2007 ಗ್ಲ್ಯಾಸ್ಗೋ ಆತ್ಮಾಹುತಿ ಬಾಂಬರ್ ಸೋದರ ಬೆಂಗಳೂರಿನಲ್ಲಿ ಎನ್ಐಎನಿಂದ ಅರೆಸ್ಟ್

38 ವರ್ಷದ ಬೆಂಗಳೂರು ಮೂಲದ ವೈದ್ಯರನ್ನು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಿದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಬೆಂಗಳೂರು ನಗರ ಪೊಲೀಸರು ನೋಂದಾಯಿಸಿರುವ 2012 ರ ಲಷ್ಕರ್-ಎ-ತೈಬಾ (ಎಲ್‌ಇಟಿ) ನೇಮಕಾತಿ ಘಟನೆಗೆ  ಸಂಬಂಧಿಸಿದಂತೆ ಡಾ.ಸಬೀಲ್ ಅಹ್ಮದ್ ನನ್ನು ಬಂಧಿಸಲಾಗಿದೆ.
ಎನ್‌ಐಎ
ಎನ್‌ಐಎ

ಬೆಂಗಳೂರು: 38 ವರ್ಷದ ಬೆಂಗಳೂರು ಮೂಲದ ವೈದ್ಯರನ್ನು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಿದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಬೆಂಗಳೂರು ನಗರ ಪೊಲೀಸರು ನೋಂದಾಯಿಸಿರುವ 2012 ರ ಲಷ್ಕರ್-ಎ-ತೈಬಾ (ಎಲ್‌ಇಟಿ) ನೇಮಕಾತಿ ಘಟನೆಗೆ  ಸಂಬಂಧಿಸಿದಂತೆ ಡಾ.ಸಬೀಲ್ ಅಹ್ಮದ್ ನನ್ನು ಬಂಧಿಸಲಾಗಿದೆ.

ಜೂನ್ 29, 2007 ರಂದು ಸ್ಕಾಟ್ಲೆಂಡ್‌ನ ಗ್ಲ್ಯಾಸ್ಗೋ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ದಾಳಿಯ ವಿಫಲ ಯತ್ನ  ನಡೆಸಿದ ಏರೋನಾಟಿಕಲ್ ಎಂಜಿನಿಯರ್ ಕಫೀಲ್ ಅಹ್ಮದ್  ನ ಕಿರಿಯ ಸಹೋದರ ಸಬೀಲ್ ಅಹ್ಮದ್. ಲಂಡನ್‌ನಲ್ಲಿದ್ದ. ಸಬೀಲ್  ನನ್ನು  ಅದೇ ವರ್ಷ ಭಾರತಕ್ಕೆ ಗಡೀಪಾರು ಮಾಡಲಾಯಿತು. ಅವನು ತನ್ನ ಮುನ್ನಿನ ಇತಿಹಾಸದ ಅರಿವಿದ್ದರೂ ತನ್ನ ಯೋಜನೆಯನ್ನು ಬಹಿರಂಗಪಡಿಸಿರಲಿಲ್ಲ. 2010 ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿ ಕಿಂಗ್ ಫಹಾದ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು ಶುಕ್ರವಾರ ಬಂಧಿಸಿ ಭಾನುವಾರ ಬೆಂಗಳೂರಿಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವನನ್ನು  ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ವಿಚಾರಣೆಗಾಗಿ ಸಬೀಲ್ ಅಹ್ಮದ್ ಕಸ್ಟಡಿಗೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಪೊಲೀಸರು ಹೇಳುತ್ತಾರೆ"ಆರೋಪಿಯನ್ನು (ಸಬೀಲ್ ಅಹ್ಮದ್) ಬೆಂಗಳೂರಿಗೆ  ಟ್ರಾಸ್ಪೋರ್ಟ್ ವಾರಂಟ್ ನಲ್ಲಿ ಕರೆತರಲಾಯಿತು ಮತ್ತು ತನಿಖೆಯ  ಅಂಗವಾಗಿ ಆತನನ್ನು ಪ್ರಶ್ನಿಸುವ ಅಗತ್ಯವಿರುವುದರಿಂದ ನಾವು ಆತನನ್ನು ಕಸ್ಟಡಿಗೆ ಕೋರುತ್ತೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣವನ್ನು ಆರಂಭದಲ್ಲಿ ಬೆಂಗಳೂರು ನಗರ ಪೊಲೀಸರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು ಮತ್ತು  ಈಗ ಇದರ ತನಿಖೆಯನ್ನು ಎನ್ಐಎ  ವಹಿಸಿಕೊಂಡಿದೆ. 

