ಬೆಳಗಾವಿ: ಭಾರೀ ಮಳೆಗೆ ಮನೆ ಕುಸಿದು ವೃದ್ದ ಜೀವಂತ ಸಮಾಧಿ

ಬೆಳಗಾವಿ: ಭಾರೀ ಮಳೆಗೆ ಮನೆ ಕುಸಿದು ವೃದ್ದ ಜೀವಂತ ಸಮಾಧಿ

ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಬುಧವಾರ ಮನೆಯೊಂದು ಕುಸಿದು ಬಿದ್ದ ಪರಿಣಾಮ 70 ವರ್ಷದ ವ್ಯಕ್ತಿ ಜೀವಂತ ಸಮಾಧಿಯಾಗಿದ್ದಾರೆ.

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಬುಧವಾರ ಮನೆಯೊಂದು ಕುಸಿದು ಬಿದ್ದ ಪರಿಣಾಮ 70 ವರ್ಷದ ವ್ಯಕ್ತಿ ಜೀವಂತ ಸಮಾಧಿಯಾಗಿದ್ದಾರೆ.

ಮೃತನನ್ನು ಕಲ್ಲಪ್ಪಪರಗೌಡರ  ಎಂದು ಗುರುತಿಸಲಾಗಿದೆ, . ಭಾರಿ ಮಳೆಯಿಂದಾಗಿ ಅವರ ಮನೆ ಇಂದು ಬೆಳಗಿನ ಜಾವ 0400 ಗಂಟೆಗೆ ಕುಸಿದಿದೆ.

ಚಿಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾವಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಇತರ ಅಧಿಕಾರಿಗಳೊಂದಿಗೆ ತಪಾಸಣೆ ನಡೆಸಿದರು. ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್  "ಭಾರೀ ಮಳೆಯಿಂದ ಅನಾಹುತ ಸಂಭವಿಸಿದೆ.  ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುತ್ತದೆ" ಎಂದಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com