ವಾಹನಗಳ ಸಿಂಧುತ್ವ ಅವಧಿ, ತೆರಿಗೆ ಪಾವತಿಗೆ ಅವಧಿ ವಿಸ್ತರಣೆ: ಸಾರಿಗೆ ಇಲಾಖೆ ಆದೇಶ

ರಾಜ್ಯ ಸರ್ಕಾರ ವಾಹನಗಳ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ್ದು, ವಾಹನಗಳ ಸಿಂಧುತ್ವ ಅವಧಿ, ತೆರಿಗೆ ಪಾವತಿಗೆ ಅವಧಿ ಡಿಸೆಂಬರ್ 31 ರವರೆಗೆ ವಿಸ್ತರಿಸಿ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ವಾಹನಗಳ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ್ದು, ವಾಹನಗಳ ಸಿಂಧುತ್ವ ಅವಧಿ, ತೆರಿಗೆ ಪಾವತಿಗೆ ಅವಧಿ ಡಿಸೆಂಬರ್ 31 ರವರೆಗೆ ವಿಸ್ತರಿಸಿ ಆದೇಶಿಸಿದೆ.

ಮೋಟಾರು ವಾಹನಗಳ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ರಡಿಯಲ್ಲಿ ವಿತರಿಸಿರುವ ಎಲ್ಲಾ ತರಹದ ದಾಖಲಾತಿಗಳ ದಿನಾಂಕ ಫೆಬ್ರವರಿ 1 ರಿಂದ ಪೂರ್ವಾನ್ವಯವಾಗುವಂತೆ ಸಿಂಧುತ್ವ(validity) ಮುಕ್ತಾಯಗೊಂಡಿರುವಂತಹ ದಾಖಲಾತಿಗಳಿಗೆ ಸೀಮಿತಗೊಳಿಸಿ ಸಿಂಧುತ್ವ ಅವಧಿಯನ್ನು ದಿನಾಂಕ ಡಿಸೆಂಬರ್ 31 ರವರೆಗೆ ವಿಸ್ತರಿಸಿ  ಸಾರಿಗೆ ಇಲಾಖೆ ಆದೇಶಿಸಿದೆ.

ಈ ಸಂಬಂದ ಆದೇಶ ಹೊರಿಡಿಸಿರುವ ಸರ್ಕಾರ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ಮತ್ತೆ ಸಿಂಧುತ್ವ ಪಡೆದುಕೊಳ್ಳಲು ಸಮಸ್ಯೆ ತಪ್ಪಿಸಲು ಉಪ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ 2020 ಫೆಬ್ರವರಿ 1ರ ವೇಳೆಗೆ ಸಿಂಧುತ್ವ ಅವಧಿ ಮುಕ್ತಾಯಗೊಂಡಿದ್ದರು ಮಾನ್ಯವಾಗಿರುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com