ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಇನ್ನೂ ಕ್ರಮಕೈಗೊಂಡಿಲ್ಲ: ಅಖಂಡ ಶ್ರೀನಿವಾಸ ಮೂರ್ತಿ

ಡಿ.ಜೆ.ಹಳ್ಳಿ,ಕೆ.ಜಿ.ಹಳ್ಳಿ ಹಿಂಸಾಘಟನೆಯ ಆರೋಪಿಗಳ ಕುರಿತು ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಇನ್ನೂ ಕ್ರಮಕೈಗೊಂಡಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಬೆಂಗಳೂರು: ಡಿ.ಜೆ.ಹಳ್ಳಿ,ಕೆ.ಜಿ.ಹಳ್ಳಿ ಹಿಂಸಾಘಟನೆಯ ಆರೋಪಿಗಳ ಕುರಿತು ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಇನ್ನೂ ಕ್ರಮಕೈಗೊಂಡಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಜೆ.ಹಳ್ಳಿ,ಕೆ.ಜಿ.ಹಳ್ಳಿ ಹಿಂಸಾಘಟನೆಯ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಜಾಕೀರ್ ಅವರನ್ನು ಉಚ್ಛಾಟಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಪತ್ರ ಕೊಟ್ಟಿದ್ದರೂ ಸಹ ಇನ್ನೂ ಶಿಸ್ತುಪಾಲನಾ ಸಮಿತಿ ಇದೂವರೆಗೂ ಒಂದೇ ಒಂದು ನೋಟೀಸ್ ಕೂಡ ಕೊಟ್ಟಿಲ್ಲ  ಎಂದು ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನವಾಗಿದೆ ಎಂಬ ಮಾಹಿತಿ ಇದೆ. ಇದರಿಂದ ನನಗೆ ನ್ಯಾಯಸಿಗುವ ಭರವಸೆ ಇದೆ. ಸಂಪತ್ ರಾಜ್ ಮತ್ತು ಜಾಕೀರ್ ನನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಕೆಪಿಸಿಸಿ  ಅಧ್ಯಕ್ಷರಿಗೂ ಮನವಿ ಮಾಡಿದ್ದೆ. ಅವರು ಈ ಪ್ರಕರಣವನ್ನು ಶಿಸ್ತು ಸಮಿತಿಗೆ ವಹಿಸುವ ಭರವಸೆ ನೀಡಿದ್ದರು‌. ಆದರೆ ಇದುವರೆಗೆ ಶಿಸ್ತು ಸಮಿತಿಗೆ ಪ್ರಕರಣ ವರ್ಗಾಯಿಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ನನ್ನ ಮನೆಗೆ ಸಂಬಂಧಿಸಿದ ವಿಷಯ. ಹಾಗಾಗಿ ನಾನು ಏಕಾಂಗಿಯೇ ಇರುತ್ತೇನೆ  ಎಂದರು.

ಕೆಪಿಸಿಸಿ ಶಿಸ್ತು ಸಮಿತಿ ನನ್ನ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಎಐಸಿಸಿಗೆ ಪತ್ರ ಬರೆಯುತ್ತೇನೆ. ನನಗೆ ನ್ಯಾಯ ಸಿಗಬೇಕು‌. ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಬೇಕು. ಹಾಗೆಂದು ನಾನು ಪಕ್ಷ ಬಿಡುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆಯಿಲ್ಲ ಎಂದರು.

ಇದೇ ವೇಳೆ, ಇದು ನನ್ನ ಮನೆಗೆ ಸಂಬಂಧಿಸಿದ ವಿಷಯ. ಹಾಗಾಗಿ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ. ಶಿಸ್ತು ಸಮಿತಿ ಸ್ಪಂದಿಸದೇ ಇದ್ದರೆ ಎಐಸಿಸಿಗೆ ಪತ್ರ ಬರೆಯುತ್ತೇನೆ. ನನಗೆ ನ್ಯಾಯ ಸಿಗಬೇಕು‌. ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಬೇಕು. ನಾನು ಕಾಂಗ್ರೆಸ್  ಪಕ್ಷ ಬಿಡುವುದಿಲ್ಲ. ಬಿಜೆಪಿ ಪಕ್ಷ ಸೇರುವ ಪ್ರಶ್ನೆಯಿಲ್ಲ. ಅರವಿಂದ ಲಿಂಬಾವಳಿ ನನಗೆ ಸಂಬಂಧಿಕರು, ಹಾಗಾಗಿ ನನಗೆ ಬೆಂಬಲ ಸೂಚಿಸಿದ್ದಾರೆ. ಬೋವಿ ಸಮಾಜದ ಗುರುಗಳೂ ಸಹ ಬೆಂಬಲಿಸಿದ್ದಾರೆ‌. ಆದರೂ ನನ್ನ ತಂದೆ ಕಾಲದಿಂದ ನಾವು ಕಾಂಗ್ರೆಸ್ ನಲ್ಲೇ ಇದ್ದೇವೆ. ಮುಂದೆಯೂ ಕಾಂಗ್ರೆಸ್ ನಲ್ಲೇ ಇರುತ್ತೇವೆ ಎಂದು ಶ್ರೀನಿವಾಸ ಮೂರ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com