ಜನವರಿ, ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆಯ ಸಾಧ್ಯತೆ: ಟಿಎಸಿ ವರದಿ

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿರುವಾಗಲೇ ಕೋವಿಡ್- 19 ತಾಂತ್ರಿಕ ಸಮಿತಿ, 2021ರ ಜನವರಿ- ಫೆಬ್ರವರಿಯಲ್ಲಿ ರಾಜ್ಯ ಎರಡನೇ ಸೋಂಕಿನ ಅಲೆ ಎದುರಿಸಲಿದೆ ಎಂಬ ವರದಿ ನೀಡಿದೆ.

Published: 01st December 2020 10:53 PM  |   Last Updated: 01st December 2020 10:53 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : UNI

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿರುವಾಗಲೇ ಕೋವಿಡ್- 19 ತಾಂತ್ರಿಕ ಸಮಿತಿ, 2021ರ ಜನವರಿ- ಫೆಬ್ರವರಿಯಲ್ಲಿ ರಾಜ್ಯ ಎರಡನೇ ಸೋಂಕಿನ ಅಲೆ ಎದುರಿಸಲಿದೆ ಎಂಬ ವರದಿ ನೀಡಿದೆ.

ಈ ಕುರಿತು ಸರ್ಕಾರಕ್ಕೆ ಏಳು  ಪುಟಗಳ ವರದಿ ಸಲ್ಲಿಸಿರುವ ಸಮಿತಿ, ಎರಡನೇ ಅಲೆಯನ್ನು ಗುರುತಿಸಲು ಮತ್ತು ನಿಯಂತ್ರಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಟಿಎಸಿ ಸದಸ್ಯ ಮತ್ತು ಕೋವಿಡ್-19 ರಾಜ್ಯ ನೋಡಲ್ ಅಧಿಕಾರಿ ಡಾ. ಸಿ. ಎನ್. ಮಂಜುನಾಥ್, ಅಮೆರಿಕ, ಯುರೋಪ್ ಆಸ್ಟ್ರೇಲಿಯಾದಲ್ಲಿ ಎರಡನೇ ಅಲೆ ಕಾಣಿಸಿಕೊಂಡಿದ್ದು, ದೆಹಲಿಯಲ್ಲಿ ಕೂಡಾ ಅದೇ ಪುನರಾವರ್ತನೆಯಾಗಿದೆ.

ಈ ಪ್ರವೃತ್ತಿಯನ್ನು ಗಮನಿಸಿದರೆ ಜನವರಿ ಮತ್ತು ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕೂಡಾ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದಿದ್ದಾರೆ.

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp