ಸಂಸದರು, ಶಾಸಕರ ಪ್ರಕರಣಗಳಲ್ಲಿ ಸಾಕ್ಷಿಗಳಿಗೆ ಭದ್ರತೆ ಕೊಡಿ: ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಪ್ರಮುಖ ರಾಜಕೀಯ ನಾಯಕರು ಅದರಲ್ಲೂ ವಿಶೇಷ ಕೋರ್ಟ್ ಗಳ ಮುಂದೆ ವಿಚಾರಣೆ ಎದುರಿಸುತ್ತಿರುವ ನಾಯಕರ ವಿರುದ್ಧ ಸಾಕ್ಷಿ ಹೇಳುವವರಿಗೆ ಸಾಕ್ಷಿ ರಕ್ಷಣಾ ಯೋಜನೆಯನ್ನು(ಡಬ್ಲ್ಯುಪಿಎಸ್)ಒದಗಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ.
Published: 02nd December 2020 08:35 AM | Last Updated: 02nd December 2020 12:53 PM | A+A A-

ಹೈಕೋರ್ಟ್
ಬೆಂಗಳೂರು: ಪ್ರಮುಖ ರಾಜಕೀಯ ನಾಯಕರು ಅದರಲ್ಲೂ ವಿಶೇಷ ಕೋರ್ಟ್ ಗಳ ಮುಂದೆ ವಿಚಾರಣೆ ಎದುರಿಸುತ್ತಿರುವ ನಾಯಕರ ವಿರುದ್ಧ ಸಾಕ್ಷಿ ಹೇಳುವವರಿಗೆ ಸಾಕ್ಷಿ ರಕ್ಷಣಾ ಯೋಜನೆಯನ್ನು(ಡಬ್ಲ್ಯುಪಿಎಸ್)ಒದಗಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ.
ಸಂಸದರು, ಶಾಸಕರಿಗೆ ಸಂಬಂಧಿಸಿದ ಕೇಸುಗಳ ವಿಚಾರಣೆಯಲ್ಲಿ ಸಾಕ್ಷಿದಾರರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಚುನಾಯಿತ ಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಕೇಸುಗಳ ತ್ವರಿತ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇರೆಗೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿ ನ್ಯಾಯಮೂರ್ತಿಗಳು ಕೆಲವು ಪ್ರಾಸಿಕ್ಯೂಷನ್ ಸಾಕ್ಷಿಗಳು ದುರ್ಬಲರಾಗಿರುತ್ತಾರೆ, ಹಾಗಾಗಿ ಅವರಿಗೆ ಕಡ್ಡಾಯವಾಗಿ ರಕ್ಷೆ ಮತ್ತು ಭದ್ರತೆ ಒದಗಿಸಬೇಕೆಂದು ಹೇಳಿದೆ.
ಇದನ್ನು ಜಾರಿಗೆ ತರಲು ಜಿಲ್ಲೆಗಳಲ್ಲಿ ಸಮರ್ಥ ಪ್ರಾಧಿಕಾರವನ್ನು(ಸಿಎ) ರಚಿಸಲಾಗುವುದು. ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್ ನ ಭಾಗವಾಗಿರುವ ವಿಶೇಷ ಕೋರ್ಟ್ ನಲ್ಲಿ ಸಮರ್ಥ ಪ್ರಾಧಿಕಾರದ ಅಧ್ಯಕ್ಷರು ಪ್ರಧಾನ ನ್ಯಾಯಾಧೀಶರಾಗಿರುತ್ತಾರೆ.ಪೊಲೀಸ್ ಆಯುಕ್ತರು ಸದಸ್ಯರಾಗಿರುತ್ತಾರೆ. ಬೆಂಗಳೂರು ನಗರಕ್ಕೆ ಮೊದಲ ಸಿಎಯನ್ನು ರಚಿಸಲು ನಾವು ಆದೇಶ ನೀಡುತ್ತಿದ್ದು ನಂತರ ಉಳಿದ ಜಿಲ್ಲೆಗಳಿಗೆ ನೀಡುತ್ತೇವೆ. ಬೆಂಗಳೂರು ನಗರದಲ್ಲಿ ಎರಡು ವಾರಗಳೊಳಗೆ ನೀಡಬೇಕು ಎಂದು ಹೈಕೋರ್ಟ್ ಆದೇಶ ಹೇಳಿದೆ.