ಬಡ್ತಿ ಹೊಂದಿದ ಸಹ ಶಿಕ್ಷಕರು,ಪದವಿ ಪೂರ್ವ ಉಪನ್ಯಾಸಕರಿಗೆ 6ನೇ ವೇತನ ಶಿಫಾರಸು ಅನುಷ್ಠಾನಗೊಳಿಸಲು ಎಚ್ ಡಿಡಿ ಒತ್ತಾಯ

ಬಡ್ತಿ ಹೊಂದಿದ ಸಹ ಶಿಕ್ಷಕರು ಮತ್ತು ಪದವಿಪೂರ್ವ ಉಪನ್ಯಾಸಕರಿಗೆ ಉಂಟಾಗಿರುವ ಆರ್ಥಿಕ ನಷ್ಟವನ್ನು ಪರಿಹರಿಸುವ ಸಂಬಂಧ 6ನೇ ವೇತನ ಆಯೋಗದ ಶಿಫಾರಸ್ಸನ್ನು ಅನುಷ್ಠಾನಗೊಳಿಸುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Published: 30th August 2020 10:53 AM  |   Last Updated: 30th August 2020 10:53 AM   |  A+A-


HDDevegowda1

ಎಚ್ ಡಿ ದೇವೇಗೌಡ

Posted By : nagaraja
Source : UNI

ಬೆಂಗಳೂರು: ಬಡ್ತಿ ಹೊಂದಿದ ಸಹ ಶಿಕ್ಷಕರು ಮತ್ತು ಪದವಿಪೂರ್ವ ಉಪನ್ಯಾಸಕರಿಗೆ ಉಂಟಾಗಿರುವ ಆರ್ಥಿಕ ನಷ್ಟವನ್ನು ಪರಿಹರಿಸುವ ಸಂಬಂಧ 6ನೇ ವೇತನ ಆಯೋಗದ ಶಿಫಾರಸ್ಸನ್ನು ಅನುಷ್ಠಾನಗೊಳಿಸುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸೇವಾ ಜೇಷ್ಠತೆ ಮತ್ತು ವಿದ್ಯಾರ್ಹತೆಯ ಆಧಾರದ ಮೇಲೆ ಬಡ್ತಿ ಹೊಂದಿದ ಸಹ ಶಿಕ್ಷಕರು ಮತ್ತು ಪದವಿ ಪೂರ್ವ ಉಪನ್ಯಾಸಕರು ತಮ್ಮ ಜೊತೆಯಲ್ಲಿಯೇ ಸಮಾನ ವೃಂದದ ಸೇವೆಗೆ ಸೇರಿದ ಬಡ್ತಿ ಪಡೆಯದ ಶಿಕ್ಷಕರಿಗಿಂತ ಕಡಿಮೆ ಮೂಲ ವೇತನವನ್ನು ಹೊಂದಿರುವುದು ಸರಿಯಾದ ಕ್ರಮವಲ್ಲ.ಆರ್ಥಿಕ ಅನ್ಯಾಯಕ್ಕೆ ಒಳಗಾಗಿರುವ ಬಡ್ತಿ ಸಹ ಶಿಕ್ಷಕರು ಮತ್ತು ಉಪನ್ಯಾಸಕರ ವೇತನದಲ್ಲಿನ ತಾರತಮ್ಯವನ್ನು ಪರಿಹರಿಸುವ ಸಂಬಂಧ 6ನೇ  ವೇತನ ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಶಿಫಾರಸ್ಸು ಮಾಡಲಾಗಿದೆ.

ಈ ಶಿಫಾರಸ್ಸನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಮೂಲಕ ಬಡ್ತಿ ಉಪನ್ಯಾಸಕರು ಮತ್ತು ಸಹ ಶಿಕ್ಷಕರ ಜ್ವಲಂತ ಸಮಸ್ಯೆಯನ್ನು ನಿವಾರಿಸಲು ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಮಾಜಿ ಪ್ರಧಾನಿ ಒತ್ತಾಯಿಸಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp