ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಜಾಕಿರ್ ಗೆ ಡಿಸೆಂಬರ್ 16ರವರೆಗೆ ನ್ಯಾಯಾಂಗ ಬಂಧನ
ಡಿಜೆ ಹಳ್ಳಿ ಬೆಂಕಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬಂಧಿಸಿರುವ ಮಾಜಿ ಕಾರ್ಪೊರೇಟರ್ ರಾಕಿಬ್ ಜಾಕೀರ್ ಅವರಿಗೆ ಡಿಸೆಂಬರ್ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಅದೇಶಿಸಿದೆ.
Published: 03rd December 2020 03:14 PM | Last Updated: 03rd December 2020 04:05 PM | A+A A-

ಗಲಭೆಯ ದೃಶ್ಯ (ಒಳಚಿತ್ರದಲ್ಲಿ ಬಂಧಿತ ಕಾರ್ಪೊರೇಟರ್ ಜಾಕಿರ್)
ಬೆಂಗಳೂರು: ಡಿಜೆ ಹಳ್ಳಿ ಬೆಂಕಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬಂಧಿಸಿರುವ ಮಾಜಿ ಕಾರ್ಪೊರೇಟರ್ ರಾಕಿಬ್ ಜಾಕೀರ್ ಅವರಿಗೆ ಡಿಸೆಂಬರ್ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಅದೇಶಿಸಿದೆ.
ಕೋರ್ಟ್ ಗೆ ರಜೆ ಇದ್ದ ಕಾರಣ ಬಂಧಿತರಾದ ಜಾಕೀರ್ ಅವರನ್ನು ಗುರುವಾರ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಈ ವೇಳೆ ಆರೋಪಿ ಜಾಕೀರ್ ಅವರಿಗೆ ಡಿಸೆಂಬರ್ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಲಕೇಶಿನಗರ ವಾರ್ಡ್ ನ ಮಾಜಿ ಕಾರ್ಪೊರೇಟರ್ ಆಗಿರುವ ಜಾಕೀರ್ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಲಾಗುತ್ತಿದೆ. ತಿಂಗಳುಗಳಿಂದ ಪೋಲೀಸರಿಗೆ ಸಿಕ್ಕದೆ ತಲೆಮರೆಸಿಕೊಂಡಿದ್ದ ಈತನನ್ನು ನಿನ್ನೆ ತಡರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಇನ್ನು ಇದೇ ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನೂ ಬಂಧಿಸಲಾಗಿದ್ದು ಜಾಕೀರ್ ಬಂಧನದೊಡನೆ ಒಟ್ಟೂ ಪ್ರಕರಣದ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ.