ವ್ಯಾಪಾರ, ವಹಿವಾಟು ಆಗುತ್ತಿಲ್ಲ, ದಿನದ ಊಟ-ತಿಂಡಿಗೆ ಪರದಾಟ:ವಲಸೆ ಕಾರ್ಮಿಕರ ಪಾಡು ಕೇಳುವವರಿಲ್ಲ!

ಉತ್ತರ ಪ್ರದೇಶದಲ್ಲಿರುವ ಕುಶಾಂಬಿಗೆ ಲಾಕ್ ಡೌನ್ ಸಮಯದಲ್ಲಿ ಹೋಗದಿರುವುದಕ್ಕೆ ಕಮಲಾಗೆ ವಿಷಾದವಿದೆ. ಕೋವಿಡ್-19 ಸಾಂಕ್ರಾಮಿಕದ ಆರಂಭದ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವಾಗ ಊರಿಗೆ ಹೋಗದೆ ಉಳಿದುಕೊಂಡ ಕಮಲಾರಂಥ ಅನೇಕ ವಲಸೆ ಕಾರ್ಮಿಕರಿದ್ದಾರೆ. ಇಂದು ಪ್ರತಿದಿನದ ಊಟ-ಒಪ್ಪತ್ತಿಗೆ ಪರದಾಡುತ್ತಿದ್ದಾರೆ.

Published: 19th August 2020 11:45 AM  |   Last Updated: 19th August 2020 11:45 AM   |  A+A-


Kamala and her kin, who came to Mysuru from Uttar Pradesh, are still struggling to earn their livelihood

ರೇಷನ್ ಗಾಗಿ ಪರದಾಡುತ್ತಿರುವ ಕಮಲಾ ಕುಟುಂಬ

Posted By : Sumana Upadhyaya
Source : The New Indian Express

ಮೈಸೂರು: ಉತ್ತರ ಪ್ರದೇಶದಲ್ಲಿರುವ ಕುಶಾಂಬಿಗೆ ಲಾಕ್ ಡೌನ್ ಸಮಯದಲ್ಲಿ ಹೋಗದಿರುವುದಕ್ಕೆ ಕಮಲಾಗೆ ವಿಷಾದವಿದೆ. ಕೋವಿಡ್-19 ಸಾಂಕ್ರಾಮಿಕದ ಆರಂಭದ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವಾಗ ಊರಿಗೆ ಹೋಗದೆ ಉಳಿದುಕೊಂಡ ಕಮಲಾರಂಥ ಅನೇಕ ವಲಸೆ ಕಾರ್ಮಿಕರಿದ್ದಾರೆ. ಇಂದು ಪ್ರತಿದಿನದ ಊಟ-ಒಪ್ಪತ್ತಿಗೆ ಪರದಾಡುತ್ತಿದ್ದಾರೆ.

ಲಾಕ್ ಡೌನ್ ಸಡಿಲಿಕೆಯಾಗಿ ವ್ಯಾಪಾರ, ಉದ್ಯಮ, ವಹಿವಾಟುಗಳೆಲ್ಲವೂ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿರುವಾಗ ಈ ಕೂಲಿ ಕಾರ್ಮಿಕರು ಊಟ-ತಿಂಡಿ, ಸಂಪಾದನೆಗಾಗಿ ಪರದಾಡುತ್ತಿದ್ದಾರೆ. ಒಂದು ರಾಷ್ಟ್ರ ಒಂದು ರೇಷನ್ ಕಾರ್ಡು ಕೂಡ ಈ ಕೂಲಿ ಕಾರ್ಮಿಕರಿಗೆ ಅಷ್ಟೊಂದು ಪ್ರಯೋಜನವಾಗಿಲ್ಲ.

