ನಾವು ಕೊರೋನಾ ವಾರಿಯರ್ ಗಳು, ಆದರೆ ನಾವು ಮನುಷ್ಯರಲ್ಲವೇ? ನೊಂದ ವೈದ್ಯರು

ನಂಜನಗೂಡಿನ ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ ಸರ್ಕಾರಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಮೇಲೆ ಮಾನಸಿಕವಾಗಿ ಪರಿಣಾಮ ಬೀರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಂಜನಗೂಡಿನ ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ ಸರ್ಕಾರಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಮೇಲೆ ಮಾನಸಿಕವಾಗಿ ಪರಿಣಾಮ ಬೀರಿದೆ.

ನಾವು ಕಳೆದ ಆರು ತಿಂಗಳಿಂದ ರಜೆಯಿಲ್ಲದೇ ಹಗಲು ರಾತ್ರಿ ದುಡಿಯುತ್ತಿದ್ದೇವೆ, ಕಳೆದ ಮಾರ್ಚ್ ನಿಂದ ಒಂದೇ ಒಂದು ದಿನ ರಜೆ ತೆಗೆದುಕೊಂಡಿಲ್ಲ, ನಾನು ತುಂಬಾ ದಣಿದಿದ್ದೇನೆ, ಇದರ ಜೊತೆಗೆ ನನಗೆ ಮೈಗ್ರೇನ್ ಸಮಸ್ಯೆಯಿದೆ, ಹೆಚ್ಚಿನ ಸಂಖ್ಯೆಯ ವೈದ್ಯರಿದ್ದರ್ ನಮಗೂ ವಾರದಲ್ಲಿ ಒಂದು ದಿನ ರಜೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು 55 ವರ್ಷದ
ಮಹಿಳಾ ವೈದ್ಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ನರ್ಸ್ ಗಳಿಗೆ ಯಾವುದೇ ಅವಕಾಶವಿಲ್ಲ, ಅವರು ಪ್ರತಿನಿತ್ಯ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಬೇಕು, ಪ್ರತಿದಿನ ಇಂತಿಷ್ಟು ಕೊರೋನಾ ಪರೀಕ್ಷೆ  ಮಾಡಬೇಕು ಎಂಬ ಟಾರ್ಗೆಟ್ ಇರುತ್ತದೆ.

ನಾವು ಪಿಪಿಇ ಕಿಟ್ ಗಳನ್ನು ಹಾಕಿಕೊಳ್ಳಬೇಕು ಮತ್ತು ತೆಗೆಯುತ್ತಿರಬೇಕು, ಜೊತೆಗೆ ರೋಗಿಗಳ ಮೊಬೈಲ್ ನಂಬರ್ ಬರೆದುಕೊಳ್ಳಬೇಕು,  ಓಟಿಪಿ ನಂಬರ್ ಜನರೇಟ್ ಮಾಡಬೇಕು, ಇದರ ಜೊತೆಗೆ ರೋಗಿಯ ಗಂಟಲು ದ್ರವ ತೆಗೆದುಕೊಳ್ಳಬೇಕು.  ರೋಗಿಯ ಸಂಪೂರ್ಣ ವಿವರ ಪಡೆದುಕೊಳ್ಳಬೇಕು, ಅಪಾಯದಲ್ಲಿ ನಮ್ಮ ಜೀವ ಕೈಲ್ಲಿಟ್ಟುಕೊಂಡು  ನಾವು ಕೆಲಸ
ಮಾಡಬೇಕು, ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳಿಗೆ ನಮ್ಮ ನೋವು ಸಮಸ್ಯೆ ಕೇಳಿಸುವುದೇ ಇಲ್ಲ ಎಂದಿದ್ದಾರೆ,

ವೈದ್ಯರು ಕಂಟೈನ್ ಮೆಂಟ್ ಜೋನ್ ಗಳಿಗೆ ಭೇಟಿ ನೀಡಬೇಕು, ರೋಗ ಲಕ್ಷಣವಿರುವವರ ಜೊತೆಗೆ ಮತ್ತು ಕ್ವಾರಂಟೈನ್ ನಲ್ಲಿರುವವರ ಜೊತೆಗೆ ಸಂಪರ್ಕ ಇವೆಲ್ಲಾವು ನಮ್ಮನ್ನು
ಅಪಾಯದ ಅಂಚಿಗೆ ಕೊಂಡೊಯ್ಯುತ್ತಿದೆ. 

ಇನ್ನೂ ಕೋವಿಡ್ ಅಲ್ಲದ ರೋಗಿಗಳಿಗೆ ನಿಯಮಿತವಾಗಿ ಮೂತ್ರ ಪರೀಕ್ಷೆ ಮತ್ತು ರಕ್ತ ಪರೀಕ್ಷೆ ಮಾಡುತ್ತಿರಬೇಕು. ಅದನ್ನು ಕೂಡ ನಾವೇ ಮಾಡಬೇಕು.

ಮಧ್ಯರಾತ್ರಿ ನಮಗೆ ಕರೆ ಬರುತ್ತದೆ, ಈ ವೇಳೆ ರೋಗಿಯನ್ನು ಆ್ಯಂಬುಲೆನ್ಸ್ ನಿಂದ ಶಿಫ್ಟ್ ಮಾಡಬೇಕಾಗಿರುತ್ತದೆ, ಕೆಲವೊಮ್ಮೆ ಇದ್ದಕ್ಕಿದ್ದಂತೆ ಸಾವು ಸಂಭವಿಸಿ ಬಿಡುತ್ತದೆ, ನಮ್ಮ ಆರೋಗ್ಯ ಸುಧಾರಿಸಲು ನಮಗೂ ಕೂಡ ವಿಶ್ರಾಂತಿ ಬೇಕು ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ, 

ಕೊರೋನಾ ಕರ್ತವ್ಯದಲ್ಲಿರುವ ವೈದ್ಯರು 5ರಿಂದ 10 ದಿನ ಕ್ವಾರಂಟೈನ್ ನಲ್ಲಿರಬೇಕೆಂಬ ನಿಯಮವಿದೆ, ಆದರೆ ಅಧಿಕ ಕೆಲಸದ ಒತ್ತಡದಿಂದ ಇದನ್ನು ಅನುಸರಿಸಲಾಗುತ್ತಿಲ್ಲ.

ಕಳೆದ ಮಾರ್ಚ್ ತಿಂಗಳಿನಿಂದ ನಾನು ಒಂದು ದಿನವೂ ರಜೆ ಪಡೆದಿಲ್ಲ, ನನಗೆ ಕೊರೋನಾ ಪಾಸಿಟಿವ್ ಬಂದಿದೆ, ನನ್ನ ಗರ್ಭಿಣಿ ಪತ್ನಿಗೂ ಕೊರೋನಾ ಸೋಂಕು ತಗುಲಿದೆ,  ನಾವು ಕೊರೋನಾ ವಾರಿಯರ್ ಗಳೇ, ಆದರೇ ನಾವು ಮನುಷ್ಯರಲ್ಲವೇ, ನಾವು ಟಾರ್ಗೆಟ್ ತಲುಪಿದಾಗ ನಮ್ಮನ್ನು ಯಾರು ಅಭಿನಂದಿಸುವುದಿಲ್ಲ,  ನಾವು ಅವರನ್ನು ಭೇಟಿ ಮಾಡದಿದ್ದಾಗ ನಮ್ಮ ಮೇಲೆ ಶೋಷಣೆ ನಡೆಯುತ್ತದೆ ಎಂದು ಡಾ.ವಿನಯ್ ಮಂಜುನಾಥ್ ನೊಂದು ನುಡಿದಿದ್ದಾರೆ. ಕೊರೋನಾ ಪರೀಕ್ಷೆ ದಿನಕ್ಕೆ ಇಷ್ಟು ಮಾಡಬೇಕೆಂಬ ಟಾರ್ಗೆಟ್ ಇರುತ್ತದೆ, ನಾವು ಒತ್ತಡದಲ್ಲೇ ಕೆಲಸ ಮಾಡುತ್ತೇವೆ, ನಮ್ಮ ಮೇಲೆ ಸರ್ಕಾರ ಒತ್ತಡ ಹೇರದಿದ್ದರೆ ನಾವು ಇನ್ನೂ ಉತ್ತಮವಾಗಿ ಕೆಲಸ ಮಾಡುತ್ತೇವೆ ಎಂದು ಬಾಗಲಕೋಟೆ ಜಿಲ್ಲಾ ವೈದ್ಯಾಧಿಕಾರಿ ಡಾ. ಅನಂತ್ ದೇಸಾಯಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com