ಮಳೆ, ಗಾಳಿಗೆ ಬೆಂಗಳೂರಿನಲ್ಲಿ ಧರೆಗುರುಳಿದ ಮರ: ಆಟೋ ಜಖಂ, ಚಾಲಕ-ಪ್ರಯಾಣಿಕರಿಗೆ ಗಾಯ 

ಮಳೆಗಾಲದಲ್ಲಿ ನಗರದ ಅಲ್ಲಲ್ಲಿ ಪ್ರಾಕೃತಿಕ ವಿಕೋಪಗಳು ಪ್ರತಿವರ್ಷ ಘಟಿಸುತ್ತವೆ. ತೀವ್ರ ಗಾಳಿ, ಮಳೆಗೆ ಹಲವೆಡೆ ಮರಗಳು, ಕೊಂಬೆಗಳು ಮುರಿದುಬಿದ್ದು ಅನಾಹುತ ಸಂಭವಿಸುತ್ತವೆ. ವಾಹನಗಳು ಜಖಂ ಆಗುವುದು, ಪ್ರಾಣಹಾನಿ ನಡೆಯುತ್ತಲೇ ಇವೆ. 
ಧರೆಗುರುಳಿದ ಮರಕ್ಕೆ ಸಿಕ್ಕಿ ಜಖಂಗೊಂಡ ಆಟೋರಿಕ್ಷಾ
ಧರೆಗುರುಳಿದ ಮರಕ್ಕೆ ಸಿಕ್ಕಿ ಜಖಂಗೊಂಡ ಆಟೋರಿಕ್ಷಾ

ಬೆಂಗಳೂರು: ಮಳೆಗಾಲದಲ್ಲಿ ನಗರದ ಅಲ್ಲಲ್ಲಿ ಪ್ರಾಕೃತಿಕ ವಿಕೋಪಗಳು ಪ್ರತಿವರ್ಷ ಘಟಿಸುತ್ತವೆ. ತೀವ್ರ ಗಾಳಿ, ಮಳೆಗೆ ಹಲವೆಡೆ ಮರಗಳು, ಕೊಂಬೆಗಳು ಮುರಿದುಬಿದ್ದು ಅನಾಹುತ ಸಂಭವಿಸುತ್ತವೆ. ವಾಹನಗಳು ಜಖಂ ಆಗುವುದು, ಪ್ರಾಣಹಾನಿ ನಡೆಯುತ್ತಲೇ ಇವೆ. 

ನಿನ್ನೆ ಬೆಂಗಳೂರು ನಗರದ ಕಾಟನ್ ಪೇಟೆ ಟ್ಯಾಂಕ್ ಬಂಡ್ ರಸ್ತೆಯಲ್ಲಿ ರಾತ್ರಿ ತೀವ್ರ ಗಾಳಿ ಮಳೆಗೆ ಮರವೊಂದು ಧರೆಗುರುಳಿದ್ದು ಆಟೋರಿಕ್ಷಾದ ಮೇಲೆ ಬಿದ್ದು ಜಖಂ ಆಗಿದೆ. ಚಾಲಕ ಮತ್ತು ಪ್ರಯಾಣಿಕರನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ರಕ್ಷಿಸಿದ್ದಾರೆ. ತೀವ್ರ ಪ್ರಮಾಣದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ತೀವ್ರ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು, ಕೊಂಬೆಗಳು ಧರೆಗುರುಳುವ ಘಟನೆಗಳು ನಡೆಯುತ್ತಿದ್ದು ಜನರು ಜಾಗರೂಕತೆಯಿಂದ ಓಡಾಡುವಂತೆ, ಸಾಧ್ಯವಾದಷ್ಟು ಮರಗಳಡಿಯಲ್ಲಿ ವಾಹನಗಳು ನಿಲ್ಲಿಸದಂತೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com