ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳು ನಿಧನ

ಖ್ಯಾತ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳು ಗುರುವಾರ ನಿಧನರಾಗಿದ್ದು, ಅವರಿಗೆ 67 ವರ್ಷ ವಯಸ್ಸಾಗಿತ್ತು.

Published: 04th December 2020 12:49 PM  |   Last Updated: 04th December 2020 12:49 PM   |  A+A-


sripada hegde

ಶ್ರೀಪಾದ ಹೆಗಡೆ ಹಡಿನಬಾಳು

Posted By : Srinivasamurthy VN
Source : Online Desk

ಕಾರವಾರ: ಖ್ಯಾತ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳು ಗುರುವಾರ ನಿಧನರಾಗಿದ್ದು, ಅವರಿಗೆ 67 ವರ್ಷ ವಯಸ್ಸಾಗಿತ್ತು.

ಉಡುಪಿಯ ಹಡಿನಬಾಳು ಗ್ರಾಮದ ತಮ್ಮ ನಿವಾಸದಲ್ಲಿ ಶ್ರೀಪಾದ ಹೆಗಡೆ ಅವರು ಕೊನೆಯುಸಿರೆಳೆದಿದ್ದಾರೆ. ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಶ್ರೀಪಾದ ಹೆಗಡೆ ಅವರು ಚೇತರಿಸಿಕೊಂಡಿದ್ದರು. ಆದರೆ ಪುನಃ ಅನಾರೋಗ್ಯ ಕಾಣಿಸಿಕೊಂಡ ಕಾರಣ ಉಡುಪಿಯ ಆಸ್ಪತ್ರೆಗೆ  ಕರೆದುಕೊಂಡು ಹೋಗಲಾಗಿತ್ತು. ಇದೀಗ ಶ್ರೀಪಾದ ಅವರು ತಮ್ಮ ನಿವಾಸದಲ್ಲೇ ನಿಧನರಾಗಿದ್ದಾರೆ.

ಇವರು ರಾಜ್ಯದ ಎಲ್ಲಾ ಪ್ರಖ್ಯಾತ ಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಪಾತ್ರ ಮಾಡುತ್ತಿದ್ದರು. ಇಡುಗುಂಜಿ ಮಹಾಗಣಪತಿ ಮೇಳದಲ್ಲಿ ಮೂಲ ಕಲಾವಿದರಾಗಿದ್ದರು.
 

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp