ಆಸ್ತಿವಿವಾದಕ್ಕೆ ಆರಂಭವಾದ ಜಗಳ ಓರ್ವ ಮಹಿಳೆ ಸಾವಿನೊಂದಿಗೆ ಅಂತ್ಯ.!

ಮೂರುಗುಂಟೆ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ಐವರು ವಿಷಸೇವಿಸಿ,ಮೂವರು ಸೀಮೆ ಎಣ್ಣೆಸುರಿದು ಕೊಂಡು ಒಟ್ಟು ೮ ಮಂದಿ ಆತ್ಮಹತ್ಯೆಯ ಯತ್ನಕ್ಕೆ ನಾಂದಿಯಾಗುವುದರೊಂದಿಗೆ ಓರ್ವ ಮಹಿಳೆಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಜರುಗಿದೆ.

Published: 19th August 2020 12:06 PM  |   Last Updated: 19th August 2020 12:06 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : RC Network

ಮಂಡ್ಯ: ಮೂರುಗುಂಟೆ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ಐವರು ವಿಷಸೇವಿಸಿ,ಮೂವರು ಸೀಮೆ ಎಣ್ಣೆಸುರಿದು ಕೊಂಡು ಒಟ್ಟು ೮ ಮಂದಿ ಆತ್ಮಹತ್ಯೆಯ ಯತ್ನಕ್ಕೆ ನಾಂದಿಯಾಗುವುದರೊಂದಿಗೆ ಓರ್ವ ಮಹಿಳೆಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಜರುಗಿದೆ.

ವೆಂಕಟೇಶ್ ಪತ್ನಿ ಶೈಲಾ ಎಂಬುವವರೇ ಮೃತಪಟ್ಟಿದ್ದು ನಾರಾಯಣ್, ತಿಮ್ಮಮ್ಮ, ಉತ್ತರಪ್ಪ, ಕರಿಯಪ್ಪ, ಸಿದ್ದೇಶ್,ಜಯಮ್ಮ,ಪ್ರೇಮ ಸೇರಿದಂತೆ ೮ ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ದಾಯಾದಿಗಳಾದ  ಸಿದ್ದೇಶ್ ಹಾಗೂ ನಾರಾಯಣ್ ಕುಟುಂಬದ ನಡುವೆ ಜಮೀನು ವಿವಾದ ವಿತ್ತು. ನಾರಾಯಣ್ ಎಂಬುವರ ತಾಯಿ, ಸಿದ್ದೇಶ್ ತಂದೆಯಿAದ ೨೬ ಗುಂಟೆ ಜಮೀನನ್ನು ೧೯೮೬ನೇ ಇಸಿವಿಯಲ್ಲಿ ಖರೀದಿಸಿದರಂತೆ. ಅದರಲ್ಲಿ ೧೦ ಗುಂಟೆ ಜಮೀನಿನ ದಾಖಲೆ ಸಿದ್ದೇಶ್ ಅಜ್ಜಿ ಹೆಸರಿನಲ್ಲೇ ಇತ್ತು. ಇದರಿಂದ ೧೦ ಗುಂಟೆ ಜಮೀನು ತಮ್ಮದೆಂದು ಕೆಲವು ತಿಂಗಗಳಿAದ ಸಿದ್ದೇಶ್ ಕ್ಯಾತೆ ತೆಗೆದಿದ್ದರಂತೆ. ನ್ಯಾಯಪಂಚಾಯಿತಿಯಲ್ಲಿ ಮೂರುಗುಂಟೆ ಜಮೀನು ಬಿಟ್ಟುಕೊಡುವ ತೀರ್ಮಾನವಾಗಿತ್ತು,ಆದರೂ ಭೂವಾದ ವಿಚಾರಕ್ಕೆ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಲೇ ಇತ್ತು.

ಇಂದು ಬೆಳಿಗ್ಗೆ ಆ ಜಾಗದಲ್ಲಿ ಸಿದ್ದೇಶ್ ಕುಟುಂಬ ಶೆಡ್ ಹಾಕಿಕೊಳ್ಳಲು ಮುಂದಾಗಿದ್ದು ಈ ವೇಳೆ ನಾರಯಣ್ ಕುಂಟುAಬದ ವೆಂಕಟೇಶ್ ಕುಟುಂಬದವರು ತಡೆದಿದ್ದಾರೆ. ಅತಿರೇಕದ ಜಗಳದಿಂದ ಮಾನಸಿಕವಾಗಿ ನೊಂದ ವೆಂಕಟೇಶ್ ಪತ್ನಿ ಶೈಲಾ ಹಾಗೂ ಅವರ ಅಕ್ಕ ಸೇರಿದಂತೆ ಹಲವರು ವಿಷ ಸೇವಿಸಿದ್ದಾರೆ. ಈ ಸುದ್ದಿಯಿಂದ ಹೆದರಿದ ಸಿದ್ದೇಶ್ ಸೇರಿ ಆತನ ಕುಟುಂಬದ ಮೂವರು ಸಿಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಕ್ಷಣ ಎಲ್ಲರನ್ನೂ ಗ್ರಾಮಸ್ಥರ ನೆರವಿನೊಂದಿಗೆ ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ವೆಂಕಟೇಶ್ ಪತ್ನಿ ಶೈಲಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಕೆಲವರನ್ನು ಮಂಡ್ಯ ಮಿಮ್ಸ್ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp