ಅಮೆರಿಕಾದ ಪ್ರತಿಷ್ಠಿತ ನೌಕಾಪಡೆ ಕಾಲೇಜು ಪ್ರತಿನಿಧಿಯಾಗಿ ಕೊಡಗಿನ ಲೆ.ಕಮಾಂಡರ್ ಸೂರಜ್ ಅಯ್ಯಪ್ಪ ಆಯ್ಕೆ
ಕೊಡಗು ಮೂಲದ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರಷ್ಠಿತ ನೌಕಾಯುದ್ದ ತರಬೇತಿ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
Published: 27th August 2020 11:30 AM | Last Updated: 27th August 2020 11:30 AM | A+A A-

ಮುಕ್ಕಾಟಿರ ಸೂರಜ್ ಅಯ್ಯಪ್ಪ
ಮಡಿಕೇರಿ: ಕೊಡಗು ಮೂಲದ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರಷ್ಠಿತ ನೌಕಾಯುದ್ದ ತರಬೇತಿ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪ ಅರ್ವತೋಕ್ಲು ಮೂಲದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಂ.ಎ. ಕಾರ್ಯಪ್ಪ ಹಾಗೂ ಸರಸ್ವತಿ ಕಾರ್ಯಪ್ಪ ಅವರ ಪುತ್ರ ಸೂರಜ್ ಅಯ್ಯಪ್ಪ ಅಮೇರಿಕದಲ್ಲಿ ನಡೆಯುವ ಸಿಬ್ಬಂದಿಗಳ ತರಬೇತಿಯಲ್ಲಿ 52 ದೇಶಗಳ ಅಧಿಕಾರಿಗಳ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.
ಡೆಹ್ರಡೂನ್‍ನ ರಾಷ್ಟ್ರೀಯ ಮಿಲಿಟರಿ ಕಾಲೇಜು (ಆರ್‍ಐಎಂಸಿ)ಯಲ್ಲಿ ಶಿಕ್ಷಣ ಪಡೆದು ನೇವಲ್ ಅಕಾಡೆಮಿಯಿಂದ ‘ಅಕಾಡೆಮಿ ಕೆಡೆಟ್ ಕ್ಯಾಪ್ಟನ್ ಪದವಿ ಪಡೆದಿರುವ ಸೂರಜ್ ಅಯ್ಯಪ್ಪ 2010ರಲ್ಲಿ ಭಾರತೀಯ ನೌಕಾ ದಳದ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ‘ಚೀಫ್ ಆಫ್ ನೇವಲ್ ಸ್ಟಾಪ್’ ಬಂಗಾರದ ಪದಕ, 2010ರಲ್ಲಿ ನೌಕಾ ಪಡೆಯ ಉತ್ಕೃಷ್ಠ ಕಾರ್ಯ ನಿವಾಹಕ ಪಡೆಯ ಅಧಿಕಾರಿ, ಕಮಾಂಡಿಂಗ್ ಆಫಿಸರ್, ನೇವಲ್ ಅಕಾಡೆಮಿಯ ಬೋಧಕರಾಗಿಸಹ ಸೇವೆ ಸಲ್ಲಿಸಿದ್ದಾರೆ.
ವಿಶಾಖಪಟ್ಟಣದಲ್ಲಿ 2016ರಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ಗಾರ್ಡ್ ಆಫ್ ಹಾನರ್ ನ ಗೌರವ ಪಡೆದಿದ್ದ ಸೂರಜ್ ಅಯ್ಯಪ್ಪ ಅವರ ಪತ್ನಿ ಡಾ. ಯಮುನಾ ಅವರು ದಂತವೈದ್ಯೆಯಾಗಿ ಸೇವೆಸಲ್ಲಿಸುತ್ತಿದ್ದಾರೆ.