ಚಾಮರಾಜನಗರ:  ಸ್ಮಾರ್ಟ್‌ಫೋನ್ ಕೊಡಿಸದ್ದಕ್ಕೆ ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗದೆ ಮನನೊಂದ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಸಾಗಡೆ ಎಂಬಲ್ಲಿ ನಡೆದಿದೆ. 
ಹರ್ಷಿಕಾ
ಹರ್ಷಿಕಾ

ಚಾಮರಾಜನಗರ: ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗದೆ ಮನನೊಂದ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಸಾಗಡೆ ಎಂಬಲ್ಲಿ ನಡೆದಿದೆ. 

"ಚಾಮರಾಜನಗರದ ಸಾಗಡೆ ಗ್ರಾಮದಲ್ಲಿ ನಿಗೂಢ ಕಾರಣದಿಂದ  15 ವರ್ಷದ ಬಾಲಕಿ ಹರ್ಷಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ; ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಹರ್ಷಿಕಾ ಸೋಮವಾರ ಕೀಟನಾಶಕವನ್ನು ಸೇವಿಸಿದ್ದು, ಸಂಜೆ 7 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಮೃತ ಬಾಲಕಿ ಹರ್ಷಿಕಾ ಸಾಗಡೆ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು.

ಸಧ್ಯ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ. "ಮೃತ ಬಾಲಕಿಯ ಪೋಷಕರು ಆತ್ಮಹತ್ಯೆಯ ಬಗ್ಗೆ ಲಿಖಿತ ದೂರು ನೀಡಿದ್ದಾರೆ ಮತ್ತು ಆತ್ಮಹತ್ಯೆಗೆ ಹೇಳಲಾದ ಕಾರಣ ನಿಜವೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು

ಪೊಲೀಸರ ಪ್ರಕಾರ, ಪೋಷಕರಾದ ರಾಜೇಶ್ ಮತ್ತು ಪದ್ಮಾ ಇಬ್ಬರೂ 40 ವರ್ಷದ ಆಸುಪಾಸಿನವರು. ಅವರು ಕೂಲಿ ಕಾರ್ಮಿಕರಾಗಿದ್ದಾರೆ. ಮಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಕೊಡಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದೇ ಕಾರಣದಿಂದ ಬಾಲಕಿ ತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ತಿಳಿದುಬಂದಿದ್ದರೂ  ಪೊಲೀಸರು ಇದೀಗ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ತನಿಖೆಯ ನಂತರವೇ ಸತ್ಯ ಹೊರಬರುತ್ತದೆ ಎಂದು  ಅವರು ಹೇಳೀದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com