ಚಿಕ್ಕಮಗಳೂರು: ಚಿಪ್ಪುಹಂದಿ ವ್ಯಾಪಾರ ನಡೆಸಿದ್ದ 10 ಮಂದಿಯ ಗ್ಯಾಂಗ್ ಅರೆಸ್ಟ್
ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದ ಚಿಕ್ಕಮಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಚಿಪ್ಪುಹಂದಿ ವ್ಯಾಪಾರ ದಂಧೆಯನ್ನು ಭೇದಿಸಿದೆ ಮತ್ತು ಚೀನಾದ ಸಾಂಪ್ರದಾಯಿಕ ಔಷಧದ ತಯಾರಿಕೆಯಲ್ಲಿ ಹೆಚ್ಚು ಬೇಡಿಕೆಯಿರುವ ಸಸ್ತನಿಗಳ ಚಿಪ್ಪನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಈವರೆಗೆ 10 ಜನರನ್ನು ಬಂಧಿಸಲಾಗಿದೆ.
Published: 21st August 2020 11:55 AM | Last Updated: 21st August 2020 11:55 AM | A+A A-

ಚಿಪ್ಪುಹಂದಿ ವ್ಯಾಪಾರ ನಡೆಸಿದ್ದ 10 ಮಂದಿಯ ಗ್ಯಾಂಗ್
ಚಿಕ್ಕಮಗಳುರು: ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದ ಚಿಕ್ಕಮಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಚಿಪ್ಪುಹಂದಿ ವ್ಯಾಪಾರ ದಂಧೆಯನ್ನು ಭೇದಿಸಿದೆ ಮತ್ತು ಚೀನಾದ ಸಾಂಪ್ರದಾಯಿಕ ಔಷಧದ ತಯಾರಿಕೆಯಲ್ಲಿ ಹೆಚ್ಚು ಬೇಡಿಕೆಯಿರುವ ಸಸ್ತನಿಗಳ ಚಿಪ್ಪನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಈವರೆಗೆ 10 ಜನರನ್ನು ಬಂಧಿಸಲಾಗಿದೆ.
"10 ಸದಸ್ಯರ ಚಿಪ್ಪುಹಂದಿ ವ್ಯಾಪಾರ ಗ್ಯಾಂಗ್ ಅನ್ನು ಮಂಗಳವಾರ ಬಂಧಿಸಲಾಗಿದೆ. ಇದೀಗ ನಾವು ಗ್ಯಾಂಗ್‌ನ 11 ನೇ ಸದಸ್ಯ ರಮೇಶ್ ಗಾಗಿ ಬೆಂಗಳೂರಿನಲ್ಲಿ ಶೋಧಕಾರ್ಯ ನಡೆಸಿದ್ದೇವೆ. " ಎಂದು ಚಿಕ್ಕಮಗಳೂರಿನ ಅರಣ್ಯ ಉಪ ಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರು ಪಟ್ಟಣದ ಉಪ್ಪಳ್ಳಿಯ ಅಬ್ದುಲ್ ರೆಹಮಾನ್, ಕಳಸಾಪುರದ ನವೇದ್ ಬಾಷಾ, ಹೊಸಂಬಳದ ಧರ್ಮೇಶ ಹಾಗೂ ಮಲ್ಲೇಶ, ನಾಗರಹಳ್ಳಿಯ ಮಹೇಂದ್ರ, ಸಖರಾಯಪಟ್ಟಣದ ಶ್ರೀನಿವಾಸ, ಪ್ರದೀಪ್ ಹಗೂ ವಿಶ್ವನಾಥ್, ಸುಂದರೇಶ್ ಮತ್ತು ಜಾವಗಲ್ ನ ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ.
10 ಆರೋಪಿಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದ್ದು, ಅವರಿಂದ ಮೂರು ಚಿಪ್ಪುಹಂದಿ ಚಿಪ್ಪು, ಆರು ಸೆಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.