ಅಪಹರಣ ಪ್ರಕರಣ: ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತ, ಸಹೋದರನ ವಿಚಾರಣೆ 

ಮಾಜಿ ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾದಳದ ಅಧಿಕಾರಿಗಳು ಗುರುವಾರ ಪ್ರಕಾಶಅ ಅವರು ಆಪ್ತರಾಗಿರುವ ನಯಾಜ್ ಹಾಗೂ ಅವರ ಸಹೋದರ ಸಿರಾಜ್ ಅವರನ್ನು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.
ವರ್ತೂರು ಪ್ರಕಾಶ್
ವರ್ತೂರು ಪ್ರಕಾಶ್

ಬೆಂಗಳೂರು: ಮಾಜಿ ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾದಳದ ಅಧಿಕಾರಿಗಳು ಗುರುವಾರ ಪ್ರಕಾಶಅ ಅವರು ಆಪ್ತರಾಗಿರುವ ನಯಾಜ್ ಹಾಗೂ ಅವರ ಸಹೋದರ ಸಿರಾಜ್ ಅವರನ್ನು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ನಯಾಜ್ ಜಾನುವಾರು ವ್ಯಾಪಾರಿಯಾಗಿದ್ದು, ಹಲವು ವರ್ಷಗಳಿಂದರೂ ಪ್ರಕಾಶ್ ಅವರಿಗೆ ಆಪ್ತರಾಗಿದ್ದರು. ಅಪಹರಣ ಸಂದರ್ಭದಲ್ಲಿ ವರ್ತೂರು ಪ್ರಕಾಶ್ ಅವರು ನಯಾಜ್ ಅವರಿಗೆ ಕರೆ ಮಾಡಿ ಅಪಹರಣಕಾರರಿಗೆ ರೂ.50 ಲಕ್ಷ ಹಣ ನೀಡುವಂತೆ ತಿಳಿಸಿದ್ದರು. ಈ ವೇಳೆ ನಯಾದ್ ವರ್ತೂರು ಪ್ರಕಾಶ್ ಅವರ ಸಹೋದರ ಸಿರಾಜ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಬಳಿಕ ಸಿರಾಜ್ ಅವರು ರೂ.40 ಲಕ್ಷ ಹಣವನ್ನು ಹೊಂದಿಸಿ ನರಸಾಪುರದ ಬಳಿಯಿರುವ ಕಾಫಿ ಶಾಪ್ ಬಳಿ ಬಂದು ಅಪಹರಣಕಾರರಿಗೆ ರೂ.48 ಲಕ್ಷ ನೀಡಿದ್ದರು  ಎಂದು ಹೇಳಲಾಗುತ್ತಿದೆ. 

ಇದೀಗ ಈ ಸಂಬಂಧ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೊಳಪಡಿಸಿದ್ದು, ಇಬ್ಬರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಪೊಲೀಸರು ನಾಲ್ವರು ಶಂಕಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದು 8 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕಾಶ್ ಅವರು ಏನನ್ನೋ ಮುಚ್ಚಿಡುತ್ತಿದ್ದಾರೆ. ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಭೂ ವಿವಾದ, ಆರ್ಥಿಕ ವೈಷಮ್ಯ, ಹನಿ ಟ್ರ್ಯಾಪ್ ಸೇರಿದಂತೆ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನವೆಂಬರ್ 29 ರಂದು ವರ್ತೂರು ಪ್ರಕಾಶ್ ಹಾಗೂ ಅವರ ಚಾಲನನ್ನು ದುಷ್ಕರ್ಮಿಗಳು ಅಪಹರಿಸಿ ಚಿತ್ರಹಿಂಸೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com