ಬಾಗೇಪಲ್ಲಿ: ಮಾನಸಿಕ ಅಸ್ವಸ್ಥ ಮಗನನ್ನು ಕೊಂದು ತಾಯಿ ಆತ್ಮಹತ್ಯೆ
ಮಾನಸಿಕ ಅಸ್ವಸ್ಥನಾಗಿದ್ದ ಏಳು ವರ್ಷದ ಮಗನನ್ನು ಸಂಪಿನಲ್ಲಿ ಮುಳುಗಿಸಿ ಕೊಂದು ತಾಯುಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.
Published: 18th August 2020 08:48 PM | Last Updated: 18th August 2020 08:48 PM | A+A A-

ಚಿಕ್ಕಬಳ್ಳಾಪುರ: ಮಾನಸಿಕ ಅಸ್ವಸ್ಥನಾಗಿದ್ದ ಏಳು ವರ್ಷದ ಮಗನನ್ನು ಸಂಪಿನಲ್ಲಿ ಮುಳುಗಿಸಿ ಕೊಂದು ತಾಯುಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ.
ಕೊತ್ತಪಲ್ಲಿಯ ಶೋಭಾ ತನ್ನ ಮಗ ವಿಶಾಲ್‍ನನ್ನ ಮನೆ ಮುಂದಿನ ಸಂಪಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಆ ನಂತರ ಮನೆಯಲ್ಲಿದ್ದ ಮಹಡಿ ಮೇಲಿನ ಕೋಣೆಯಲ್ಲಿ ತಾನೂ ನೇಣಿಗೆ ಶರಣಾಗಿದ್ದಾಳೆ.
ಮಾನಸಿಕ ಅಸ್ವಸ್ಥನಾಗಿ, ನಡೆಯಲೂ ಆಗದ ವಿಶೇಷ ಚೇತನನಾಗಿದ್ದ ಮಗ ವಿಶಾಲ್ ನನ್ನು ಅನೇಕ ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಗುಣಮುಖವಾಗಿರಲಿಲ್ಲ.
ಕೆಲಸಕ್ಕೆ ತೆರಳಿದ್ದ ಪತಿ ಮನೆಗೆ ಮರಳಿಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಾಗೇಪಲ್ಲಿ ಪೋಲೀಸರು ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ತನಿಖೆ ನಡೆಸುತ್ತಿದ್ದಾರೆ.