ಡಿಜೆ ಹಳ್ಳಿ ಗಲಭೆಯಲ್ಲಿ ಪಿಎಫ್ಐ  ಎಸ್ ಡಿ ಪಿಐ ಪಾತ್ರ: ಪೊಲೀಸರ ವರದಿಗಾಗಿ ಕಾಯುತ್ತಿರುವ ಸರ್ಕಾರ

ಆಗಸ್ಟ್ 11 ರಂದು ನಡೆದ ಡಿಜೆಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಯಾವೂದಾದರೂ  ಸಂಘಟನೆಯ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರ ವರದಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.
ಡಿಜೆ ಹಳ್ಳಿ ಹಿಂಸಾಚಾರ
ಡಿಜೆ ಹಳ್ಳಿ ಹಿಂಸಾಚಾರ

ಬೆಂಗಳೂರು: ಆಗಸ್ಟ್ 11 ರಂದು ನಡೆದ ಡಿಜೆಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಯಾವೂದಾದರೂ  ಸಂಘಟನೆಯ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರ ವರದಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.

ಶಾಸಕ ಅಖಂಡ ಶ್ರೀನಿವಾಸ್​ ನಿವಾಸ ಹಾಗೂ ಪೊಲೀಸ್​ ಠಾಣೆ ಧ್ವಂಸ ಮಾಡಿದ ಪ್ರಕರಣದಲ್ಲಿ ಸಂಘಟನೆಯ ಕೈವಾಡ ಇದೆ ಎಂದು ಹೇಳಾಗಿತ್ತು. ಹಿಂಸಾಚಾರ, ಗಲಭೆಗಳ ಪ್ರಚೋದನೆ ಮತ್ತು ಅದರ ನಂತರದ ಘಟನೆಗಳ ಬಗ್ಗೆ ಸಂಪುಟ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಲಾಯಿತು.

ಪಿಎಫ್ ಐ ಸಂಘಟನೆಯನ್ನು ಬ್ಯಾನ್​ ಮಾಡಲು  ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಲಾಗಿದ್ದು, ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

1981ರ ಸಾರ್ವಜನಿಕ ಆಸ್ತಿಪಾಸ್ತಿ ಭಂಗ ತಿದ್ದುಪಡಿ ಕಾಯಿದೆ ಹಾಗೂ ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಕಾಯಿದೆ ಅನ್ವಯ ಎಸ್‌ಡಿಪಿಐ ನಿಷೇಧ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ. ಆದರೆ ಎಸ್‌ಡಿಪಿಐ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಅದನ್ನು ನಿಷೇಧಿಸುವ ಅಧಿಕಾರ ವ್ಯಾಪ್ತಿ ರಾಜ್ಯ ಸರಕಾರಕ್ಕೆ ಇದೆಯೇ ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ಸುದೀರ್ಘ ವರದಿ ಪಡೆದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ

ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ''ಎಸ್‌ಡಿಪಿಐ ನಿಷೇಧಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಆದರೆ ಅದಕ್ಕೆ ಸಾಕಷ್ಟು ಪ್ರಕ್ರಿಯೆಗಳು ಇರುವುದರಿಂದ ಆ ಎಲ್ಲ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ನಡೆ ಇಡಲು ನಿರ್ಧರಿಸಲಾಗಿದೆ,'' ಎಂದರು.

'ಎಸ್‌ಡಿಪಿಐ ನಿಷೇಧ ವಿಚಾರದಲ್ಲಿ ಪೊಲೀಸ್‌ ಇಲಾಖೆಯಿಂದ ನಮಗೆ ಇದುವರೆಗೆ ಯಾವುದೇ ವರದಿ ಬಂದಿಲ್ಲ. ತನಿಖೆ ನಡೆಯುತ್ತಿದೆ. ಸೂಕ್ತ ದಾಖಲೆಗಳೊಂದಿಗೆ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ. ಆದರೆ ಗಲಭೆಕೋರರಿಂದ ಆಸ್ತಿ ಹಾನಿ ವಸೂಲಿ ಮಾಡುವ ನಿರ್ಧಾರದಲ್ಲಿ ಸರಕಾರದ ನಿಲುವು ದೃಢವಾಗಿದೆ.

ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಕಾಯಿದೆ, 1981ರ ಸಾರ್ವಜನಿಕ ಆಸ್ತಿಪಾಸ್ತಿ ಭಂಗ ಕಾಯಿದೆ ಅನ್ವಯ ಹಾನಿ ವಸೂಲಿ ಮಾಡುತ್ತೇವೆ. ಇದಕ್ಕೆ ಸಂಬಂಧಪಟ್ಟ ಎಲ್ಲಪ್ರಕ್ರಿಯೆಗಳು ಜಾರಿಯಲ್ಲಿವೆ. ಕ್ಲೇಮ್‌ ಕಮಿಷನರ್‌ ನೇಮಕವಾದ ತಕ್ಷಣ ಇದನ್ನು ಜಾರಿ ಮಾಡುತ್ತೇವೆ,'' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com