ಕರ್ನಾಟಕದಲ್ಲಿ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕವೇ ಇಲ್ಲದ 1 ಲಕ್ಷ ಮಂದಿಗೆ ಕೊರೋನಾ ಸೋಂಕು!

ರಾಜ್ಯದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಒಂದೇ ದಿನ 8,852 ಮಂದಿಯಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕವೇ ಇಲ್ಲದ 1 ಲಕ್ಷ ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಒಂದೇ ದಿನ 8,852 ಮಂದಿಯಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕವೇ ಇಲ್ಲದ 1 ಲಕ್ಷ ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಇದರಲ್ಲಿ 5,238 ಸಾರಿ ಹಾಗೂ 25,875 ಐಎಲ್ಐ ಪ್ರಕರಣಗಳೂ ಕೂಡ ಇದ್ದು, ಇವರಿಗೆ ಸೋಂಕು ತಗುಲಿರುವ ಮೂಲವೇ ತಿಳಿಯದಂತಾಗಿದೆ ಎಂದು ಬಿಬಿಎಂಪಿ ವಾರ್ ರೂಮ್ ಆಗಸ್ಟ್ 29 ರಂದು ನೀಡಿರುವ ವರದಿಯಲ್ಲಿ ಮಾಹಿತಿ ನೀಡಿದೆ. 

ಪ್ರಸ್ತುತ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 3,35,928ಕ್ಕೆ ಏರಿಕೆಯಾಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ಐದೂವರೆ ಸಾವಿರ ಗಡಿ ದಾಟಿದೆ. ಇದರ ನಡುವೆ 19 ಮಂದಿ  ಸೋಂಕಿತರು ಆತ್ಮಹ್ತಯೆ ಸೇರಿದಂತೆ ಅನ್ಯ ಕಾರಣಗಳಿಂದ ಬಲಿಯಾದವರಿದ್ದಾರೆ. 

ಇನ್ನು ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 2,42,229ಕ್ಕೆ ಏರಿಕೆಯಾಗಿದೆ. ಉಳಿದ 88,091 ಸಕ್ರಿಯ ಸೋಂಕಿತರು ರಾಜ್ಯದ ವಿವಿಧ ಕೋವಿಡ್ ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರ ಮತ್ತು ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಗಂಭೀರ ಆರೋಗ್ಯ ಸ್ಥಿತಿಯ 730 ಮಂದಿ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭಾನುವಾರ ರಾಜ್ಯದಲ್ಲಿ 66,957 ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಿಂದ ಒಟ್ಟು ಪರೀಕ್ಷೆ ಸಂಖ್ಯೆ 28,52 ಲಕ್ಷ ಸಂಖ್ಯೆ ದಾಟಿದೆ. 

ಭಾನುವಾರದ ಹೊಸ ಸೋಂಕು ಪ್ರಕರಣಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು 2,821 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 1.27 ಲಕ್ಷಕ್ಕೇರಿದೆ. ಇನ್ನು ಮೈಸೂರಿನಲ್ಲಿ 734, ಬಳ್ಳಾರಿ 428, ದಾವಣಗೆರೆ 373, ಬೆಳಗಾವಿ 357, ದಕ್ಷಿಣ ಕನ್ನಡ 334, ತುಮಕೂರು 314, ಧಾರವಾಡ 300 ಪ್ರಕರಣಗಳು ಪತ್ತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com