ಜೋಳಿಗೆಯ ಉರುಳು ಬಿಗಿಯಾಗಿ ಆನ್‌ಲೈನ್‌ ಪಾಠ ಕೇಳುತ್ತಿದ್ದ ಬಾಲಕ ಸಾವು

ಜೋಳಿಗೆಯಲ್ಲಿ ಕುಳಿತು ಆನ್​ಲೈನ್​ ಪಾಠ ಕೇಳುತ್ತಿದ್ದ ಹತ್ತು ವರ್ಷದ ಬಾಲಕನ ಕತ್ತಿಗೆ ಜೋಳಿಗೆಯ ಉರುಳು ಬಿಗಿದುಕೊಂಡಿದ್ದರಿಮದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ದರ್ಗಾಜೋಗಹಳ್ಳಿಯಲ್ಲಿ‌ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೋಳಿಗೆಯಲ್ಲಿ ಕುಳಿತು ಆನ್​ಲೈನ್​ ಪಾಠ ಕೇಳುತ್ತಿದ್ದ ಹತ್ತು ವರ್ಷದ ಬಾಲಕನ ಕತ್ತಿಗೆ ಜೋಳಿಗೆಯ ಉರುಳು ಬಿಗಿದುಕೊಂಡಿದ್ದರಿಮದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ದರ್ಗಾಜೋಗಹಳ್ಳಿಯಲ್ಲಿ‌ ನಡೆದಿದೆ.

ದರ್ಗಾಜೋಗಹಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್​ ಮೃತಪಟ್ಟ ಬಾಲಕ. ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ವಿಶ್ವಾಸ್ ಮನೆಯಲ್ಲಿದ್ದ ಎರಡು ವರ್ಷದ ಮತ್ತೊಂದು ಮಗುವನ್ನು ಮಲಗಿಸಲು ಕೋಣೆಯಲ್ಲಿ ಜೋಳಿಗೆ ಕಟ್ಟಲಾಗಿತ್ತು ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ವಿಶ್ವಾಸ್ ಆನ್ಲೈನ್  ತರಗತಿ ಕಾರಣ ರೂಮ್ ನಲ್ಲಿ ಪಾಠ ಕೇಳುತ್ತಿದ್ದ. ಅದೇ ರೂಮ್ ನಲ್ಲಿ ಎರಡು ವರ್ಷದ ಮಗು ಮಲಗಿಸಲು ಜೋಳಿಗೆ ಕಟ್ಟಿದ್ದು ಜೋಳಿಗೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದ ವಿಶ್ವಾಸ್ ಕತ್ತು ಜೋಳಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ.

ಆನ್ಲೈನ್ ತರಗತಿ ಸಮಯ ಮುಗಿದರೂ ವಿಶ್ವಾಸ್ ಹೊರಗೆ ಬರದಿದ್ದಾಗ ಮನೆಯವರು ರೂಮಿನ ಬಾಗಿಲು ತೆಗೆದು ನೋಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com