ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ: ಸ್ಟಾಫ್ ನರ್ಸ್ ಸಾವು

ಗರ್ಭಿಣಿ ಮಹಿಳೆಯನ್ನು ಕರೆ ತರಲು ತೆರಳುತ್ತಿದ್ದ 108 ಆ್ಯಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಸ್ಟಾಫ್ ನರ್ಸ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸುಗೂರ ತಾಲೂಕಿನ ಸರ್ಜಾಪುರ ಬಳಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಯಚೂರು: ಗರ್ಭಿಣಿ ಮಹಿಳೆಯನ್ನು ಕರೆ ತರಲು ತೆರಳುತ್ತಿದ್ದ 108 ಆ್ಯಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಸ್ಟಾಫ್ ನರ್ಸ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸುಗೂರ ತಾಲೂಕಿನ ಸರ್ಜಾಪುರ ಬಳಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.

ಸಂಗಮೇಶ ಬಳಿಗಾರ (30 ವರ್ಷ) ಮೃತ ಸ್ಟಾಫ್ ನರ್ಸ್ ಎಂದು ಗುರುತಿಸಲಾಗಿದ್ದು, ಘಟನೆಯಿಂದ ಅಂಬ್ಯುಲೆನ್ಸ್ ಚಾಲಕ ಹನುಮೇಶ್ ಗೆ ಗಾಯಗಳಾಗಿದ್ದು, ಲಿಂಗಸುಗೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಯಾವುದೇ ಸೂಚನೆ ನೀಡದೇ ಇಂಡಿಕೇಟರ್ ಹಾಕದೆ ನಿಲ್ಲಿಸಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪಾಮನ ಕೆಲ್ಲೂರಿನಲ್ಲಿನ ಗರ್ಭಿಣಿ ಮಹಿಳೆಯನ್ನು ಕರೆತರಲು ಲಿಂಗಸುಗೂರಿನಿಂದ ಆ್ಯಂಬುಲೆನ್ಸ್ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಆಂಧ್ರ ಮೂಲದ ಲಾರಿ ಚಾಲಕ ಬೇಜವಾಬ್ದಾರಿಯಿಂದ ಲಾರಿಯನ್ನ ಇಂಡಿಕೇಟರ್ ಸಹ ಹಾಕದೇ ರಸ್ತೆಪಕ್ಕ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಲಿಂಗಸುಗೂರಿನಿಂದ ಪಾಮನಕಲ್ಲೂರಿಗೆ ರೋಗಿ ಕರೆತರಲು ಬರುವಾಗ ಘಟನೆ ನಡೆದಿದೆ. ಗರ್ಭಿಣಿಯನ್ನ ಕರೆತರುವ ಅವಸರದಲ್ಲಿ ಹೊರಟಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದ ಘಟನೆ ನಡೆದಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com