾಗಲೇ 1.40 ಲಕ್ಷ ಹಣ ಪಡೆದಿದ್ದು ಬೆಳಕಿಗೆ ಬಂದಿದೆ, ಎಚ್ಚರಗೊಂಡ ಯುವತಿ ಬೊಮ್ಮನಹಳ್ಳಿ ಪೋಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೋಲೀಸರು ಆರೋಪಿ ಸುಹಾಸ್  ನನ್ನು ಬಂಧಿಸಿ ವಿಚಾರಿಸಲಾಗಿ ಆತನಿಗೆ ಮದುವೆಯಾಗಿ ಪತ್ನಿ ಇರುವುದು ತಿಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com