ಮಿಸೆಸ್ ಇಂಡಿಯಾ ಐ ಆಮ್ ಪವರ್‍ಫುಲ್ ಸ್ಪರ್ಧೆ: ಕರ್ನಾಟಕದ ನಾಲ್ವರಿಗೆ ಕಿರೀಟ
ಗೋವಾದ ಫರ್ನ್ ಕದಂಬ ಹೋಟೆಲ್‍ನಲ್ಲಿ ಆಯೋಜನೆಗೊಂಡಿದ್ದ ಮಿಸೆಸ್ ಇಂಡಿಯಾ ಐ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Published: 01st December 2020 11:23 AM | Last Updated: 01st December 2020 11:23 AM | A+A A-

ವಿಜೇತರಾದ ಶ್ರೀದೇವಿ ಅಪ್ಪಾಚ, ಕಾರ್ತಿಕಾ ಶ್ಯಾಮ್ ಅವರೊಂದಿಗೆ ಆಯೋಜಕಿ ನಂದಿನಿ ನಾಗರಾಜ್
ಪಣಜಿ: ಗೋವಾದ ಫರ್ನ್ ಕದಂಬ ಹೋಟೆಲ್‍ನಲ್ಲಿ ಆಯೋಜನೆಗೊಂಡಿದ್ದ ಮಿಸೆಸ್ ಇಂಡಿಯಾ ಐ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಐವರು ಸ್ಪರ್ಧಿಗಳು ರಾಷ್ಟ್ರಮಟ್ಟದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ 25 ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು ನಾಲ್ಕು ವಿಭಾಗದ ಸ್ಪರ್ಧೆಗಳಲ್ಲಿ ಕರ್ನಾಟಕದ ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ.
"ಮಿಸೆಸ್ ಇಂಡಿಯಾ ಗ್ಲೋಬಲ್ ಯೂನಿವರ್ಸ್" ಸ್ಪರ್ಧೆಯಲ್ಲಿ ದಿವ್ಯಾ ನವೀನ್, ಮಿಸೆಸ್ ಇಂಡಿಯಾ ವಲ್ರ್ಡ್ ವೈಡ್ ಸ್ಪರ್ಧೆಯಲ್ಲಿ ವಾಣಿ ರೆಡ್ಡಿ, ಮಿಸೆಸ್ ಇಂಡಿಯಾ ಕರ್ವಿ ವಲ್ರ್ಡ್‍ನಲ್ಲಿ ಶ್ರೀದೇವಿ ಅಪ್ಪಾಚ, ಮಿಸೆಸ್ ಇಂಡಿಯಾ ಕರ್ವಿ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾರ್ತಿಕಾ ಶ್ಯಾಮ್ ಕಿರೀಟ ಗೆದ್ದಿದ್ದಾರೆ.