ಸೆಪ್ಟೆಂಬರ್ ಕೊನೆಯ ಹೊತ್ತಿಗೆ ಕೋವಿಡ್-19 ಸಾಂಕ್ರಾಮಿಕ ಇನ್ನಷ್ಟು ಹರಡಲಿದೆಯೇ?:ತಜ್ಞರು ಏನಂತಾರೆ?

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ 9 ಸಾವಿರದ 386 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 9 ಸಾವಿರದ 792ಕ್ಕೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ 9 ಸಾವಿರದ 386 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 9 ಸಾವಿರದ 792ಕ್ಕೇರಿದೆ.

ಆದರೆ ರಾಜ್ಯ ಇನ್ನೂ ಅತ್ಯಂತ ಗರಿಷ್ಠ ಕೋವಿಡ್-19 ಪ್ರಕರಣಗಳನ್ನು ಕಂಡಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಸಾಂಕ್ರಾಮಿಕ ರೋಗಾಣು ಸೆಪ್ಟೆಂಬರ್ ಕೊನೆಯ ವೇಳೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ ಅತಿ ವೇಗವಾಗಿ ಹರಡಲಿದೆ ಎಂದು ತಜ್ಞರು ಹೇಳುತ್ತಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ತಂಡ ನಡೆಸಿರುವ ಅಧ್ಯಯನ ಪ್ರಕಾರ ಸೆಪ್ಟೆಂಬರ್ 30ರ ಹೊತ್ತಿಗೆ 26 ಲಕ್ಷ ಒಟ್ಟು ಸೋಂಕಿತ ಪ್ರಕರಣಗಳು ಆಗಬಹುದು ಎಂದು ಹೇಳಿದೆ. ಅಂಕಿ ವಿಜ್ಞಾನಗಳ ಅಧ್ಯಕ್ಷ ಪ್ರೊ. ಶಶಿಕುಮಾರ್ ಗಣೇಶನ್ ಅವರ ಪ್ರಕಾರ, ಆರು ಆಯಾಮಗಳಲ್ಲಿ ನಾವು ಅಧ್ಯಯನ ನಡೆಸಿದ್ದು, ದೇಶದಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗಗಳಿಗೆ ಅಂಕಿಅಂಶ ಆಧಾರಿತ ಕಂಪ್ಯೂಟೇಶನಲ್ ಮಾದರಿ ಮೂಲಕ ಅಧ್ಯಯನ ನಡೆಸಿದ್ದೇವೆ ಎಂದಿದ್ದಾರೆ.

ಆಗಸ್ಟ್ 6ರವರೆಗೆ ಸಂಗ್ರಹಿಸಿರುವ ದಾಖಲೆಗಳ ಪ್ರಕಾರ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಆರಂಭದ ವೇಳೆಗೆ ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗಲಿದೆ.ಸಾಂಕ್ರಾಮಿಕ ಮುಂದಿನ ದಿನಗಳಲ್ಲಿ ಯಾವ ಮಟ್ಟದಲ್ಲಿ ಇರಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಈಗಿರುವ ಟ್ರೆಂಡ್ ನೋಡಿ ಅಂದಾಜು ಹಾಕಬಹುದು. ಕೋವಿಡ್-19 ಸತತವಾಗಿ ಕಡಿಮೆಯಾಗುತ್ತಾ ಹೋದರೆ ಸಾಂಕ್ರಾಮಿಕದ ಮಟ್ಟ ಇಳಿಕೆಯಾಗುತ್ತಿದೆ ಎನ್ನಬಹುದು. ಒಂದೊಂದು ದಿನ ಒಂದೊಂದು ರೀತಿಯಿದ್ದರೆ ನಿಯಂತ್ರಣಕ್ಕೆ ಬಂದಿಲ್ಲವೆಂದೇ ಅರ್ಥ ಎನ್ನುತ್ತಾರೆ ಪ್ರೊ.ಗಣೇಶನ್.

ಮೆಟ್ರೊ ಪಾಲಿಟನ್ , ಅರೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟೊಂದು ಕಂಡುಬರುತ್ತಿಲ್ಲ. ಅಕ್ಟೋಬರ್ ಅಂತ್ಯದ ವೇಳೆಗೆ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ ಎನ್ನುತ್ತಾರೆ ರಾಜ್ಯ ಸಲಹಾ ಸಮಿತಿಯ ಸದಸ್ಯ ಮತ್ತು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಗಿರಿಧರ ಆರ್ ಬಾಬು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com