'ಎರಡು ವರ್ಷದ ಕಂದಮ್ಮನ ಅಂತ್ಯಕ್ರಿಯೆ ಮಾಡುವಾಗ ಹೃದಯ ವಿಲವಿಲ ಒದ್ದಾಡಿತು'

ಹೃದಯ ವಿಚಲಿತವಾಗುವುದು ಯಾವಾಗ ಎಂಬುದು ತಿಳಿದಿದೆಯೇ? 2 ವರ್ಷದ ಕಂದಮ್ಮನನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವಾಗ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ ಎಂದು ಮರ್ಸಿ ಏಂಜೆಲ್ಸ್ ಸದಸ್ಯ ಜೆಮ್ ಶೆಡ್ ರೆಹಮಾನ್ ತಿಳಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೃದಯ ವಿಚಲಿತವಾಗುವುದು ಯಾವಾಗ ಎಂಬುದು ತಿಳಿದಿದೆಯೇ? 2 ವರ್ಷದ ಕಂದಮ್ಮನನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವಾಗ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ ಎಂದು ಮರ್ಸಿ ಏಂಜೆಲ್ಸ್ ಸದಸ್ಯ ಜೆಮ್ ಶೆಡ್ ರೆಹಮಾನ್ ತಿಳಿಸಿದ್ದಾರೆ,

ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ 2 ವರ್ಷದ ಮಗು ಕೋವಿಡ್ ಗೆ ತುತ್ತಾಗಿತ್ತು,  ಸೋಮವಾರ ಬೆಳಗ್ಗೆ ಮಗು ಸಾವನ್ನಪ್ಪಿತ್ತು, ಮಗುವಿನ ಪೋಷಕರು ಪಶ್ಚಿಮ ಬಂಗಾಳದವರಾಗಿದ್ದು, ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಮ್ಮ 2 ವರ್ಷದ ಹೆಣ್ಣು ಮಗುವಿನ ಚಿಕಿತ್ಸೆಗಾಗಿ 2019ರ ಡಿಸೆಂಬರ್ ನಲ್ಲಿ ಬೆಂಗಳೂರಿಗೆ ಬಂದಿದ್ದರು. 

ಮಗುವಿಗೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲವು ವಾರಗಳ ಹಿಂದೆ ಮಗುವಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು,ಹೀಗಾಗಿ ಮಗು ಬದುಕುಳಿಯಲಿಲ್ಲ,

ಸೋಮವಾರ ಮುಂಜಾನೆ ಮಗು ಸಾವನ್ನಪ್ಪಿತ್ತು, ನಮ್ಮ ತಂಡದಿಂದ ನಾನು ಮತ್ತಿಬ್ಬರು ಸದಸ್ಯರಿಗೆ ಮಧ್ಯಾಹ್ನಕ್ಕೆ ವಿಷಯ ತಿಳಿಯಿತು. ಮಗುವಿನ ಮೃತದೇಹ ತೆಗೆದುಕೊಳ್ಳಲು ಹೋದಾಗ ಆಕೆಯ ಪೋಷಕರು ಆಘಾತಕ್ಕೀಡಾಗಿದ್ದರು, ನಮಗೂ ಕೂಡ ಇದು ಕಷ್ಟಕರ ಪರಿಸ್ಥಿತಿ ಎನಿಸಿತು. ಇದೇ ಮೊದಲ ಬಾರಿಗೆ ಕೊರೋನಾದಿಂದ ಸಾವನ್ನಪ್ಪಿದ ಅತಿ  ಕಡಿಮೆ ವಯಸ್ಸಿನ ಮೃತದೇಹ ತೆಗೆದುಕೊಂಡಿದ್ದು, ಹೆಚ್ಚಿನ ಮೃತದೇಹಗಳು 50 ವರ್ಷದ ಮೇಲ್ಪಟ್ಟವಾಗಿದ್ದವು.

ಸಂಜೆ 5ಗಂಟೆ ವೇಳೆ ಕುಡ್ಲುವಿನಲ್ಲಿರುವ ಅಂತ್ಯ ಸಂಸ್ಕಾರ ಸ್ಥಳಕ್ಕೆ ಬಂದು ಅಂತಿಮ ವಿಧಿ ವಿಧಾನ ನೆರವೇರಿಸಿದೆವು, ಇದೊಂದು ಹೃದಯ ವಿದ್ರಾವಕ ಘಟನೆಯಾಗಿತ್ತು. ನಮಗೆ ಸಂಸ್ಕಾರ ಮಾಡಲು ಆಗಲಿಲ್ಲ, ಆದರೆ ಮಾಡಲೇಬೇಕಿತ್ತು. ನನ್ನ ಸ್ವಂತ ಮಗುವಿಗೂ ಕೂಡ 2 ವರ್ಷ. ಈ ಸಮಯ ನನಗೆ ಸವಾಲಾಗಿತ್ತು. ಶವ ಸಂಸ್ಕಾರದ ನಂತರ ಸುಮಾರು 1 ಗಂಟೆ ಸಮ ಆ್ಯಂಬುನೆಲ್ಸ್ ನಲ್ಲೇ ಕುಳಿತೆವು, ಅಲ್ಲಿ ಬರೀ ಮೌನವಿತ್ತು, ನಾವು ಮೂವರು ಕೂಡ ಅದೇ ಮದುವಿನ ಬಗ್ಗೆ ಚಿಂತಿಸುತ್ತಿದ್ದೆವು ಎಂದು ಜೆಮ್ ಶೆಡ್ ರೆಹಮಾನ್
ಕಣ್ಣೀರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com