ಕಮಲಾಳ ಪತಿ ಪಾನಿ ಪುರಿ ವ್ಯಾಪಾರಿ. ಅವರ ಸೋದರನ ಕುಟುಂಬ ಸಹ ಮೈಸೂರಿನಲ್ಲಿಯೇ ಇದ್ದಾರೆ. ಪಾನಿಪುರಿ ವ್ಯಾಪಾರ ಸುಧಾರಿಸಬಹುದು ಎಂದು ಭಾವಿಸುತ್ತಿದ್ದವರಿಗೆ ನಿರಾಶೆಯಾಗಿದೆ. ನಾವು ದೊಡ್ಡವರು ಮಾತ್ರವಲ್ಲದೆ ಆರು ಮಕ್ಕಳಿದ್ದಾರೆ. ನಾವು ಊಟ-ತಿಂಡಿಗಾಗಿ ಒದ್ದಾಡುತ್ತಿದ್ದೇವೆ ಎಂದು ಕಮಲಾ ಹೇಳುತ್ತಾರೆ.

ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡು ಯೋಜನೆಯಡಿ 24 ರಾಜ್ಯಗಳನ್ನು ಸೇರಿಸಿದ್ದರೂ ಕೂಡ ಹಲವು ಕೂಲಿ ಕಾರ್ಮಿಕರಿಗೆ ಇದರ ಫಲ ಸಿಕ್ಕಿಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಈ ಯೋಜನೆಯನ್ನು ತರಬಹುದಾಗಿತ್ತು, ಇದರಡಿ ಉಚಿತ ಆಹಾರಧಾನ್ಯವನ್ನು ಡಿಸೆಂಬರ್ ವರೆಗೆ ನೀಡಬೇಕಾಗಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಕ್ಕಿ, ಬೇಳೆಕಾಳಿಗಾಗಿ ಒಂದು ಪಡಿತರ ಕೇಂದ್ರಕ್ಕೆ ಹೋಗಿದ್ದೆ. ತಮ್ಮ ದಾಖಲೆ, ವಿವರ ಅಪ್ ಲೋಡ್ ಆಗಿಲ್ಲ ಎನ್ನುತ್ತಾರೆ. ಸ್ಥಳೀಯವಾಗಿ ಕಾರ್ಡು ಮಾಡಿಸಿ ಎನ್ನುತ್ತಿದ್ದಾರೆ. ಆದರೆ ನಮಗೆ ಇಲ್ಲಿಯ ವಿಳಾಸ ದಾಖಲೆ ಇಲ್ಲದೆ ಕಾರ್ಡು ಮಾಡಿಸುವುದು ಹೇಗೆ ನಮಗೆ ಸದ್ಯಕ್ಕೆ ತಕ್ಷಣಕ್ಕೆ ರೇಷನ್ ಬೇಕಾಗಿದೆ ಎನ್ನುತ್ತಾರೆ ಕಮಲಾ ಪತಿ ಹರ್ಷ ಗುಪ್ತಾ.

ಮೈಸೂರಿನ ಶ್ರೀರಾಮ್ ಪುರದಲ್ಲಿರುವ ರಾಜಸ್ತಾನದ ಮರಗೆಲಸ ಮಾಡುವ ಪ್ರಕಾಶ್, ನಮಗೆ ಎಲ್ಲಿ ಬೇಕಾದರೂ ರೇಷನ್ ತೆಗೆದುಕೊಳ್ಳಬಹುದು ಎನ್ನುತ್ತಾರೆ, ಆದರೆ ಸಿಕ್ಕಿಲ್ಲ. ತಾವು ತೆಗೆದುಕೊಂಡ ಸಾಲವನ್ನು ಕೂಡ ಮರಳಿಸಬೇಕಾಗಿದೆ ಎನ್ನುತ್ತಾರೆ.
ಈ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ. ಆಯಾ ರಾಜ್ಯ ಸರ್ಕಾರಗಳು ವಿತರಣೆ ವ್ಯವಸ್ಥೆಗೆ ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಬೇಕಿದೆ, ರಾಜಸ್ತಾನ, ಮಧ್ಯ ಪ್ರದೇಶ, ಬಿಹಾರ, ಉತ್ತರಾಖಂಡ, ರಾಜಸ್ತಾನ, ಹರ್ಯಾಣ ಮತ್ತು ಒಡಿಶಾಗಳು ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಬೇಕು ಎಂದು ಹೇಳುತ್ತಾರೆ.

Stay up to date on all the latest ರಾಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp