ಜಾಲತಾಣಗಳಲ್ಲಿ ಚಾರಿತ್ರ್ಯ ವಧೆ ಸಂದೇಶ: ಕ್ರಮಕ್ಕೆ ಶಾಸಕ ಎನ್.ಮಹೇಶ್ ಮನವಿ

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗಳ ಚಾರಿತ್ರ್ಯವಧೆಯಾಗುವಂತಹ ಸಂದೇಶ ಗಳನ್ನು ಹರಡುವುದಕ್ಕೆ ನಿಯಂತ್ರಣ ಮಾಡದಿದ್ದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ.ಹೀಗಾಗಿ ವ್ಯಕ್ತಿತ್ವ ಚಾರಿತ್ರ್ಯವಧೆಯಾಗುವಂತಹ ಸಂದೇಶಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಮನವಿ ಮಾಡಿದ್ದಾರೆ.
ಶಾಸಕ ಎನ್. ಮಹೇಶ್
ಶಾಸಕ ಎನ್. ಮಹೇಶ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗಳ ಚಾರಿತ್ರ್ಯವಧೆಯಾಗುವಂತಹ ಸಂದೇಶ ಗಳನ್ನು ಹರಡುವುದಕ್ಕೆ ನಿಯಂತ್ರಣ ಮಾಡದಿದ್ದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ.ಹೀಗಾಗಿ ವ್ಯಕ್ತಿತ್ವ ಚಾರಿತ್ರ್ಯವಧೆಯಾಗುವಂತಹ ಸಂದೇಶಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಸಂದೇಶಗಳನ್ನು ಹರಿಬಿಡುತ್ತಿರುವ ಕುರಿತು ಮಾಹಿತಿ ನೀಡಿದರು.ತಮ್ಮ ಚಾರಿತ್ರ್ಯವಧೆ ಮಾಡ ಲಾಗುತ್ತಿದ್ದು, ಆ ರೀತಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಕೆಲವರು ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುತ್ತಿದ್ದು, ಸಮುದಾಯ, ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ.ಇದನ್ನು ನಿಯಂತ್ರಣ ಮಾಡಲು ಶಕ್ತಿಯುತವಾಗಿ ಕೆಲಸ ಮಾಡಬೇಕು.ಸೈಬರ್ ಕ್ರೈಂ ಅನ್ನು ಮತ್ತಷ್ಟು ಶಕ್ತಿಯುತವಾಗಿ ಮಾಡಬೇಕು. ಪ್ರತಿ ಜಿಲ್ಲೆಯಲ್ಲೂ ಈ ಬಗ್ಗೆ ನಿಗಾವಹಿಸಬೇಕು.ಚಾರಿತ್ರ್ಯವಧೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾಗಿ ಹೇಳಿದರು.     
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com