ಗಲಭೆಕೋರರಿಗೆ ಉಗ್ರ ಸಂಘಟನೆಗಳ ಸಂಪರ್ಕವಿರುವುದು ಎನ್ಐಎ ತನಿಖೆಯಲ್ಲಿ ಬಯಲು: ಬಸವರಾಜ್ ಬೊಮ್ಮಾಯಿ 

ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಎನ್ಐಎ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ ಇದಕ್ಕಾಗಿ ರಾಜ್ಯದ ಗೃಹ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ.ಘಟನೆಯಲ್ಲಿ ಎರಡು ಉಗ್ರ ಗುಂಪುಗಳ ಸಂಪರ್ಕ ಇರುವುದನ್ನು ಎನ್ಐಎ ತನಿಖೆಯಲ್ಲಿ ಬಹಿರಂಗಪಡಿಸಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಎನ್ಐಎ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ ಇದಕ್ಕಾಗಿ ರಾಜ್ಯದ ಗೃಹ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ.ಘಟನೆಯಲ್ಲಿ ಎರಡು ಉಗ್ರ ಗುಂಪುಗಳ ಸಂಪರ್ಕ ಇರುವುದನ್ನು ಎನ್ಐಎ ತನಿಖೆಯಲ್ಲಿ ಬಹಿರಂಗಪಡಿಸಿದೆ.

ದೇಶದ ವಿರುದ್ಧ ಕೆಲಸ ಮಾಡ್ತಿರುವ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್ ಟಿ ನಗರದಲ್ಲಿ ರುವ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಂಎಸ್ ರಾಮಯ್ಯ ಕಾಲೇಜು ಆಸ್ಪತ್ರೆಯಲ್ಲಿ ಶಂಕಿತ ಉಗ್ರ ಎನ್ನುವ ಮಾಹಿತಿ ಆಧಾರದಲ್ಲಿ ವೈದ್ಯ ಹಾಗೂ ಆತನ ಸಹಚರರನ್ನು ಬಂಧಿಸಿರುವ ಬಗ್ಗೆ ಈಗಾಗಲೇ ರಾಷ್ಟ್ರೀಯ ತನಿಖಾ ದಳ ಪ್ರಕಟಣೆ ಹೊರಡಿಸಿದೆ. 

ಕೆಲ ಪ್ರಕರಣದಲ್ಲಿ ನಾನು ಅವರಿಗೆ ಸಹಕಾರ, ಅವರು ನಮಗೆ ಸಹಕಾರ ನೀಡುವುದು ಮುಂದುವರೆದಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ದೇಶದ ಸುರಕ್ಷತೆ ಆಂತರಿಕ ಸಮಸ್ಯೆ ಮತ್ತು ದೇಶದ ಗಡಿಯಾಚೆಗೆ ಇರುವ ಶಕ್ತಿಗಳು ಕೆಲಸ ಮಾಡುತ್ತಿದ್ದು ಅದರ ಮೇಲೆ ಜಂಟಿ ಕಾರ್ಯಾಚರಣೆ ಮಾಡುವುದು ಬಹಳ ಅವಶ್ಯಕವಾಗಿದೆ ಆ ನಿಟ್ಟಿನಲ್ಲಿ ನಾವು ಮುಂದುವರೆಯ ಲಿದ್ದಾರೆ ಎಂದು ಅವರು ತಿಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com