ಕೋವಿಡ್ ಲಸಿಕೆಗಾಗಿ 1.5 ಲಕ್ಷ ಆರೋಗ್ಯ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ

ಕೊರೋನಾ ಲಸಿಕೆಗಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಸುಮಾರು ಒಂದೂವರೆ ಲಕ್ಷ ಆರೋಗ್ಯ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧ ಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಲಸಿಕೆಗಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಸುಮಾರು ಒಂದೂವರೆ ಲಕ್ಷ ಆರೋಗ್ಯ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧ ಪಡಿಸಿದೆ. 

ಇದರಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ವೈದ್ಯರು, ಆಡಳಿತ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಮತ್ತು ಖಾಸಗಿ ವಲಯದ ಕೊರೋನಾ ವಾರಿಯರ್ಸ್ ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು.  ಲಸಿಕೆ ದಾಸ್ತಾನಿಗೆ ಬಿಬಿಎಂಪಿ ಮೂರು ಸ್ಥಳ ಗುರುತಿಸಿದೆ.  ಹೆಬ್ಬಾಳದ ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆಯೂ ಸೇರಿದೆ, ಈ ಮಾಹಿತಿಯನ್ನು ಸರ್ಕಾರಕ್ಕೂ ಸಲ್ಲಿಸಿದೆ.

ಎರಡನೇ ಹಂತದಲ್ಲಿ ಲಸಿಕೆ ಸ್ವೀಕರಿಸುವ ಜನರ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸವನ್ನು ನಾವು ಪ್ರಾರಂಭಿಸಿದ್ದೇವೆ, ಇದರಲ್ಲಿ ಪೌರ ಕಾರ್ಮಿಕರು ಮತ್ತು ದ್ವಿತೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತರು ಸೇರಿದ್ದಾರೆ.

ಎರಡನೇ ಹಂತದ ಲಸಿಕೆ ಸಂಗ್ರಹಣೆಗಾಗಿ ನಮಗೆ ವಿಸ್ತಾರವಾದ ಸ್ಥಳ ಬೇಕಾಗುತ್ತದೆ, ಪಟ್ಟಿಯೂ ದೊಡ್ಡದಾಗಿದ್ದು, ಹೆಚ್ಚಿನ ಘಟಕ ಸ್ಥಾಪಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಕರ್ನಾಟಕಕ್ಕೆ ಕೊರೋನಾ ಲಸಿಕೆ ಪೂರೈಸಲು ಬೆಂಗಳೂರು ಕೂಡ ಪ್ರಮುಖ ಸಂಗ್ರಹಣಾ ಕೇಂದ್ರವಾಗಿದೆ, ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com