ಕೊರೋನಾ ಸೋಂಕು ಪ್ರಸರಣ ತಡೆಗೆ ರಾಜ್ಯ ಸರ್ಕಾರದಿಂದ 'ಸರ್ವೆ' ಪ್ರಯೋಗ

ಕರ್ನಾಟಕದಲ್ಲಿ ಕೊರೋನಾ ಸೋಂಕು ತಡೆಗೆ ಪರಿಣಾಮಕಾರಿ ಪ್ರಯೋಗಳ ಕುರಿತು ಚಿಂತಿಸುತ್ತಿರುವ ಸರ್ಕಾರ ಈ ಸಂಬಂಧ ಇದೀಗ ದೆಹಲಿ ಮಾದರಿಯಲ್ಲಿ  ಸರ್ವೇ ಕಾರ್ಯ ನಡೆಸಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕು ತಡೆಗೆ ಪರಿಣಾಮಕಾರಿ ಪ್ರಯೋಗಳ ಕುರಿತು ಚಿಂತಿಸುತ್ತಿರುವ ಸರ್ಕಾರ ಈ ಸಂಬಂಧ ಇದೀಗ ದೆಹಲಿ ಮಾದರಿಯಲ್ಲಿ  ಸರ್ವೇ ಕಾರ್ಯ ನಡೆಸಲು ಮುಂದಾಗಿದೆ.

ರಾಜ್ಯದಲ್ಲಿ ಇದುವರೆಗೂ ಎಷ್ಟು ಪ್ರಮಾಣದ ಜನರಿಗೆ ಕೊರೋನಾ ಸೋಂಕು ಹರಡಿದೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ ಎಂದು ಪ್ರತಿ ಜಿಲ್ಲೆಯಲ್ಲೂ ಸರ್ವೆ ಕಾರ್ಯ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಈ ಸಮೀಕ್ಷಾ ಕಾರ್ಯಕ್ಕೆ 18 ವರ್ಷ ಮೇಲ್ಪಟ್ಟ ವಯಸ್ಕರನ್ನು ಬಳಸಿಕೊಳ್ಳಲು  ನಿರ್ಧರಿಸಿದೆ. ಬಿಬಿಎಂಪಿಯ ಎಲ್ಲಾ 8 ವಲಯಗಳು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 38 ಘಟಕಗಳಲ್ಲಿ ಕೋವಿಡ್‌ ನಿಂದ ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಅಪಾಯವಿರುವ ಮೂರು ವರ್ಗದ ಜನರಿಗೆ ಈ ಸರ್ವೆ ನಡೆಸಲಾಗುತ್ತದೆ. 

ಎಎನ್‌ಸಿ ಚಿಕಿತ್ಸಾಲಯಗಳಿಗೆ ಬರುವ ಗರ್ಭಿಣಿಯರು, ಮಕ್ಕಳು ಸೇರಿದಂತೆ ಆಸ್ಪತ್ರೆಗಳಿಗೆ ಬರುವ ಹೊರ ರೋಗಿಗಳು (ಕಡಿಮೆ ಅಪಾಯದ ವರ್ಗ), ಬಸ್‌ ಕಂಡಕ್ಟರ್‌, ಆಟೋ ಡ್ರೈವರ್‌, ತರಕಾರಿ ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳು, ವೈದ್ಯರು, ಲ್ಯಾಬ್‌ ತಂತ್ರಜ್ಞರು, ರೇಡಿಯೋಗ್ರಾಫರ್‌ಗಳು, ಆಂಬ್ಯುಲೆನ್ಸ್‌ ಸಿಬ್ಬಂದಿ,  ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರು, ಕಂಟೈನ್ಮೆಂಟ್‌ ಝೋನ್‌ಗಳಲ್ಲಿನ ಜನರು, ಮಾಲ್‌, ಮಾರುಕಟ್ಟೆ, ರೀಟೇಲ್‌ ಮಳಿಗೆ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಸಿಗುವ ಜನರು, ಪೌರಕಾರ್ಮಿಕರು, ವೇಸ್ಟ್‌ ಪಿಕ್ಕ​ರ್‍ (ಮಧ್ಯಮ ಅಪಾಯದ ವರ್ಗ), 60 ವರ್ಷ ಮೇಲ್ಪಟ್ಟ  ವಯೋವೃದ್ಧರು, ಕಿಡ್ನಿ ಸಮಸ್ಯೆ, ಹೃದ್ರೋಗ, ಕ್ಯಾನ್ಸರ್‌, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಪೂರ್ವ ಕಾಯಿಲೆಗಳಿಂದ ಬಳಲುತ್ತಿರುವ ಜನರ (ಹೆಚ್ಚಿನ ಅಪಾಯದ ವರ್ಗ) ಪರೀಕ್ಷೆ ಮೂಲಕ ಈ ಸರ್ವೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com