ಎಲ್‌ಇಟಿ ಬೆಂಬಲಿತ ವಿದೇಶಿ ಮೂಲದ ಭಯೋತ್ಪಾದಕರ ಜಾಲ,  ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿನ ಅವರ ಸಹಚರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ಹೂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಎನ್ಐಎ 25 ಜನರನ್ನು ಆರೋಪಿಗಳೆಂದು ಹೆಸರಿಸಿ 17 ಜನರನ್ನು ಬಂಧಿಸಿದೆ. ಅವರಲ್ಲಿ 14 ಮಂದಿ ತಪ್ಪೊಪ್ಪಿಕೊಂಡಿದ್ದಾರೆ ಮತ್ತು ಜೈಲು ಶಿಕ್ಷೆ ಅನುಭವಿಸಿದ ನಂತರ ಬಿಡುಗಡೆ ಮಾಡಲಾಗಿದೆ.  ಪಿತೂರಿಯ ಭಾಗವಾಗಿ, ಆರೋಪಿಗಳು ಆಯ್ದ ಗಣ್ಯರನ್ನು ಕೊಲ್ಲಲು ರ್ಧರಿಸಿದ್ದರು - ಪ್ರಮುಖ ರಾಜಕಾರಣಿಗಳು ಮತ್ತು ಬಲಪಂಥೀಯ ಸಿದ್ಧಾಂತಗಳಿಗೆ ಒಲವು ಹೊಂದಿದ್ದ ಪತ್ರಕರ್ತರು, ಆಗಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಇವರ ಲಿಸ್ಟ್ ನಲ್ಲಿದ್ದರು. 

ದಾಳಿ ನಡೆಸಲು, ಅವರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ, ವಾಹನಗಳು ಮತ್ತು ಉಪಕರಣಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಕೆಲವು ಆರೋಪಿಗಳನ್ನು ಸಬೀಲ್ ಅಹ್ಮದ್ ಭೇಟಿಯಾದ ಕಾರಣ, ಅವನನ್ನು  ಭಾರತಕ್ಕೆ ಗಡೀಪಾರು ಮಾಡುವಂತೆ ಎನ್ಐಎ ಸೌದಿ ಅರೇಬಿಯಾವನ್ನು ಕೋರಿತ್ತು. ಅಹ್ಮದ್ ನನ್ನು ಬಂಧಿಸಲಾಯಿತು ಮತ್ತು ಎನ್ಐಎ ಆಪಾದಿತ  ಯೋಜನೆಯಲ್ಲಿ ಭಾಗಿಯಾಗಿರುವ ಬಗ್ಗೆ ಪೋಷಕ ಸಾಕ್ಷ್ಯಗಳನ್ನು ಸಲ್ಲಿಸಿದ ನಂತರ, ಅವನನ್ನು ಗಡೀಪಾರು ಮಾಡಲಾಯಿತು. ಅವನು  ಸೌದಿ ಅರೇಬಿಯಾದಲ್ಲಿ ಈ ಪ್ರಕರಣದ ಕೆಲವು ಪ್ರಮುಖ ಆರೋಪಿಗಳನ್ನು ಭೇಟಿಯಾಗಿದ್ದ. ಭಾರತದಲ್ಲಿ ಎಲ್‌ಇಟಿಗೆ ನೇಮಕಾತಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com