ವಿಜಯಪುರದ ಆರೋಗ್ಯ ಕೇಂದ್ರ
ವಿಜಯಪುರದ ಆರೋಗ್ಯ ಕೇಂದ್ರ

ಕೋವಿಡ್ ಚೇತರಿಕೆ ದರದಲ್ಲಿ ವಿಜಯಪುರ ಫಸ್ಟ್, ಶಿವಮೊಗ್ಗ ಲಾಸ್ಟ್!

ವಿಜಯಪುರದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 6,500 ಮೀರಿದೆ, ಆದರೆ  ಜಿಲ್ಲೆಯಲ್ಲಿ  ಕಳೆದ ವಾರಉತ್ತಮ ಚೇತರಿಕೆ ದರ ದಾಖಲಾಗಿದೆ.  ಮತ್ತು ರಾಜ್ಯದಲ್ಲಿ ಕೋವಿಡ್ ಚೇತರಿಕೆ ದರಪಟ್ಟಿಯಲ್ಲಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ರಾಜ್ಯ  ಕೋವಿಡ್ 19 ವಾರ್ ರೂಮ್ ಡೇಟಾದ ಪ್ರಕಾರ, “30 ಜಿಲ್ಲೆಗಳಲ್ಲಿ, ಕೇವಲ ಏಳು ಜಿಲ್ಲೆಗಳು ಮಾತ್ರ 80 ಪ್ರತಿಶತಕ್ಕಿಂತ ಹೆಚ್ಚಿನ

ಬೆಂಗಳೂರು/ವಿಜಯಪುರ: ವಿಜಯಪುರದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 6,500 ಮೀರಿದೆ, ಆದರೆ  ಜಿಲ್ಲೆಯಲ್ಲಿ  ಕಳೆದ ವಾರಉತ್ತಮ ಚೇತರಿಕೆ ದರ ದಾಖಲಾಗಿದೆ.  ಮತ್ತು ರಾಜ್ಯದಲ್ಲಿ ಕೋವಿಡ್ ಚೇತರಿಕೆ ದರಪಟ್ಟಿಯಲ್ಲಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ರಾಜ್ಯ  ಕೋವಿಡ್ 19 ವಾರ್ ರೂಮ್ ಡೇಟಾದ ಪ್ರಕಾರ, “30 ಜಿಲ್ಲೆಗಳಲ್ಲಿ, ಕೇವಲ ಏಳು ಜಿಲ್ಲೆಗಳು ಮಾತ್ರ 80 ಪ್ರತಿಶತಕ್ಕಿಂತ ಹೆಚ್ಚಿನ ಚೇತರಿಕೆ ಪ್ರಮಾಣವನ್ನು ಹೊಂದಿವೆ. ವಿಜಯಪುರ ಶೇ 85.8 ರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬಾಗಲಕೋಟೆ  84.3 ಶೇಕಡಾ ಮತ್ತು ಬೀದರ್ 82.2 ಶೇಕಡಾ. ಪಡೆದು ನಂತರ ಸ್ಥಾನಗಳಲ್ಲಿದೆ."

ಕೊಡಗು, ಚಿಕ್ಕಬಳ್ಳಾಪುರ , ಕಲಬುರಗಿ, ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳು ಶೇಕಡಾ 80 ಕ್ಕಿಂತ ಹೆಚ್ಚು ಚೇತರಿಕೆ ಪ್ರಮಾಣವನ್ನು ದಾಖಲಿಸಿದ ಇತರ ಜಿಲ್ಲೆಗಳಾಗಿದೆ. ” ಏತನ್ಮಧ್ಯೆ, ಶಿವಮೊಗ್ಗ ರಾಜ್ಯದಲ್ಲಿ ಶೇ 63.8 ರಷ್ಟು ಅತ್ಯಂತ ಕಡಿಮೆ ಚೇತರಿಕೆ ಪ್ರಮಾಣ ದಾಖಲು ಮಾಡಿದೆ. . ಭಾನುವಾರ ಬಿಡುಗಡೆಯಾದ  ಹೆಲ್ತ್ ಬುಲೆಟಿನ್ ಪ್ರಕಾರ  ವಿಜಯಪುರದಲ್ಲಿ 127 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 6,589 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ, 5,713 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ.  773 ಮಾತ್ರ ಸಕ್ರಿಯ ಪ್ರಕರಣಗಳಾಗಿವೆ.

ನಾಲ್ಕು ಹೊಸ ಸಾವಿನೊಂದಿಗೆ ಸಾವಿನ ಸಂಖ್ಯೆ 103 ಕ್ಕೆ ಏರಿದೆ. 100 ಅಥವಾ ಹೆಚ್ಚಿನ ಸಾವುನೋವುಗಳನ್ನು ದಾಖಲಿಸಿದ ರಾಜ್ಯದ 15 ನೇ ಜಿಲ್ಲೆ ವಿಜಯಪುರವಾಗಿದೆ. ಸಕ್ರಿಯ ಪ್ರಕರಣಗಳಲ್ಲಿ, ಶೇಕಡಾ 70 ಕ್ಕಿಂತ ಹೆಚ್ಚು ಜನ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಉಳಿದವರು ಕೋವಿಡ್ ಕೇರ್  ಸೆಂಟರ್ ಅಥವಾ ಜಿಲ್ಲೆಯ ಆಸ್ಪತ್ರೆಗಳಲ್ಲಿದ್ದಾರೆ. 

“ಪ್ರತಿದಿನ, ಮೂರಂಕಿಗಳ  ಪ್ರಕರಣಗಳು ವರದಿಯಾಗುತ್ತಿದ್ದರೂ, ಅಷ್ಟೇ ಸಂಖ್ಯೆಯ ಜನರು ಮನೆಗೆ ತೆರಳುತ್ತಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿ ಉಳಿದಿರುವ ರೋಗಿಗಳು  ಸರಣಿಯನ್ನು  ಮುರಿಯಲು ಮತ್ತು ಜಿಲ್ಲೆಯಲ್ಲಿ ಸಕಾರಾತ್ಮಕ ಪ್ರಕರಣಗಳನ್ನು ಕಡಿಮೆ ಮಾಡಲು  ನಮಗೆ ಸಹಾಯ ಮಾಡಿದ್ದಾರೆ. ಇಲ್ಲದಿದ್ದರೆ, ಸಂಖ್ಯೆಗಳು ಹೆಚ್ಚು ಹೆಚ್ಚಾಗುತ್ತಿದ್ದವು"  ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್  ಜಿಲ್ಲಾ ಆರೋಗ್ಯ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು.

"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು ಮತ್ತು ಅಧಿಕಾರಿಗಳ  ಪ್ರಯತ್ನಗಳು ಮತ್ತು ಸಮನ್ವಯ ಹೋಂ ಕ್ವಾರಂಟೈನ್ ನಲ್ಲಿ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ನೀಡುವುದು, ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸುವುದು ಮತ್ತು ಸಕ್ರಿಯ ರೋಗಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವುದು ಉತ್ತಮ ಚೇತರಿಕೆ ದರಗಳಿಗೆ ಸಹಾಯ ಮಾಡಿದ ಕೆಲವು ಅಂಶಗಳು. " ಬಾಗಲಕೋಟೆ  ಜೂನ್ ಮತ್ತು ಜುಲೈನಲ್ಲಿ ಕೆಟ್ಟ ಚೇತರಿಕೆ ಪ್ರಮಾಣವನ್ನು ದಾಖಲಿಸಿದ್ದರೂ ಈಗ ಒಳ್ಳೆಯ ಬೆಳವಣಿಗೆ ಸಾಧಿಸಿದೆ. ಸಧ್ಯ ಜಿಲ್ಲೆಯು ವಿಜಯಪುರದಿಂದ ನಂತರ ಎರಡನೇ ಸ್ಥಾನದಲ್ಲಿದೆ.

“ಸಕಾಲಿಕ ಚಿಕಿತ್ಸೆ, ಹೆಚ್ಚುತ್ತಿರುವ ಪರೀಕ್ಷೆಗಳು ಮತ್ತು ಖಾಸಗಿ ಆಸ್ಪತ್ರೆಗಳ ಸಮನ್ವಯವು ಜಿಲ್ಲೆಯ ಚೇತರಿಕೆಯ ಪ್ರಮಾಣವನ್ನು ಸುಧಾರಿಸಲು ಸಹಾಯ ಮಾಡಿದೆ”  ಆರೋಗ್ಯ ಅಧಿಕಾರಿ ಡಾ.ಅನಂತ್ ದೇಸಾಯಿ ಹೇಳಿದ್ದಾರೆ. ಜಿಲ್ಲೆಯಲ್ಲಿ 5,910 ಪ್ರಕರಣಗಳು ವರದಿಯಾಗಿದ್ದು, 4,991 ಡಿಸ್ಚಾರ್ಜ್, 846 ಸಕ್ರಿಯ, ಮತ್ತು 73 ಮಂದಿ ಮೃತಪಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com